ಕೋಲಾರದಲ್ಲಿ ಕರ್ನಾಟಕ ಜನಸೇನೆ ಸಂಘಟನೆಯಿಂದ ಜಾಗೃತಿ ಜಾಥಾ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರದಲ್ಲಿ ಕರ್ನಾಟಕ ಜನಸೇನೆ ಸಂಘಟನೆಯಿಂದ ಜಾಗೃತಿ ಜಾಥಾ

ಕೋಲಾರ: ಕರ್ನಾಟಕ ಜನಸೇನೆ ಸಂಘಟನೆಯು ಕೋಲಾರದಲ್ಲಿ ಋಣಮುಕ್ತ ಕಾಯ್ದೆ ಕುರಿತಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಥಾವನ್ನು ನಡೆಸಿ ನಂತರ ಕೋಲಾಋ ಉಪವಿಭಾಗಾಧಿಕಾರಿಗಳಿಗೆ ಸಾರ್ವಜನಿಕರ ಪರವಾಗಿ ಬೇಡಿಕೆಗಳ ಮನವಿ ಪತ್ರವನ್ನು ನೀಡಿತು.ಕರ್ನಾಟಕ ಜನಸೇನೆ ಸಂಘಟನೆಯು ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಅನೇಕ ಜನಪರ ಕಾರ್ಯಕ್ರಮಗಳನ್ನು ಮತ್ತು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಕರ್ನಾಟಕ ಋಣಮುಕ್ತ ಪರಿಹಾರ ವಿದೇಯಕ ಕಾಯ್ದೆ 2018 (ಕರ್ನಾಟಕ ಆಕ್ಟ್ ಜುಲೈ 26-2019)ಗೆ ಮತ್ತು ಈ ವಿದೇಯಕಕ್ಕೆ ಅಂಕಿತ ಹಾಕಿರುವ ಮಾನ್ಯ ರಾಷ್ಟ್ರಪತಿ ರಾಮನಾಥಕೋವಿಂದ್‍ರವರಿಗೂ ಧನ್ಯವಾಧಗಳನ್ನು ಅರ್ಪಿಸಿದೆ.

ಯಾವುದೇ ವ್ಯಕ್ತಿ ಅಥವಾ ಸಂಸ್ತೆ ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ ಅನುಮತಿ ಪಡೆದು ನಡೆಸುತ್ತಿರುವ ವ್ಯವಹಾರಗಳ ಬ್ಯಾಂಕುಗಳು ಮತ್ತು ಸಂಸ್ಥೆಗಳನ್ನು ಹೊರತುಪಡಿಸಿ ಸಾರ್ವಜನಿಕರಿಂದ ಗಿರಿವಿ ಅಥವಾ ಅಡವಿಟ್ಟಿರುವ ಯಾವುದೇ ಆಭರಣ/ಒಡವೆ, ಚಿರಾಸ್ತಿ/ಸ್ತಿರಾಸ್ತಿಯ ಭೂಮಿ/ಜಮೀನುಗಳು, ಕೈಸಾಳಗಳು-ಚೀಲ ವ್ಯವಹಾರಗಳು, ಮೀಟರ್ ಬಡ್ಡಿ ದಂಧೆ ಮುಂತಾದ ಸಾಳಗಳಿಗೆ ಸಂಬಂದಿಸಿದಂತೆ ಜುಲೈ 26-2019 ರಿಂದ ಜಾರಿಗೆ ತಂದಿರುವ ಋಣಮುಕ್ತ ಕಾಯ್ದೆಯಡಿಯಲ್ಲಿ ಅವರನ್ನು ಸಾಲ ಸೂಲಗಳಿಂದ ಮುಕ್ತಗೊಳಿಸಿ ನ್ಯಾಯ ಒದಗಿಸಿಕೊಡಲು ತಮ್ಮ ಮುಂದೆ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘಟನೆಯು ಕೋರುತ್ತಿದೆ.

ಸಂಘಟನೆಯು ನೀಡಿದ ಬೇಡಿಕೆಗಳು:

ಋಣಮುಕ್ತ ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಅರ್ಜಿಗಳನ್ನು ಉಚಿತವಾಗಿ ಸರ್ಕಾರವೇ ನೀಡಬೇಕು. ಋಣಮುಕ್ತ ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಜಿಲ್ಲೆಯ ಪ್ರತಿ ತಾಲ್ಲೂಕಿನ ತಹಸೀಲ್ದಾರ್ ರವರ ಕಛೇರಿಯಲ್ಲಿ ಪ್ರತ್ಯೇಕ ಅರ್ಜಿ ಸ್ವೀಕೃತಿ ಕೇಂದ್ರಗಳನ್ನು ಸ್ಥಾಪಿಸಿ ಅವಿರಗೆ ಅರಿವು ನೀಡಬೇಕು. ಋಣಮುಕ್ತ ಕಾಯ್ದೆಗೆ ಸಂಬಂದಿಸಿದಂತೆ ಸರ್ಕಾರ ನಿಗದಿ ಪಡಿಸಿರುವ 90 ದಿನಗಳಲ್ಲಿ ಜಾರಿಗೆ ಬಂದ ದಿನದಿಂದ 25 ದಿನಗಳು ಕಳೆದು ಹೋದಿದು ಇದನ್ನು 90 ದಿನಗಳಿಂದ 120 ದಿನಗಳಿಗೆ ಮೀಸಲಿರಿಸಬೇಕು. ಋಣಮುಕ್ತ ಕಾಯ್ದೆಗೆ ಸಂಬಂಧಿಸಿದಂತೆ 120 ದಿನಗಳ ಕಾಲ ಜಿಲ್ಲೆಯ ಎಲ್ಲಾ ಸರ್ಕಾರಿ ಕಛೇರಿಗಳ ಜಾಹೀರಾತು ಫಲಕಗಳಲ್ಲಿ ಅಂಶಗಳನ್ನು ಪ್ರದರ್ಶಿಸಬೇಕು.

ಋಣಮುಕ್ತ ಕಾಯೆಯಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರು ತಹಶೀಲ್ದಾರ್ / ಪಂಚಾಯಿತಿ ವ್ಯಾಪ್ತಿಯಲ್ಲಿ ಸಲ್ಲಿಸುವ ಆದಾಯ ಪ್ರಮಾಣ ಪತ್ರ, ಸಣ್ಣ ರೈತರ ಪ್ರಮಾಣ ಪತ್ರ ಮುಂತಾದ ಅಗತ್ಯ ದಾಖಲೆಗಳಿಗಾಗಿ ಸಲ್ಲಿಸುವ ಅರ್ಜಿಗಳನ್ನು / ದಾಖಲೆಗಳನ್ನು ಪರಿಶೀಲಿಸಿ 2 ದಿನಗಳೊಳಗಾಗಿ ಆದಾಯ ದೃಢೀಕರಿಣ ಪತ್ರವನ್ನು ನೀಡುವಂತಾಗಬೇಕು. ಗಿರಿವಿ ಇಟ್ಟುಕೊಳ್ಳುವ ಗಿರಿವಿದಾರರು ಅಮಾಯಕ ಜನರಿಗೆ ಅರಿವಾಗದಂತೆ ಸಣ್ಣ ಬಣ್ಣದ ರಶೀದಿಗಳನ್ನು ನೀಡಿದ್ದು, ಸರ್ಕಾರ ಗಿರವಿ ಅಂಗಡಿಗಳವರು ನೀಡಿರುವ ರಶೀದಿಯನ್ನು ಪರಿಗಣಿಸಿ ಅರ್ಜಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು.

ಋಣಮುಕ್ತ ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸುವ ಅರ್ಜಿದಾರರಿಗೆ ಸಾಲ ನೀಡಿರುವವರಿಂದ ಬೆದರಿಕೆಗಳು ಬಂದಲ್ಲಿ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಿ ಅರ್ಜಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು. ಕೈಸಾಲ ಅಂದರೆ (ತಮ್ಮ ಬ್ಯಾಂಕಿನ ಚೆಕ್ಕುಗಳು ನೀಡಿರುವುದು, ಬಡ್ಡಿಗೆ ನೆರೆ ಅಥವಾ ಸಂಬಂಧಿಕರಿಂದ ಪಡೆದುಕೊಂಡಿರುವವರು) ಸರ್ಕಾರಕ್ಕೆ ಯಾವುದೇ ದಾಖಲೆಗಳನ್ನು ನೀಡಲಾಗುವುದಿಲ್ಲ. ಹಾಗಾಗಿ ಅರ್ಜಿದಾರರು ನೀಡಿರುವ ಋಣಮುಕ್ತ ಕಾಯ್ದೆ ಅರ್ಜಿಯನ್ನೇ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಅರ್ಜಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು.ಜಾಗೃತಿ ಜಾಥಾದಲ್ಲಿ ದಲಿತ್ ನಾರಾಯಣಸ್ವಾಮಿ, ಹಾರೋಹಳ್ಳಿ ನಾರಾಯಣಸ್ವಾಮಿ, ಎಂ.ಆರ್. ಚೇತನ್ ಬಾಬು, ಖಾದ್ರಿಪುರ ಬಾಬು, ದಿಂಬಚಾಮನಹಳ್ಳಿ ಅಂಬರೀಶ್, ಎಂ. ಮಂಜುನಾಥ್, ಮೋಚಿಪಾಳ್ಯ ನಾಗೇಶ್, ಪಿ.ಸಿ. ಬಡಾವಣೆ ಸಂಜಯ್, ನಾಗೇಂದ್ರ, ಮಾಹಿತಿ ಮಂಜು ಮುಂತಾದವರು ಭಾಗವಹಿಸಿದ್ದರು.