ಕೊರೊನಾ ಯುದ್ದ ಪಡೆಯ ನರ್ಸ್ ಅಶಾ ಕಾರ್ಯಕರ್ತೆ, ಅಂಬ್ಯೂಲೆನ್ಸ್ ಚಾಲಕರಿಗೆ ಕುಂದಾಪುರ ಕಥೊಲಿಕ್ ಸಭಾದಿಂದ ಸನ್ಮಾನ

JANANUDI.COM NETWORK

 

 

 

 ಕೊರೊನಾ ಯುದ್ದ ಪಡೆಯ ನರ್ಸ್ ಅಶಾ ಕಾರ್ಯಕರ್ತೆ, ಅಂಬ್ಯೂಲೆನ್ಸ್ ಚಾಲಕರಿಗೆ ಕುಂದಾಪುರ ಕಥೊಲಿಕ್ ಸಭಾದಿಂದ ಸನ್ಮಾನ

 

 

 

ಕುಂದಾಪುರ, ಮೇ.15: ಕೊರೊನಾ ವಿರುದ್ದ ರಣರಂಗದಲ್ಲಿ ಹೋರಾಡುವ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿರುವ ಕುಂದಾಪುರ ಸರಕಾರಿ ಆಸ್ಪತ್ರೆಯ ಕಾರ್ಯಪಡೆಯ ನರ್ಸ್‍ಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಬ್ಯೂಲೆನ್ಸ್ ಚಾಲಕರಿಗೆ ಮತ್ತು ಸೆವಾ ಕಾರ್ಯಕರ್ತರಿಗೆ ಅವರ ಅಮೂಲ್ಯ ಸೇವೆ ಮತ್ತು ಕರ್ತವ್ಯ ಪಾಲನೆಗೆ ಗೌರವ ಕೊಡುವ ಉದ್ದೇಶದಿಂದ ಅವರನ್ನು ಫಲ ಪುಷ್ಪ ಶಾಲು ನೀಡುವ ಬದಲು, ಸಾನಿಟರಿ ಲಿಕ್ವಿಡ್, ಟವೆಲ್, ಕರ್ಚಿಫ್ ಹ್ಯಾಂಡ್ ವಾಷ್, ಸಾಬುನು, ಸೊಪ್ ಫೌಡರ್ ಮಾಸ್ಕ್, ಗ್ಲಾವ್ಜ್ ಇನ್ನಿತರ ವಸ್ತುಗಳನ್ನು ಹರಿವಾಣದಲ್ಲಿ ನೀಡಿ ಸನ್ಮಾನಿಸಲಾಯಿತು. ಸಿಸ್ಟರ್‍ಗಳಾದ ಅರುಣಾ ಕುಮಾರಿ, ದಿವ್ಯಾ, ಆಶಾ ಕಾರ್ಯಕರ್ತೆಯರಾದ, ಲಕ್ಷ್ಮಿ, ಅನಿತಾ, ಸುನಿತಾ, ಗಾಯಿತ್ರಿ, ಆಶಾ, ಶಶಿಕಲಾ, ಮಾಲತಿ, ಶಿಲ್ಪಾ, ಸಹಯಕ ಸೆವಾ ಕರ್ತರಾದ ಲೀಲಾ, ಸಂತೋಷ್, ಅಂಬ್ಯೂಲೆನ್ಸ್ ಚಾಲಕರಾದ ನಾಗರಾಜ, ಮಣಿಕಂಠ, ವಿಶ್ಣು ಮತ್ತು ರಾಘವೇಂದ್ರ ಕೊರೊನ ಪಡೆಯ 16 ಸೈನಿಕರನ್ನು ಶುಕ್ರಾವಾರ ಕುಂದಾಪುರ ಸರಕಾರಿ ಆಸ್ಪತ್ರೆಯ ಸಭಾ ಭವನದಲ್ಲಿ ಸನ್ಮಾನಿಸಲಾಯಿತು.
ಕುಂದಾಪುರ ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ|ರೊಬರ್ಟ್ ರೆಬೆಲ್ಲೊ ‘ನರ್ಸ್, ಆಶಾ ಕಾರ್ಯಕರ್ತೆಯರ, ಅಂಬ್ಯೂಲೆನ್ಸ್ ಚಾಲಕರ ಮತ್ತು ಸೆವಾ ಕಾರ್ಯಕರ್ತರ ಸೇವೆ ಬಹಳ ಅಮೂಲ್ಯವಾದುದು. ಅವರುಗಳು ತಮ್ಮ ಜೀವವನ್ನು ಪಣಕಿಟ್ಟು ಸೇವೆ ಮಾಡುತಿದ್ದಾರೆ. ಯಾವ ಗಳಿಗೆಯಲ್ಲು ಅವರು ತಮ್ಮ ಸೇವೆ ನೀಡಲು ಸಿದ್ದರಿದ್ದಾರೆ, ಈ ತನಕ ಉಡುಪಿ ಜಿಲ್ಲೆ ಕೊರೊನಾ ವಿಷಯದಲ್ಲಿ ಹಸಿರು ವಿಭಾಗದಲ್ಲಿ ಗುರುತಿಸಲಾಗಿತ್ತು, ಆದರೆ ಈಗ ವಿದೇಶದಿಂದ ಬಂದವರಲ್ಲಿ ಕೆಲವರು ಕೊರೊನಾ ಪಾಜಿಟೀವ್ ಎಂದು ತಿಳಿದು ಬಂದಿದೆ, ಆದರಿಂದ ಈಗ ಕೊರೊನಾ ವಿರುದ್ದ ರಣರಂಗದಲ್ಲಿ ಹೋರಾಡುವ ನಮ್ಮ ಕಾರ್ಯ ಪಡೆ ಇನ್ನು ಹೆಚ್ಚು ಜಾಗ್ರತರಾಗಿ ನಿಮ್ಮ ಕರ್ತವ್ಯವನ್ನು ಪಾಲಿಸಬೇಕು’ ಎಂದು ಹೇಳುತ್ತಾ, ಕೊರೊನಾ ವಿರುದ್ದ ಹೊರಾಡುತ್ತಿರುವರನ್ನು ಗುರುತಿಸಿ ಸನ್ಮಾನ ಮಾಡಿ ಪ್ರೇರಣೆ ನೀಡಿದಕ್ಕೆ ಕಥೊಲಿಕ್ ಸಭೆ ಕುಂದಾಪುರ ಘಟಕಕ್ಕೆ ಧನ್ಯವಾದ ಸಮರ್ಪಿಸಿದರು.
ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷೆ ಮೇಬಲ್ ಡಿಸೋಜಾ ‘ನಿಮಗೆ ಸೇವೆ ಮಾಡಲು ದೇವರು ಆಯುರರಾಯೋಗ್ಯ ನೀಡಲಿ’ ಎಂದು ಹರಸಿದರು. ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷ ಕಾರ್ಯಕ್ರಮದ ಸಂಯೋಜಕ ಬರ್ನಾಡ್ ಜೆ.ಡಿಕೋಸ್ತಾ ‘ಕೊರೊನಾ ವಿರುದ್ದ ಹೊರಾಡುತ್ತಿರುವ ನಿಮಗೆ, ನಾವು ಎಷ್ಟು ದೊಡ್ಡ ಕಾಣಿಕೆ ಕೊಟ್ಟರು ಅದು ಕಿರುಕಾಣಿಕೆ, ಆದರೆ ನಿಮ್ಮನ್ನು ಹ್ರದಯಾಳಂತರದಿಂದ ಗೌರವಿಸಿ ಸನ್ಮಾನಿಸುವುದೇ ದೊಡ್ಡ ಕಾಣಿಕೆಯಾಗಿದೆ’ ಎಂದು ಪ್ರಸ್ತಾವಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಯ ನರ್ಸಿಂಗ್ ಸುಪೀರಿಡೆಂಟ್ ಗೀತಾ, ರೋಜರಿ ಚರ್ಚ್ ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ,  ಕಥೊಲಿಕ್ ಸಭಾದ ಪದಾಧಿಕಾರಿಗಳಾದ ಶೈಲಾ ಡಿಆಲ್ಮೇಡಾ, ವಿಲ್ಸನ್ ಡಿಆಲ್ಮೇಡಾ, ವಿನಯಾ ಡಿಕೋಸ್ತಾ, ಶಾಲೆಟ್ ರೆಬೆಲ್ಲೊ ಹಾಜರಿದ್ದರು. ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು, ವಿನೋದ್ ಕ್ರಾಸ್ಟೊ ನಿರೂಪಿಸಿದರು.