ಕೋಲಾರ ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ಬೆಳೆಗಾರರನ್ನು ರಕ್ಷಿಸಿಸಲು ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಬೇಕು:ರೈತಸಂಘ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕೋಲಾರ ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ಬೆಳೆಗಾರರನ್ನು ರಕ್ಷಿಸಿಸಲು ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಬೇಕು:ರೈತಸಂಘ

 

 

 

ಕೋಲಾರ: ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ಬೆಳೆಗಾರರನ್ನು ರಕ್ಷಣೆ ಮಾಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ಒತ್ತಾಯಿಸಿ ರೈತಸಂಘದಿಂದ ಎಪಿಎಂಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗೆ ಮನವಿ ನೀಡಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಂತ ಸಾವಿರಾರು ಎಕರೆಗಳಲ್ಲಿ ಬೆಳೆದಿರುವ ಟೊಮೆಟೊ ಉತ್ತಮ ಫಸಲು ಬಂದಿದ್ದರೂ ಕೊರೊನಾ ವೈರಸ್ ಹಾವಳಿಯಿಂದ ಮಾರುಕಟ್ಟೆಯಲ್ಲಿ ಖರೀದಿದಾರರ ಜೊತೆಗೆ ಹೊರರಾಜ್ಯಗಳಿಗೆ ರಫ್ತು ಮಾಡಲು ಲಾಕ್‍ಡೌನ್‍ನಿಂದ ಬೆಳೆಗಾರರು ಅಲ್ಲೋಲಕಲ್ಲೋಲವಾಗಿದ್ದಾರೆ ಎಂದು ಹೇಳಿದರು.
ಮತ್ತೊಂದು ಕಡೆ ಒಂದು ಎಕರೆ ಟೊಮೆಟೊ ಬೆಳೆಯಲು ಒಂದು ಲಕ್ಷದಿಂದ ಒಂದೂವರೆ ಲಕ್ಷ್ ಖರ್ಚು ಬರುತ್ತಿದೆ. ಆದರೆ ತೋಟದಲ್ಲಿನ ಟೊಮೆಟೊ ಮಾರುಕಟ್ಟೆಗೆ ತಂದರೆ ಕೊಳ್ಳುವರಿಲ್ಲ. ಅದರ ಜೊತೆಗೆ ಇರುವ ಬೆಲೆಯಿಂದಾಗಿ ಬಾಡಿಗೆ ಮತ್ತು ಕೂಲಿ ಸಹ ಬಾರದ ಪರಿಸ್ಥಿತಿಯಲ್ಲಿ ರೈತನಿದ್ದಾನೆ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ವತಿಯಿಂದ ಇಲ್ಲವೇ ಎಪಿಎಂಸಿ ಆವರ್ತ ನಿಧಿಯಲ್ಲಿರುವ ಹಣದಿಂದಲಾದರೂ ಟೊಮೆಟೊಗೆ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕೆಂದು ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಮೇಲೆ ಒತ್ತಡ ಹಾಕಿದರು.
ರೈತ ಮಂಗಸಂದ್ರ ವೆಂಕಟೇಶಪ್ಪ ಮಾತನಾಡಿ, ಒಂದು ಕಡೆ ಹಾಕಿದ ಬಂಡವಾಳ ಬರುತ್ತಿಲ್ಲ. ಮತ್ತೊಂದು ಕಡೆ ಮತ್ತೆ ಬೆಳೆಯಿಡಲು ಸಾಲ ಸಿಗುತ್ತಿಲ್ಲ. ಹಾಕಿರುವ ಖಾಸಗಿ ಸಾಲ ತೀರಿಸಲು ಹರಸಾಹಸ ಪಡಬೇಕಾಗಿದೆ.