ಕೋಲಾರ : ಕಲಬೆರಕೆ ಮಧ್ಯ ಮಾರಾಟ ತಡೆಯುವಂತೆ ಅಬಕಾರಿ ಸಚಿವರಿಗೆ ಮನವಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಕೋಲಾರ : ಕಲಬೆರಕೆ ಮಧ್ಯ ಮಾರಾಟ ತಡೆಯುವಂತೆ ಅಬಕಾರಿ ಸಚಿವರಿಗೆ ಮನವಿ

 

 

ಕೋಲಾರ : ಅಬಕಾರಿ ಸಚಿವರು ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವ ಹೆಚ್. ನಾಗೇಶ್ ರವರು ತಮ್ಮ ಜಿಲ್ಲಾ ಕಾರ್ಯಲಯ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಯುವ ಸೇನೆ ಕರುನಾಡು ಸಂಘಟನೆಯ ವತಿಯಿಂದ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಪರವಾನಗಿ ಇಲ್ಲದಿದ್ದರೂ ಮತ್ತು ಕಲಬೆರಕೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ದೂರು ನೀಡಿದರು.
ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಮಾಲೀಕರ ಪರವಾನಗಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಮತ್ತು ಎಂ.ಆರ್.ಪಿ. ಮಳಿಗೆಗಳಲ್ಲಿ ಕಲಬೆರಕೆ ಮದ್ಯ ಮಾರಾಟ ಮಾಡುತ್ತಿರುವುದು ಹಾಗೂ ಗ್ರಾಮೀಣ ಭಾಗದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು ಸುಮಾರು ಬಡ ಕುಟುಂಬಗಳು ಬೀದಿಗೆ ಬಂದಿವೆ.
ಈ ಕೂಡಲೇ ಮಂತ್ರಿಗಳು ಈ ವಿಷಯದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಂಡು ನೊಂದ ಬಡ ಕುಟುಂಬಗಳಿಗೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲದೆ ಹೋದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಯುವಸೇನೆ ಕರುನಾಡು ಸಂಘಟನೆ ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವ ಹೆಚ್.ನಾಗೇಶ್‍ರವರು ಮಾತನಾಡಿ ಅಕ್ರಮ ಮದ್ಯಮಾರಾಟ ಕಂಡುಬಂದಲ್ಲಿ ಕೂಡಲೆ ನಮಗೆ ತಿಳಿಸಿದಲ್ಲಿ ಅವರ ವಿರುದ್ದ ಕ್ರಮ ಜರುಗಿಸುವುದಲ್ಲದೆ ಮಾಹಿತಿ ನೀಡುವವರಿಗೆ ಬಹುಮಾನವನ್ನು ಸಹ ನೀಡುವುದಾಗಿ ಕೋಲಾರದ ಜಿಲ್ಲಾದಿಕಾರಿಗಳ ಸಮ್ಮುಖದಲ್ಲಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಮ್ಮ ಯುವ ಸೇನೆ ಕರುನಾಡು ಸಂಘಟನೆ ಸಂಸ್ಥಾಪಕ ಚಿನ್ನಾಪುರ ಅನಿಲ್ ಕುಮಾರ್ ರಾಜ್ಯಾಧ್ಯಕ್ಷ ಯುವಸೇನೆ ಕಲ್ಯಾಣ್ ಕುಮಾರ್ ರಾಜ್ಯ ಉಪಾಧ್ಯಕ್ಷ ಗಾಂಧಿನಗರ ಪ್ರದೀಪ್, ಯತೀಶ್ ಸತ್ಯಪ್ಪನವರ್, ಕೋಲಾರ ತಾಲ್ಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ವೇಮಗಲ್ ಹೋಬಳಿ ಅಧ್ಯಕ್ಷ ಅನಂತು, ವಿಧ್ಯಾರ್ಥಿ ಘಟಕದ ಅಧ್ಯಕ್ಷ ಶಿವರಾಜ್ ಹಾಗೂ ಸಂಘಟನೆಯ ಪದಾದಿಕಾರಿಗಳು ಹಾಜರಿದ್ದರು.