ಕೋಲಾರ, ರೈತರು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಕವಾಗುವ (ಎಪಿಎಂಸಿ) ಕಾಯ್ದೆ 2017ರ ಸೆಕ್ಷನ್ 8 ನ್ನು ಯಾವುದೇ ತಿದ್ದುಪಡಿ ಮಾಡಬಾರದೆಂದು ರೈತಸಂಘದಿಂದ ಒತ್ತಾಯ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ಕೋಲಾರ, ರೈತರು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಕವಾಗುವ (ಎಪಿಎಂಸಿ) ಕಾಯ್ದೆ 2017ರ ಸೆಕ್ಷನ್ 8 ನ್ನು ಯಾವುದೇ ತಿದ್ದುಪಡಿ ಮಾಡಬಾರದೆಂದು ರೈತಸಂಘದಿಂದ ಒತ್ತಾಯ

 

 

 

 

ಕೋಲಾರ: ರೈತರು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರಕವಾಗುವ (ಎಪಿಎಂಸಿ) ಕಾಯ್ದೆ 2017ರ ಸೆಕ್ಷನ್ 8ಅನ್ನು ಯಾವುದೇ ತಿದ್ದುಪಡಿ ಮಾಡಬಾರದೆಂದು ರೈತಸಂಘದಿಂದ ಮಾನ್ಯ ಪ್ರಧಾನಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಧಿಕಾರಕ್ಕೆ ಬರುವಾಗ ರೈತರ ಹಸಿರುಶಾಲು ಧರಿಸಿ ರೈತರ ಮೇಲೆ ಪ್ರಮಾಣ ಮಾಡಿ, ರೈತರೇ ದೇಶದ ಬೆನ್ನೆಲುಬು. ರೈತರ ಸಮಸ್ಯೆಗಳಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲುತ್ತದೆ ಎಂಬ ಪ್ರಮಾಣ ಮಾಡಿದ ಮಾತು ಇಂದು ರೈತಕುಲಕ್ಕೆ ಮಾರಕವಾಗುವ ಕಾರ್ಪೊರೇಟ್ ಕಂಪನಿಗಳ ಬೆನ್ನೆಲುಬಾಗಿ ಅನ್ನದಾತನ ಬೆನ್ನನ್ನು ಮುರಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ದೇಶದಲ್ಲಿ ಕಾಯ್ದೆಯ ಪ್ರಕಾರ ರೈತರಿಗೆ 5 ಕಿ.ಲೋ ವ್ಯಾಪ್ತಿಯಲ್ಲಿ ಎ.ಪಿಎಂ.ಸಿ ಒದಿಸಬೇಕಾದರೆ 42 ಸಾವಿರ ಎ.ಪಿ.ಎಂಸಿಗಳಿರಬೇಕು ಆದರೆ ಇಂದು ಕೇವಲ 7 ಸಾವಿರ ಎ.ಪಿ.ಎಂಸಿಗಳಿವೆ. ರೈತರಿಗೆ ವಿಶಾಲ ಜಾಲವನ್ನು ನೀಡುವ ಬಗ್ಗೆ ಸರ್ಕಾರ ಸಮಾಲೋಚನೆ ಮಾಡಬೇಕು
ಪುರಾತನ ಕಾಲದಿಂದ ಕೃಷಿಯನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ರೈತಾಪಿವರ್ಗಕ್ಕೆ ಸರ್ಕಾರಗಳ ಅವೈಜ್ಞಾನಿಕ ನೀತಿಗಳು ರೈತಕುಲವನ್ನೇ ಸರ್ವನಾಶ ಮಾಡುತ್ತಿವೆ. ಪ್ರತಿಯೊಂದು ರೈತರ ಹೆಸರಿನಲ್ಲಿ ಲಕ್ಷ, ಕೋಟಿಗಳ ಲೆಕ್ಕದಲ್ಲಿ ಅನುದಾನಗಳನ್ನು ಬಿಡುಗಡೆ ಮಾಡಿ ಅದನ್ನು ನೇರವಾಗಿ ರೈತರ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಮನೆಬಾಗಿಲಿಗೆ ತಲುಪಿಸುವ ಪುಣ್ಯದ ಕೆಲಸಗಳು ಸರ್ಕಾರಗಳು ಮಾಡುತ್ತಿವೆ ಎಂದು ಕಿಡಿಕಾರಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ವಿಶ್ವವೇ ಕಣ್ಣಿಗೆ ಕಾಣದ ವೈರಸ್ ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿತುವ ಜೊತೆಗೆ ದೇಶಾದ್ಯಂತ ರೈತರು, ಕೃಷಿ ಕೂಲಿಕಾರ್ಮಿಕರು ಬದುಕು ಕಟ್ಟಿಕಕೊಳ್ಳಲು ಹರಸಾಹಸ ಪಡುತ್ತಿದ್ದರೆ ಸರ್ಕಾರಗಳು ಮಾತ್ರ ರೈತಕುಲವನ್ನೇ ನಾಶ ಮಾಡುವ ಆದೇಶಗಳಾದ ಭೂಸ್ವಾಧೀನ ಕಾಯ್ದೆ ಸಣ್ಣ ಬೀದಿ ವ್ಯಾಪಾರಿಗಳಿಗೆ ಮಾರಕವಾಗುವ ಮಾಲ್ ಪದ್ಧತಿಗಳು ಮತ್ತಿತರರ ನೂರಾರು ರೈತ ವಿರೋಧಿ ಕಾನೂನುಗಳಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಜೊತೆಗೆ ಈಗ ರೈತರ ಒಡನಾಡಿಯಾಗಿರುವ ಎಪಿಎಂಸಿಯ 2017ರ ಕಾಯ್ದೆಗೆ ಪ್ರಮುಖ ಅಂಶಗಳ ತಿದ್ದುಪಡಿಯನ್ನು ತಂದು ಸಂಪೂರ್ಣವಾಗಿ ದೇಶಾದ್ಯಂತ ಎಪಿಎಂಸಿಗಳನ್ನು ಸರ್ವನಾಶ ಮಾಡಿ ಅದನ್ನೇ ನಂಬಿರುವ ಕೋಟ್ಯಂತರ ರೈತರನ್ನು ಬೀದಿಗೆ ತಳ್ಳುವ ಕಾಯ್ದೆ ಜಾರಿಗೆ ತಂದು ಕಾರ್ಪೊರೇಟ್ ಕಂಪನಿಗಳು ಹಾಗೂ ವರ್ತಕರಿಗೆ ಅನುಕೂಲವಾಗಿಸಿ ರೈತರಿಗೆ ತೂಕ, ಗುಣಮಟ್ಟಕ್ಕೆ ತಕ್ಕ ಬೆಲೆ ಸಿಗದೆ ಕಾರ್ಪೊರೇಟ್ ಕಂಪನಿಗಳು ನಿರ್ಧಾರ ಮಾಡುವ ಬೆಲೆಗೆ ರೈತರು ತಮ್ಮ ಉತ್ಪನ್ನಗಳನ್ನು ನೀಡಬೇಕಾಗುವ ಪರಿಸ್ಥಿತಿ ಬರುತ್ತದೆ.
ರೈತರ ಮೇಲೆ ಸರ್ಕಾರಗಳಿಗೆ ಗೌರವ ಇದ್ದರೆ ಕೂಡಲೇ ಮಾನ್ಯ ಗೌರವಾನ್ವಿತ ಪ್ರಧಾನ ಮಂತ್ರಿಗಳು ದಿನಾಂಕ 14-5-2020ರಂದು 2017ರ ಎಪಿಎಂಸಿ ಕಾಯ್ದೆಯ ಪ್ರಮುಖ ಅಂಶಗಳಿಗೆ ತಿದ್ದುಪಡಿಗೆ ಮುಂದಾಗುವ ಮೊದಲು ದೇಶಾದ್ಯಂತ ಮುಖ್ಯಮಂತ್ರಿಗಳ, ಜಿಲ್ಲಾಧಿಕಾರಿಗಳ, ಕೃಷಿ ತಜ್ಞರ, ರೈತರೊಡನೆ ತಿದ್ದುಪಡಿಯಿಂದಾಗುವ ಅನಾನುಕೂಲಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಿ ವರದಿ ತರಿಸಿಕೊಂಡು ಆರ್ಥಿಕತೆಯನ್ನು ಸೃಷ್ಟಿ ಮಾಡುವ ಪ್ರಮುಖ ಐಎಎಸ್ ಅಧಿಕಾರಿಗಳ ಸಲಹೆ ಪಡೆದು ಮುಂದಿನ ಭವಿಷ್ಯದಲ್ಲಿ ಆಗುವ ಅನಾನುಕೂಲಗಳ ಬಗ್ಗೆ ಮುಂದಾಲೋಚನೆ ನಡೆಸಿ ಯಾವುದೇ ಕಾರಣಕ್ಕೂ ಕಾಯ್ದೆ ತಿದ್ದುಪಡಿಗೆ ಅವಕಾಶ ನೀಡದೆ ರೈತರ ಒಡನಾಡಿಯಾಗಿರುವ ಎಪಿಎಂಸಿಯನ್ನು ಉಳಿಸಿಕೊಡಬೇಕಿದ್ದು, ಇಲ್ಲವಾದರೆ ತರಕಾರಿಗಳ ಸಮೇತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಶಿವಸ್ವಾಮಿರವರು ಇದರ ಬಗ್ಗೆ ತಮ್ಮ ಗಮನಕ್ಕೆ ಬಂದಿಲ್ಲ. ನಿಮ್ಮ ಮನವಿಯನ್ನು ಮುಖ್ಯಮಂತ್ರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದೆಂದು ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ವಕ್ಕಲೇರಿ ಹನುಮಯ್ಯ, ಮುಂತಾದವರಿದ್ದರು.