ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಕೋಲಾರ : ಡಿಸೆಂಬರ್ 27ಕ್ಕೆ ದಳಸನೂರಿನಲ್ಲಿ ಗ್ರಾಮೀಣ ಕ್ರೀಡೋತ್ಸವ
ಕೋಲಾರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಜಾನಪದ ಕಲಾ ಸಂಘ, ಜನ್ನಘಟ್ಟ, ದಳಸನೂರು ಗ್ರಾಮ ಪಂಚಾಯಿತಿ ಇವರ ಸಂಯುಕ್ತಾಶ್ರಯದಲ್ಲಿ 2019-20ನೇ ಸಾಲಿನ ಗ್ರಾಮೀಣ ಕ್ರೀಡೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 27 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಆವರಣ ದಳಸನೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಂಜುಳ ರಾಮಚಂದ್ದೇಗೌಡ, ಮಾವು ನಿಗಮ ಮಂಡಳಿ ಮಾಜಿ ಅಧ್ಯಕ್ಷೆ ಗೋಪಾಲಕೃಷ್ಣ ಮತ್ತು ಮಾಸ್ತೇನಹಳ್ಳಿ, ನಂಬಿಗಾನಹಳ್ಳಿ, ಜೆ.ತಿಮ್ಮಸಂದ್ರ, ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಊರಿನ ಮುಖಂಡರು ಭಾಗವಹಿಸಲಿದ್ದಾರೆ.
10 ವರ್ಷದಿಂದ 60 ವರ್ಷದೊಳಗಿನ ಎಲ್ಲಾ ವಯೋಮಿತಿಯ ಪುರುಷರು, ಮಹಿಳೆಯರು ಗ್ರಾಮೀಣ ಕ್ರೀಡೋತ್ಸವ, ವಾಲಿಬಾಲ್, ಕಬ್ಬಡಿ, ಹಗ್ಗಜಗ್ಗಾಟ, ರಂಗೋಲಿ, ಕೋಕೋ, ಸೈಕಲ್ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ, ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ. ಆಸಕ್ತ ಕ್ರೀಡಾಪಟುಗಳು ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಲು ದೂರವಾಣಿ ಸಂಖ್ಯೆ 9741065377,9448962360, 8970217494 ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ದಳಸನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಬಾಬು ರವರು ತಿಳಿಸಿದ್ದಾರೆ.
ಕ್ರೀಡೋತ್ಸವ ಪ್ರಚಾರದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಜನ್ನಘಟ್ಟ ಕೃಷ್ಣಮೂರ್ತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಹರಿಪ್ರಸಾದ್, ವಳಗೇರನಹಳ್ಳಿ ಮಂಜುನಾಥರೆಡ್ಡಿ, ಹೊಸಹಳ್ಳಿ ರವಿ ಕುಮಾರ್, ಕೋನೇಟಿ ತಿಮ್ಮಸಂದ್ರ ರಮೇಶ್, ದಳಸನೂರು ವೀರಭದ್ರೇಗೌಡ ಗುಮ್ಮರೆಡ್ಡಿಪುರ ಚಂದ್ರಕಲಾ, ಮುನೀಂದ್ರ ಮುಂತಾದವರು ಇದ್ದರು.