ಕೊರೊನಾ ತಡೆ ಮತ್ತು ನಿಯಂತ್ರಣ ಕೈಗೊಂಡಿರುವ ಕ್ರಮಗಳ ಪರಿಶೀಲನೆ ಸಚಿವ ಶ್ರೀನಿವಾಸ ಪೂಜಾರಿಯವರಿಂದ ವಿವಿಧ ಇಲಾಖಾ ಇಲಾಖೆಗಳಿಂದ

JANANUDI.COM NETWORK

 

 

ಕೊರೊನಾ ತಡೆ ಮತ್ತು ನಿಯಂತ್ರಣ ಕೈಗೊಂಡಿರುವ ಕ್ರಮಗಳ ಪರಿಶೀಲನೆ

ಸಚಿವ ಶ್ರೀನಿವಾಸ ಪೂಜಾರಿಯವರಿಂದ ವಿವಿಧ ಇಲಾಖಾ ಇಲಾಖೆಗಳಿಂದ

 

 

 

ಕುಂದಾಪುರ,ಎ. 18: ಧಾರ್ಮಿಕ ದತ್ತಿ ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿಯ ತಡೆ ಹಾಗೂ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮ.ಗಳ ಬಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ ಬಗ್ಗೆ ಕುಂದಾಪುರ ಮತ್ತು ಬೈಂದೂರಿನ ತಾಲೂಕುಗಳ ಕೊರೊನಾ ತೊಂದರೆಗಾಗಿ ಸಹಕಾರ  ಸೇವೆ ಸಲ್ಲಿಸುವ ವಿವಿಧ  ಸರಕಾರಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು

   ಅದರಲ್ಲಿ ಪ್ರಮುಖವಾಗಿ ಆರೋಗ್ಯ ಇಲಾಖೆಯ, ಪೊಲೀಸ್ ಇಲಾಖೆಯ, ಬಂದರು ಮೀನುಗಾರಿಕೆ ಇಲಾಖೆ, ಆಹಾರ ಇಲಾಖೆ,ಕಾರ್ಮಿಕ ಇಲಾಖೆ, ತೋಟಗಾರಿಕೆ ಇಲಾಖೆ, ಹೀಗೆ ಸುಮಾರು 17 ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಸಚಿವರ ಪ್ರಶ್ನೆಗೆ ಉತ್ತರ ನೀಡಿದರು.

   ಸಚಿವರು ಎಲ್ಲಾ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮಗಳು ಕೈಗೊಳ್ಳಬೇಕು ಎನ್ನುತ್ತಾ ಆಶಾ ಕಾರ್ಯಕರ್ತರು ಎಲ್ಲಾ ಮನೆಗಳಿಗೆ ಹೋಗಿ ಪರಿಶೀಲನೆ ಮಾಡಿದ್ದಾರ ಎಂದು ಕೇಳಿದರು,  ಆಹಾರ, ತೋಟಗಾರಿಕೆ, ಪಡಿತರ, ಕಾರ್ಮಿಕ, ವಲಸೆಗಳ ಬಗ್ಗೆ ವಿಚಾರ ನಡೆಸಿದರು. ಮೀನುಗಾರಿಕೆಗೆ ಎಷ್ಟು ಬೊಟುಗಳು ಹೋಗುತ್ತಿವೆಯೆಂದು ತಿಳಿದುಕೊಂಡರು.  ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು, ರೈತರಿಗೆ ತೊಂದರೆಯಾದಂತೆ ನೋಡಿ ಕೊಳ್ಳಬೇಕು, ಬೀಜ ಬಿತ್ತನೆಗೆ ತೊಂದರೆಯಾಗಬಾರದು’ ಎಂದು ಎಚ್ಚರಿಸಿದರು.

     ಪರಿಶೀಲನೆ ಬಳಿಕ “ಕೊರೊನಾ ಪ್ರಪಂಚದ ಸಮಸ್ಯೆಯಾಗಿದ್ದು  ಪ್ರಪಂಚಕ್ಕೆ ಮಾಹಾ ಮಾರಿಯಾಗುತ್ತಾ ಇದೆ. ನಮ್ಮ ರಾಜ್ಯದ ನೆರೆ ರಾಜ್ಯದಲ್ಲಿ ಕೊರೊನಾದ ಪೀಡೆ ಅತಿಯಾಗಿದ್ದುದರಿಂದ ನಾವು ನಮ್ಮ ರಾಜ್ಯದ ಘಡಿಗಳನ್ನು ಮುಚ್ಚಬೇಕಾಯ್ತು. ಅಲ್ಲಿಂದ ನಮಗೆ ಒತ್ತಡ ಇದೆ, ಆದರೆ ಘಡಿ ತೆರೆವು ಮಾಡಿದರೆ ನಮಗೆ ಅಕಾಂತ ಮತ್ತು ಆಪತ್ತು ಕಾದಿದೆ.  ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಉಡುಪಿ ಜಿಲ್ಲೆಯ ಪರಿಸ್ಥಿತಿ ಉತ್ತಮವಿದೆ. ಅದಕ್ಕಾಗಿ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ ನಾವು ಅಭಿನಂದನೆಗಳನ್ನು ಸಲ್ಲಿಸಬೇಕು’ ಹೇಳುತ್ತಾ ನಮ್ಮ ಸರಕಾರ ಎಲ್ಲಾ ಇಲಾಖೆಗಳಿಗೂ ಅಗತ್ಯ ಬೀಳುವಂತಹ ಸಮಸ್ಯೆಗಳಿಗೆ ಎಲ್ಲಾ ರೀತಿಯಿಂದ ಸ್ಪಂದಿಸುತ್ತೇವೆ’ ಎಂದು ಅವರು ಹೇಳಿದರು.

    ಈ ಸಂದರ್ಭದಲ್ಲಿ  ಸಹಾಯಕ ಜಿಲ್ಲಾಧಿಕಾರಿ ರಾಜು.ಕೆ ಹಾಜರಿದ್ದರು