ಕೋಲಾರ: ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ  ಜುಲೈ  11 ರಂದು ಪೋನ್ ಇನ್ ಕಾರ್ಯಕ್ರಮ 

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

 

ಕೋಲಾರ: ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ  ಜುಲೈ  11 ರಂದು ಪೋನ್ ಇನ್ ಕಾರ್ಯಕ್ರಮ 

ಕೋಲಾರ: ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜುಲೈ 11 ರಂದು ಬೆಳಿಗ್ಗೆ 9 ರಿಂದ 10 ಗಂಟೆಯವರೆಗೆ ಪೋನ್‍ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಕರೆ ಮಾಡಿ ತಮ್ಮ ವ್ಯಾಪ್ತಿಯ ಕುಂದು-ಕೊರತೆಗಳ ಬಗ್ಗೆ ತಿಳಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಜಿ.ಜಗದೀಶ ತಿಳಿಸಿದ್ದಾರೆ.

 ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಕರೆ ಮಾಡಲು ಪ್ರತ್ಯೇಕ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದ್ದು, 

ಕೋಲಾರ – 08152-240640, ಮಾಲೂರು – 08151-240642, ಬಂಗಾರಪೇಟೆ – 08153-240641, ಮುಳಬಾಗಿಲು – 08159-240643 ಹಾಗೂ ಶ್ರೀನಿವಾಸಪುರ – 08157-240644 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.