ಕೋಲಾರ:- ಮುಸ್ಲಿಂ, ಕ್ರೈಸ್ತರ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

ಕೋಲಾರ:- ಮುಸ್ಲಿಂ, ಕ್ರೈಸ್ತರ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ 

 

 

ಕೋಲಾರ:- ಮುಸ್ಲಿಂ, ಕ್ರೈಸ್ತರ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಈ ಪಕ್ಷಗಳಿಂದ ಅಲ್ಪಸಂಖ್ಯಾತರಿಗೆ ಆಗಿರುವ ಅನುಕೂಲ ಶೂನ್ಯ ಎಂದು ವಿದ್ಯಾರ್ಥಿನಿ ಅಮೂಲ್ಯ ತಿಳಿಸಿದರು.
ಸೋಮವಾರ ನಗರದ ಈದ್ಗಾ ಮೈದಾನದಲ್ಲಿ ಪೌರತ್ವ ಕಾಯ್ದೆ ಹೋರಾಟ ಸಮಿತಿಯಿಂದ ನಡೆದ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದಲೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೋಲೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಭಾರತ ಪ್ರಜಾಪ್ರಭುತ್ವ ದೇಶ. ಇಲ್ಲಿನ ಏಕ ಪಕ್ಷೀಯ ಅಧಿಕಾರವನ್ನು ಮೋದಿ, ಅಮಿತ್ ಶಾ ನಡೆಸುತ್ತಿದ್ದಾರೆ. ೩೭೦ ಕಾಯ್ದೆ ರದ್ದು, ಸಿಎಎ, ಎನ್‌ಆರ್‌ಸಿ ಕಾಯ್ದೆಗಳನ್ನು ತಿದ್ದುಪಡಿಸುವ ಮೂಲಕ ಧರ್ಮ, ಜಾತಿಗಳ ಆಧಾರದ ಮೇಲೆ ವಿಂಗಡಣೆ ಮಾಡುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲ ದೇಶದಲ್ಲಿ ಅಲ್ಲಿನ ಜನರಿಂದ ಕಿರುಕುಳಕ್ಕೆ ಒಳಗಾಗಿರುವವರಿಗೆ ದೇಶದ ಪೌರತ್ವ ನೀಡಲು ಮುಂದಾಗಿದೆ. ಆದರೆ ಶ್ರೀಲಂಕಾ, ಚೀನಾ ಇತರೆ ದೇಶಗಳಲ್ಲಿ ಯಾರು ಅಲ್ಲಿನ ಜನ ತೊಂದರೆಗೆ ಒಳಗಾಗಿಲ್ಲವೆ, ಸರ್ಕಾರದ ಅಧಿಕಾರಿಗಳು ಮನೆಯತ್ತಿರ ಬಂದು ಎನ್‌ಆರ್‌ಗೆ ದಾಖಲೆ ಕೇಳಿದರೆ ತೋರಿಸಲು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ವಿ.ಗೀತಾ ಮಾತನಾಡಿ, ಆರ್‌ಎಸ್‌ಎಸ್, ಭಜರಂಗದಳ, ಬಿಜೆಪಿ ಅವರು ದೇಶ ಪ್ರೇಮಿಗಳಲ್ಲ. ಮುಸ್ಲಿಮರು, ದಲಿತರು ದೇಶದ ನಿಜವಾದ ದೇಶಪ್ರೇಮಿಗಳು. ನಿಮ್ಮ ಹಾಗೆ ಸೆಂಟ್ರಲ್ ಜೈಲಿನಲ್ಲಿ ದೇಶದಲ್ಲಿ ಅಪಾಲಜಿ ಪತ್ರ ಬರೆದುಕೊಟ್ಟು ಬಂದವರಲ್ಲ ಎಂದು ಹೇಳಿದರು.
ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ?ಜಾರಿಯಾದಾಗ?ಸಾಕಷ್ಟು ಹೋರಾಟ?ನಡೆಯಿತು. ಆ ಹೋರಾಟದಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಸಿಎಎ, ಎನ್‌ಆರ್‌ಸಿ ದುಷ್ಪರಿಣಾಮದ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಡೆಸಬೇಕು ಎಂದು ಎಚ್ಚರಿಸಿದರು.
ಜಿಲ್ಲಾ ಅಂಜುಮಾನ್ ಇಸ್ಲಾಮಿಯಾ ಸಂಘಟನೆ ಅಧ್ಯಕ್ಷ ಜಮೀರ್ ಅಹಮ್ಮದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಟ್ರಸ್ಟ್ನ ಅಧ್ಯಕ್ಷೆ ಶಾಜೀದ್ ಬೇಗಂ, ಮಲ್ಲೇಶ್ವರಂ ಪ್ರಥಮ ದರ್ಜೆ ಕಾಲೇಜಿನ ಪ್ರಧ್ಯಾಪಕಿ ಪ್ರೊ.ವಾಜೂನಿಸ್ಸಾ, ಸಿಪಿಎಂ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಮೌಲ್ವಿಗಳಾದ ಕಹಲೆ ಉಲ್ಲಾಸಾಬ್, ಇಶ್ರ, ವಿದ್ಯಾರ್ಥಿ ಹುಮೆಹಾನಿ ಹಾಜರಿದ್ದರು.