ಕೋಲಾರದಲ್ಲಿ ನೀರಿಗೆ ಅಭಾವ ಇದ್ದರೂ, ಸರ್ಕಾರದಿಂದ ಬರುವ ಅನುದಾನದಲ್ಲಿ ಕೊರತೆ ಇಲ್ಲ – ಎ.ಸಿ.ಬಿ ಪುರುಷೋತ್ತಮ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರದಲ್ಲಿ ನೀರಿಗೆ ಅಭಾವ ಇದ್ದರೂ, ಸರ್ಕಾರದಿಂದ ಬರುವ ಅನುದಾನದಲ್ಲಿ ಕೊರತೆ ಇಲ್ಲ – ಎ.ಸಿ.ಬಿ ಪುರುಷೋತ್ತಮ್
ಕೋಲಾರ: ಕೋಲಾರದಲ್ಲಿ ನೀರಿಗೆ ಅಭಾವ ಇದ್ದರೂ, ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆಯಾಗುತ್ತಿರುವ ಅನುದಾನದಲ್ಲಿ ಕೊರತೆ ಇಲ್ಲ, ಆದರೂ ಹಣದ ಸಮರ್ಪಕ ಬಳಕೆ ಆಗುತ್ತಿಲ್ಲ ಎಂದು ಎ.ಸಿ.ಬಿ ಪುರುಷೋತ್ತಮ್ ಅವರು ತಿಳಿಸಿದರು.
 ಇಂದು ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ಭ್ರಷ್ಟಾಚಾರ ನಿಗ್ರಹದಳ ಕೋಲಾರ ಇವರ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಸಭೆ ಮತ್ತು ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. 
     ಜಿಲ್ಲೆಯಲ್ಲಿ ಎಲ್ಲಾ ಪಂಚಾಯಿತಿಗಳಿಗೆ ಸಾಕಷ್ಟು ಹಣ ಬಿಡುಗಡೆಯಾಗಿದ್ದು ಯಾವುದೇ ವರದಿ, ದಾಖಲೆಗಳಿಲ್ಲ. ಪಂಚಾಯಿತಿಯ ಸದಸ್ಯರು ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
  ಕೋಲಾರದಲ್ಲಿ 574 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಮೂಲ ಕಾರಣ ಜಿಲ್ಲೆಯಲ್ಲಿ ಹೆಚ್ಚು ಅಕ್ಷರಸ್ಥರು ಹೊರ ಹೊಮ್ಮುತ್ತಿದ್ದಾರೆ. ಆದರೆ ಇನ್ನೂ ಪೂರ್ಣವಾಗಿ ಜನರಿಗೆ ಎಸಿಬಿ ಬಗ್ಗೆ, ಕಛೇರಿ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗುತ್ತಿಲ,್ಲ ಅದಕ್ಕೆ ನಾವೇ ಸೂಕ್ತ ಹೂಣೆಗಾರಿಕೆ ವಹಿಸಬೇಕಾಗುತ್ತದೆ. ನಾವು ಜನರಿಗೆ ಸದಾ ಸಂಪರ್ಕದಲ್ಲಿರಬೇಕು. ಮುಂದಿನ ದಿನಗಳಲ್ಲಿ  ಭ್ರಷ್ಟಾಚಾರ ನಿಯಂತ್ರಣಗೊಳ್ಳಬೇಕು. ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ನೀಡಬೇಕಾದ ಮಾಹಿತಿಯನ್ನು ಸರಿಯಾಗಿ ನೀಡಬೇಕು ಹಾಗೂ ಕಛೇರಿ ಕೆಲಸಕ್ಕಾಗಿ ಅಲೆದಾಡಿಸಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ ನಾಗವೇಣಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು ಸೇರಿದಂತೆ  ಗ್ರಾಮ ಪಂಚಾಯಿತಿಗಳ ಸದಸ್ಯರು ಉಪಸ್ಥಿತರಿದ್ದರು.