JANANUDI.COM NETWORK
ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಕುಂದಾಪುರ, ಬೈಂದೂರು ತಾಲೂಕಿನ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಹೋಮ್ ಡೆಲಿವರಿ ಯೋಜನೆ ರೂಪಿತವಾಗುತ್ತಿದೆ
ಕುಂದಾಪುರ, ಎ.13: ಕೊರೋನಾ ಹರಡುವಿಕೆವಿಕೆಯನ್ನು ತಡೆಕಟ್ಟುವ ನಿಟ್ಟಿನಲ್ಲಿ ಜನರು ಮನೆಯಿಂದ ರಸ್ತೆಗೆ ಬರುವುದನ್ನು ಸಂಪೂರ್ಣವಾಗಿ ತಡೆಯುವ ಸಲುವಾಗಿ ಏಪ್ರಿಲ್ 13 ಸೋಮವಾರದಿಂದ ಕುಂದಾಪುರ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಹೋಮ್ ಡೆಲಿವರಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಎಂದು ನೀಡಿರುವ ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ಇಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ
ಮೊದಲು ಈ ವ್ಯವಸ್ಥೆಯ ಕುರಿತಾಗಿ ಮೂರು ದಿನಗಳ ಕಾಲ ಜನರಿಗೆ ಮಾಹಿತಿ ನೀಡಿ ಸಂಪೂರ್ಣ ಮನವರಿಕೆ ಮಾಡಲಾಗುವುದು, ಬಳಿಕ ಸಂಪೂರ್ಣವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತಂದು ಜನರು ಮನೆಗಳಿಂದ ರಸ್ತೆಗೆ ಬರುವುದನ್ನು ತಡೆಯಲಾಗುವುದು ಎಂದು ಹೇಳಿದ್ದಾರೆ.
ಕುಂದಾಪುರ, ಬೈಂದೂರು, ಗಂಗೊಳ್ಳಿ, ಶಂಕರನಾರಾಯಣ, ಕುಂದಾಪುರ ಗ್ರಾಮಾಂತರ (ಕಂಡ್ಲೂರು), ಕೊಲ್ಲೂರು, ಕೋಟ, ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗಿದೆ. ಕುಂದಾಪುರ ಪುರಸಭಾ ವ್ಯಾಪ್ತಿಗೆ ಇದು ಅನ್ವಯವಾಗುವುದಿಲ್ಲ.
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಗಳಿಗೆ ದಿನಸಿ ಮತ್ತು ಅವಶ್ಯಕ ಸಾಮಗ್ರಿಯನ್ನು ಪೂರೈಸಲು ವಾರ್ಡ್‌ಗೆ ಇಬ್ಬರಂತೆ ನೇಮಕ ಮಾಡಲಾಗಿದ್ದು ಅವರಿಗೆ ಕರೆ ಮಾಡಿದರೆ ಅವರು ದಿನಬಳಕೆಯ ವಸ್ತುಗಳನ್ನು ಮನೆಗಳಿಗೆ ತಲುಪಿಸುತ್ತಾರೆ.
ಈ ವ್ಯವಸ್ಥೆಯ ಕುರಿತು ಮನವರಿಕೆ ಮಾಡಿ ಅವರ ವಾರ್ಡ್‌ನಲ್ಲಿ ಮನೆಗೆ ಅವಶ್ಯಕ ವಸ್ತುಗಳನ್ನು ಪೂರೈಸಲು ನೇಮಕಗೊಂಡಿರುವವರ ದೂರವಾಣಿ ಸಂಖ್ಯೆಗಳನ್ನು ನೀಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯತ್‌ನಲ್ಲಿ ಹೋಮ್ ಡೆಲಿವರಿ ಮಾಡುವ ಇಬ್ಬರಿಗೆ ಒಂದು ವಾಹನವನ್ನೂ ನೀಡಲಾಗುತ್ತದೆ. ವೈದ್ಯಕೀಯ ಅಥವಾ ಅತ್ಯಂತ ತುರ್ತು ಸಂದರ್ಭ ಹೊರತುಪಡಿಸಿ ಮನೆಯಿಂದ ಹೊರಗೆ ಬರದಂತೆ ಎಲ್ಲರಿಗೂ ತಾಕೀತು ಮಾಡಲಾಗುತ್ತದೆ. ಅನಗತ್ಯವಾಗಿ ಹೊರಬರುವವರ ಪೊಲೀಸ್ ಇಲಾಖೆ ಕ್ರಮ ತೆಗೆದು ಕೊಳ್ಳುತಿದ್ದು. ಹಾಗೆಯೆ ಇದು ಮುಂದುವರಿಯಲಿದೆ.
ಎಂದಿನಂತೆ ಬೆಳಿಗ್ಗೆ 7 ರಿಂದ 11 ಗಂಟೆಯ ತನಕ ಈ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಗಳ ಗ್ರಾಮಗಳಲ್ಲಿ ಅವಶ್ಯಕ ವಸ್ತುಗಳ ಅಂಗಡಿ ತೆರೆದೇ ಇರಲಿದೆ. ಆದರೆ ಜನರಲ್ಲಿ ಕೊರೋನಾ ಕುರಿತು ಇನಷ್ಟು ಜಾಗೃತಿ ಮೂಡಿಸಿ ಎಚ್ಚರ ವಹಿಸುವಂತೆ ಮಾಡುವ ಸಲುವಾಗಿ ಹೋಮ್ ಡೆಲಿವರಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದ್ದು ಹಳ್ಳಿಗಳಲ್ಲಿ ಎಲ್ಲರೂ ಈ ಹೋಮ್ ಡೆಲಿವರಿ ವ್ಯವಸ್ಥೆಯನ್ನು ಬಳಸಿಕೊಂಡು ಕೊರೋನಾ ನಿಯಂತ್ರಣಕ್ಕೆ ಸಹಕರಿಸಬೇಕೆಂಬುದು ಎಎಸ್‌ಪಿ ಹರಿರಾಮ್ ಶಂಕರ್ ಇವರ ಕೋರಿಕೆ.
.
ಗ್ರಾಮಂತರ ಪ್ರದೇಶಗಳ ನಿಮ್ಮೂರಿನ ನಿಮ್ಮ ವಾರ್ಡ್‌ಗಳಲ್ಲಿ ಹೋಮ್ ಡೆಲಿವರಿಗೆ ಯಾರನ್ನು ಸಂಪರ್ಕಿಸಬೇಕೆಂಬ ಹೆಸರು, ಪೋನ್ ನಂಬರ್ ಇರುವ ಪಟ್ಟಿಯನ್ನು ಕೆಳಗಡೆ ಕೊಡಲಾಗಿದೆ.