ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಕೋಲಾರ ಸಾಕ್ಷರತಾ ಕಾರ್ಯಕ್ರಮದ ಯೋಜನೆಯಡಿ ಬೋಧಕರಿಗೆ ತರಭೇತಿ ಕಾರ್ಯಕ್ರಮ
ಕೋಲಾರ,ಡಿ.10: ಜಿಲ್ಲಾ ಮತ್ತು ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಕೋಲಾರ ಮತ್ತು ಶ್ರೀ ಸರಸ್ವತಿ ಮಹಿಳಾ ಮಂಡಳಿ ಕೋಲಾರ ಸಂಸ್ಥೆಯ ಸಹಯೋಗದೊಂದಿಗೆ ಸಾಕ್ಷರತಾ ಕಾರ್ಯಕ್ರಮದ ಯೋಜನೆಯಡಿ ಬೋಧಕರಿಗೆ ತರಭೇತಿ ಕಾರ್ಯಕ್ರಮವನ್ನು ದಿನಾಂಕ: 02/12/2019 ರಂದು ಬೆಳಗ್ಗೆ 10.30 ಗಂಟೆಗೆ ತಾಲ್ಲೂಕು ಪಂಚಾಯಿತಿ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಎನ್.ವಿ.ಬಾಬು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಬಹುಸಂಖ್ಮಾತ ಅನಕ್ಷರತೆಯಿಂದಾಗಿ ರಾಜ್ಯದಲ್ಲಿನ ನಗರಪ್ರದೇಶಗಳು ಮತ್ತು ಗ್ರಾಮಗಳು ಹಿಂದುಳಿದಿದ್ದು, ಸದರಿ ನಗರ ಮತ್ತು ಗ್ರಾಮಗಳಲ್ಲಿರುವ ಅನಕ್ಷರಸ್ಥರನ್ನು ಸಾಕ್ಷರಸ್ಥರಾದಾಗ ಮಾತ್ರ ನಗರಪ್ರದೇಶಗಳು, ಗ್ರಾಮಗಳು, ರಾಜ್ಯ ಮತ್ತು ದೇಶದ ಅಭಿವೃದ್ದಿಗೆ ಸಹಾಯಕವಾಗಲಿದೆ ಎಂದು ತಿಳಿಸಿದರು.
ಸಾಕ್ಷರತಾ ಕಾರ್ಯಕ್ರಮ ಸಹಾಯಕ ಡಿ.ಆರ್ ರಾಜಪ್ಪ ಮಾತನಾಡುತ್ತಾ, ರಾಜ್ಯ ಮತ್ತು ದೇಶದ ಅಭಿವೃದ್ದಿ ಕಾರ್ಯಗಳ ಪೂರ್ಣ ಮಾಹಿತಿಯು ಎಲ್ಲರಿಗೂ ತಿಳಿಯುವಂತಾಗಲು ನಗರ ಪ್ರದೇಶಗಳಲ್ಲಿ ವಾಸವಾಗಿರುವ ವಿದ್ಯಾವಂತರು ಸ್ವಯಂ ಸೇವಕರಾಗಿ ಸಾಕ್ಷರ ಭಾರತ್ ಕಾರ್ಯಕ್ರಮದಡಿಯಲ್ಲಿ ಅವರ ಮನೆ ಮತ್ತು ನೆರೆಹೊರೆಯಲ್ಲಿರುವ ಅನಕ್ಷರಸ್ಥರಿಗೆ ಓದು ಬರಹ ಕಲಿಸುವ ಮೂಲಕ ಸಾಕ್ಷರರನ್ನಾಗಿಸುವ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೆಕೇಂದು ಎಂದು ತಿಳಿಸಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಜಿ.ಎಮ್ ಗಂಗಪ್ಪ ಮಾತನಾಡುತ್ತಾ, ಸಾಕ್ಷರತೆ ಮತ್ತು ಶಿಕ್ಷಣದ ಮಟ್ಟವು ಸಮಾಜವು ಸಾಧಿಸಿದ ಅಭಿವೃದ್ದಿಯ ಮಟ್ಟಕ್ಕೆ ಮೂಲ ಸೂಚಕಗಳಾಗಿವೆ. ಸಾಕ್ಷರತೆಯ ಹರಡುವಿಕೆಯು ಆಧುನೀಕರಣ, ನಗರೀಕರಣ, ಕೈಗಾರೀಕರಣ, ಸಂವಹನ ಮತ್ತು ವಾಣಿಜ್ಯದಂತಹ ಆಧುನಿಕ ನಾಗರಿಕತೆಯ ಪ್ರಮುಖ ಗುಣಲಕ್ಷಣಗಳೊಂದಿಗೆ ಸಾಮಾನ್ಯವಾಗಿ ಸಂಬಂಧಿಸಿದ ವ್ಯಕ್ತಿಗಳ ಒಟ್ಟಾರೆ ಅಭಿವೃದ್ದಿಯಲ್ಲಿ ಸಾಕ್ಷರತೆಯು ಒಂದು ಪ್ರಮುಖ ಇನ್ಪುಟ್ನ್ನು ರೂಪಿಸುತ್ತದೆ. ಅವರ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕøತೀಕ ವಾತಾವರಣವನ್ನು ಉತ್ತಮವಾಗಿ ಗ್ರಹಿಸಲು ಮತ್ತು ಅದಕ್ಕೇ ಸೂಕ್ತವಾಗಿ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.
ನಗರಸಭಾ ಸದಸ್ಯ ಪ್ರವೀಣ್ಗೌಡ ಮಾತನಾಡುತ್ತಾ, ಉನ್ನತ ಮಟ್ಟದ ಶಿಕ್ಷಣ ಮತ್ತು ಸಾಕ್ಷರತೆಯು ಹೆಚ್ಚೀನ ಜಾಗೃತಿಗೆ ಕಾರಣವಾಗುತ್ತದೆ ಮತ್ತು ಆರ್ಥೀಕ ಮತ್ತು ಸಾಮಾಜಿಕ ಪರಿಸ್ಥಿತಿಗಳ ಸುಧಾರಣೆಗೆ ಸಹಕಾರಿಯಾಗುತ್ತದೆ ಮತ್ತು ಇದು ಜನಸಂಖ್ಯೆಯ ನಿಯಂತ್ರಣ, ಆರೋಗ್ಯ, ನೈರ್ಮಲ್ಯ, ಪರಿಸರ ನಾಶದ ನಿಯಂತ್ರಣ, ಸಮಾಜದ ದುರ್ಬಲ ವರ್ಗಗಳ ಉದ್ಯೋಗವಾಗಲಿ, ಅಭಿವೃದ್ದಿಯ ಪ್ರಯತ್ನದ ಪ್ರತಿಯೊಂದು ಅಂಶಗಳಲ್ಲೂ ಹೂಡಿಕೆಯ ಆದಾಯವನ್ನು ಹೆಚ್ಚಿಸುವ ಸಾಮಾಜಿಕ ಉನ್ನತಿಗಾಗಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಸಾಕ್ಷರತಾ ಸಂಯೋಜಕ ಆಶ್ವಥನಾರಾಯಣ, ಸರಸ್ವತಿ ಮಹಿಳಾ ಮಂಡಳಿಯ ಕಾರ್ಯದರ್ಶಿ ಸರಸ್ವತಮ್ಮ ಭಾಗವಹಿಸಿದ್ದರು.