ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ
ಕೋಲಾರ – ರಾಜ್ಯದ ಜನರ ಜಲ್ವಂತ ಸಮಸ್ಯೆಗಳನ್ನು ಮರೆತು ರೆಸಾರ್ಟ್ ರಾಜಕೀಯ ಮಾಡುತ್ತಿರುವ 224 ಶಾಸಕರನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ – ರೈತ ಸಂಘ

ಕೋಲಾರ: ಪವಿತ್ರವಾದ ವಿಧಾನಸೌಧದಲ್ಲಿ ಅಧಿಕಾರಕ್ಕಾಗಿ ಅಸಭ್ಯ, ಅವ್ಯಾಚ್ಯ ಶಬ್ದಗಳನ್ನು ಬಳಸಿ ಸಂವಿದಾನಕ್ಕೆ ದಕ್ಕೆ ತರುತ್ತಿರುವ ಹಾಗೂ ಬರ ಹಾಗೂ ರಾಜ್ಯದ ಜನರ ಜಲ್ವಂತ ಸಮಸ್ಯೆಗಳನ್ನು ಮರೆತು ರೆಸಾರ್ಟ್ ರಾಜಕೀಯ ಮಾಡುತ್ತಿರುವ 224 ಶಾಸಕರು ಶಾಸಕ ಸ್ಥಾನವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ರೈತ ಸಂಘದಿಂದ ಬೀದಿ ಹಂದಿಗಳಿಗೆ ರಾಜಕಾರಣಿಗಳ ಮುಖವಾಡ ದರಿಸಿ ಅಣುಕು ಹೋರಾಟ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು..
ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ರಾಜ್ಯದಲ್ಲಿ ಕಾನೂನು ಎಂಬುದು ಬಡವರಿಗೆ ಮಾತ್ರ ಸೀಮಿತವಾಗಿದೆ. ಬಹುಮತ ಸಾಬೀತು ಮಾಡಲು ಎರಡು ಬಾರಿ ಸರ್ಕಾರಕ್ಕೆ ಮಾನ್ಯ ಗೌರವಾನ್ವಿತ ರಾಜ್ಯಪಾಲರು ಆದೇಶ ನೀಡಿದ್ದರೂ ಅದನ್ನು ಲೆಕ್ಕಿಸದೇ ನಾವೇ ರಾಜ ನಾವೇ ಮಂತ್ರಿ ಎಂಬಂತೆ ಮೆರೆದು ಜನಸಾಮಾನ್ಯರ ಸಮಸ್ಯೆಗಳನ್ನು ಮರೆತು ಬ್ರೀಟಿಷ್ ಆಳ್ವಿಕೆಯ ಜೊತೆಗೆ ಲಕ್ಷಾಂತರ ಕೂಲಿಕಾರ್ಮಿಕರು ಬೆವರು ಸುರಿಸಿ ಕಟ್ಟಿದಂತಹ ವಿದಾನಸೌಧದಲ್ಲಿ ಸಾವಿರಾರು ಮಹಾನಿಯರು ಉತ್ತಮ ಆಡಳಿತಮಾಡಿ ಸಂವಿದಾನಕ್ಕೆ ಗೌರವ ತಂದುಕೊಟ್ಟು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಿ ಜನರ ಕಷ್ಟಗಳಿಗೆ ಸ್ವಂದಿಸುತ್ತಿದ್ದ ವಿದಾನಸೌಧ ಇಂದು ರಾಜಕಾರಣಿಗಳ ಸ್ವಂತ ಆಸ್ತಿಯಾಗಿದೆ 6.5 ಕೋಟಿ ಜನಸಂಖ್ಯೆಯ ಕಷ್ಟಗಳಿಗೆ ಸ್ಪಂದಿಸಲು ಶ್ರಮಿಸಬೇಕಾದ ರಾಜಕಾರಣಿಗಳು ಅಧಿಕಾರದ ಖುರ್ಚಿಗಾಗಿ ಮಾತುಬಾರದ ಮೂಕಪ್ರಾಣಿಗಳಂತೆ ಮಾದ್ಯಮಗಳ ಹಾಗೂ ಸಾರ್ವಜನಿಕರ ಮುಂದೆ ಕಚ್ಚಾಡಿ ಪವಿತ್ರವಾದ ವಿದಾನಸೌಧಕ್ಕೆ ಕಳಂಕ ತರುತ್ತಿದ್ದಾರೆ ಒಂದು ಕಡೆ ಬೀಕರವಾದ ಬರಗಾಲ ಮತ್ತೊಂದುಕಡೆ ರೈತರು ಬೆಳೆದಂತಹ ಬೆಳೆಗೆ ಬೆಲೆ ಇಲ್ಲದೆ ಬೀದಿಗೆ ಬೀಳುವ ಜೊತೆಗೆ ಜನಸಾಮಾನ್ಯರ ಶಿಕ್ಷಣ, ಆರೋಗ್ಯ ಜಿಲ್ಲೆಗಳಲ್ಲಿ ನೀರು ಮೇವಿಗಾಗಿ ಪರಿತಪಿಸುತ್ತಿದ್ದಾರೆ ಅತಂತ್ರ ಸ್ಥಿತಿಯಲ್ಲಿರುವ ಸರ್ಕಾರದ ವೈಪಲ್ಯವನ್ನು ಮನಗೊಂಡಿರುವ ಅಧಿಕಾರಿಗಳು ಜನಸಾಮಾನ್ಯರ ಕೆಲಸಗಳಿಗೆ ನಯಾಪೈಸೆ ಬೆಲೆ ಕೊಡದೆ ಹಿಟ್ಲರ್‍ದೋರಣೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಮಾತನಾಡಿ ಆಯ ಕ್ಷೇತ್ರಗಳಲ್ಲಿ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಲು ಜನರ ಮದ್ಯೆ ಇರಬೇಕಾದ ಶಾಸಕರು ಕುದುರೆ ವ್ಯಾಪಾರಕ್ಕೆ ಬಲಿಯಾಗಿ ರೆಸಾರ್ಟ ಹಾಗೂ ಹೋಟೆಲ್‍ಗಳಲ್ಲಿ ಐಷಾರಾಮಿ ಜೀವನಕ್ಕೆ ಹೊಂದಿಕೊಂಡಿದ್ದರೆ ಇತ್ತ ಮತ ಹಾಕಿದೆ ಮತಬಾಂದವರು ಸಮಸ್ಯೆಗಳ ಸುಳಿಗೆ ಸಿಲುಕಿ ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ ಆದ್ದರಿಂದ ಮಾನ್ಯ ರಾಜ್ಯಪಾಲರು 15 ದಿನಗಳಿಂದ ವಿದಾನಸೌಧದ ಪವಿತ್ರತೆಯನ್ನು ಅರಾಜುಗಿಟ್ಟು ಡ್ರಾಮಜೂನಿಯರ್ಸ್‍ತರ ನಾಟಕವಾಡಿ ಜನಸಾಮಾನ್ಯರ ಜೀವನದ ಜೊತೆ ಚಲ್ಲಾಟವಾಡುವ ಜೊತೆಗೆ ತಮ್ಮ ಆಧೇಶವನ್ನು ಉಲ್ಲಂಘನೆ ಮಾಡಿ ಕಾನೂನಿನ ಭಯವಿಲ್ಲದೆ ವಿದಾನಸೌಧ ಹಾಗೂ ಸರ್ಕಾರ ಅವರ ಮನೆಯ ಸ್ವಂತ ಆಸ್ತಯಂತೆ ವರ್ತನೆ ಮಾಡಿ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡುತ್ತಿರುವ ಸಮ್ಮಿಶ್ರ ಸರ್ಕಾರವನ್ನು ಕೂಡಲೆ ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿ ರಾಜ್ಯದ ಮರ್ಯಾದೆ ಮತ್ತು ವಿದಾನಸೌಧದ ಪವಿತ್ರತೆಯನ್ನು ಕಾಪಾಡಬೇಕೆಂದು ಮಾನ್ಯರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಈ ಹೋರಾಟದಲ್ಲಿ ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್, ಹುಲ್ಕೂರ್ ಹರೀಕುಮಾರ್, ಮಂಗಸಂದ್ರ ವೆಂಕಟೇಶ್, ತಿಮ್ಮಣ್ಣ, ಪಾರುಕ್‍ಪಾಷ, ಈಕಂಬಳ್ಳಿ ಮಂಜುನಾಥ್, ಉದಯ್‍ಕುಮಾರ್, ರಂಜಿತ್, ಸಾಗರ್, ತೆರ್ನಹಳ್ಳಿ ಆಂಜಿನಪ್ಪ, ಪುರುಷೋತ್ತಮ್, ನಾರಾಯಣ್, ಶಿವ, ಜುಬೇದ್‍ಪಾಷ, ಸುಪ್ರೀಂಚಲ, ಮುನಿನಾರಾಯಣಪ್ಪ, ಮುಂತಾದವರಿದ್ದರು.



