ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ:ರಾಗಿ ತೊಗರಿ,ಭತ್ತಕ್ಕೆ ನೀಡಿರುವ ಬೆಂಬಲ ಬೆಲೆಯಂತೆ ತರಕಾರಿ ಬೆಳೆಗಳಿಗೂ ಬೆಂಬಲ ಬೆಲೆ ಘೋಷಿಸಬೇಕು.
ಕೋಲಾರ: ಜಿಲ್ಲೆಯಲ್ಲಿ ಕೃಷಿ ಆದಾರಿತ ಕೈಗಾರಿಕೆಗಳನ್ನು ತೆರಯಬೇಕು, ರಾಗಿ ತೊಗರಿ,ಭತ್ತಕ್ಕೆ ನೀಡಿರುವ ಬೆಂಬಲ ಬೆಲೆಯಂತೆ ತರಕಾರಿ ಬೆಳೆಗಳಿಗೂ ಬೆಂಬಲ ಬೆಲೆ ಘೋಷಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಕೃಷಿ ಆದಾರಿತ ಮಾವು, ರೇಷ್ಮೆ, ತರಕಾರಿ, ಹೂ.ಬೆಳೆಗಳ ಸಂಸ್ಕರಣ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು, ಜೊತೆಗೆ ಹಾಲಿನ ಪ್ರೋತ್ಸಾಹದನ ಹೆಚ್ಚಿಸಿ, ಹಾಲಿನ ಉತ್ಪಾದನೆ ಹೆಚ್ಚಿಸುವಂತೆ ಕ್ರಮ ಕೈಗೊಳ್ಳಬೇಕು ಜಿಲ್ಲೆಗೆ ವಿಶೇಷ ವಿದರ್ಭ ಪ್ಯಾಕೇಜ್ನ್ನು ಬಜೆಟ್ನಲ್ಲಿ ಘೋಷಿಸಬೇಕೆಂದು ರೈತ ಸಂಘದಿಂದ ಪಲ್ಲವಿ ವೃತ್ತದಲ್ಲಿ ಉಚಿತ ತರಕಾರಿಗಳನ್ನು ಹಂಚುವ ಮೂಲಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಯಿತು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಶಾಶ್ವತ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೆರೆಗಳ ಹೂಳನ್ನು ತೆಗೆದು ಕೆರೆಗಳ ಸಂಪೂರ್ಣ ಒತ್ತುವರಿಯನ್ನು ತೆರವುಗೊಳಿಸಿ ರಾಜ ಕಾಲುವೆಗಳನ್ನು ದುರಸ್ಥಿಗೊಳಿಸಬೇಕು. ಕೃಷಿ ಆದಾರಿತ ಮಾವು, ರೇಷ್ಮೆ, ತರಕಾರಿ, ಹೂ.ಬೆಳೆಗಳ ಸಂಸ್ಕರಣ ಘಟಕಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಲ್ಲಾ ಎಪಿಎಂಸಿ ಮಾರುಕಟ್ಟೆಗಳನ್ನು ಉನ್ನತ ದರ್ಜೆಗೆ ಏರಿಸಲು ಅನುದಾನ ನೀಡಬೇಕು. ಮಾವು ಮತ್ತು ತರಕಾರಿ ಹೂ. ಬೆಳೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಸ್ಥಾಪಿಸಿ ಕೃಷಿ ಅಧಾರಿತ ಕೈಗಾರಿಕೆಗಳ ಸ್ಥಾಪಿಸಲು ಜಿಲ್ಲೆಗೆ ಹೆಚ್ಚು ಒತ್ತು ನೀಡಬೇಕು. ರೇಷ್ಮೆ ಆಮುದು ಶುಲ್ಕ ಹೆಚ್ಚಳ ಮಾಡಿ ಬಸವರಾಜು ವರಧಿಯಂತೆ ್ತ ಪ್ರೋತ್ಸಾಹಧನವನ್ನು ನೀಡಬೇಕು. ಮತ್ತು ಕೆ.ಎಸ್.ಎಂ.ಬಿ. ಮೂಲಕ ಕೆ.ಜಿ.ಗೂಡಿಗೆ ರೂ. 350 ಕಡಿಮೆ ಬೀಳದಂತೆ ಖರೀದಿ ಮಾಡಬೇಕು. ಹೈನುಗಾರಿಕೆಯೇ ಜೀವನಾಡಿಯಾಗಿದ್ದು, ಹಾಲಿನ ಪ್ರೋತ್ಸಾಹದನ ಹೆಚ್ಚಿಸಿ, ಹಾಲಿನ ಉತ್ಪಾದನೆ ಹೆಚ್ಚಿಸುವಂತೆ ಕ್ರಮ ಕೈಗೊಳ್ಳಬೇಕು ಜೊತೆಗೆ ಕೃಷಿ ವiತ್ತು ತೋಟಗಾರಿಕೆ ಇಲಾಖೆಯಿಂದ ನೀಡುವ ಬಿತ್ತನೆ ಬೀಜ ಉತ್ಕøಷ್ಟ ಮಟ್ಟದಲ್ಲಿ ನೀಡಿ ಭೂಮಿಗೆ ಬೇಕಾದ ಲಘು ಪೋಷಕಾಂಶಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು, ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೆ ಬಿಡುಗಡೆಯಾಗಿದ್ದ ಅನುದಾನವನ್ನು ವಾಪಸ್ಸು ಪಡೆದಿದ್ದು, ಮತ್ತೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಜಿಲ್ಲೆಯ ಜನಪ್ರತಿನಿದಿಗಳು ಇದ್ದು ಇಲ್ಲದಂತಾಗಿದೆ. ಉಸ್ತುವಾರಿ ಸಚಿವರಾದರೆ ಮುಳಬಾಗಿಲಿಗೆ ಮಾತ್ರ ಸೀಮಿತರಾಗಿದ್ದಾರೆ. ಜಿಲ್ಲೆಯ ಬಗ್ಗೆ ಸದನದಲ್ಲಿ ದ್ವನಿ ಎತ್ತಿ ಜಿಲ್ಲೆಗೆ ಸ್ವಾಮಿನಾಥನ್ ವರದಿ ಜಾರಿ ಮಾಡಬೇಕು. ಮತ್ತು ತರಕಾರಿ ಬೆಳೆಗಳಿಗೆ ಮತ್ತು ಟೋಮೋಟೋ ಬರುತ್ತಿರುವ ನಾನಾ ರೀತಿಯ ಮಾರಕ ವೈರಸ್ ಹೂಜಿ ನೋಣಗಳು ಮತ್ತು, ಕೀಟಬಾದೆಗಳಿಗೆ ಔಷದಿ ಕಂಡುಹಿಡಿಯಲು ಸೂಕ್ತ ವಿಜ್ಞಾನಿಗಳ ತಂಡ ರಚಿಸಬೇಕು, ರೈತರ ಮಕ್ಕಳು ವ್ಯವಸಾಯವನ್ನು ಅವಲಂಭಿಸಲು ಪೂರಕ ವಾತಾವರಣ ನಿರ್ಮಿಸಲು ಕುರಿ,ಕೋಳಿ, ಹಂದಿ,ಹಸು, ಮೊಲ, ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಸಾಲ ಸಿಗುವಂತೆ ವ್ಯವಸ್ಥೆ ಮಡಿ ಸಾವಯವ ಮತ್ತು ಶೂನ್ಯ ಬಂಡವಾಳದ ಕೃಷಿಗೆ ಜಿಲ್ಲೆಯ 10 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಹೆಚ್ಚಿನ ಒತ್ತು ನೀಡಿ ಬರಪೀಡಿತ ಜಿಲ್ಲೆಯ ರೈತರ ನೆರವಿಗೆ ನಿಲ್ಲಲು ಈ ಬಜೆಟ್ನಲ್ಲಿ ಹೆಚ್ಚಿನ ಅನುದಾನ ನೀಡಬೇಕೆಂದು ಅಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಶೋಬಿತರವರು ಒಳ್ಳೆಯ ಹೋರಾಟ ಮಾಡ್ತಿದ್ದೀರಾ ಒಳ್ಳೆಯದಾಗಲಿ, ನಿಮ್ಮ ಈ ಮನವಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸುವ ಭರವಸೆ ನೀಡಿದರು
ಈ ಸಭೆಯಲ್ಲಿ ಜಿಲ್ಲಾ ಸಂಚಾಲಕ ಕೆ,ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಅನುಶ್ರೀ, ನಳಿನಿ.ವಿ, ವಕ್ಕಲೇರಿ ಹನುಮಯ್ಯ, ಈಕಂಬಳ್ಳಿ ಮಂಜುನಾಥ್ವಡ್ಡಹಳ್ಳಿ ಮಂಜುನಾಥ್, ತೆರ್ನಹಳ್ಳಿ ಆಂಜಿನಪ್ಪ , ಸುಧಾಕರ್, ವಿನೋದ್, ಜಗದೀಶ್,ಸಾಗರ್, ರಂಜಿತ್, ಸುಪ್ರೀಂ ಚಲ, ಪುತ್ತೇರಿ ರಾಜು, ಐತಂಡಹಳ್ಳಿ ಮಂಜುನಾಥ್, ಅಂಬರೀಶ್, ರವಿ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಆಸ್ವತಪ್ಪ, ಕೂವಣ್ಣ, ರವರಣಪ್ಪ, ಮತ್ತಿತರಿದ್ದರು.