ಕೃಷಿಕರ,ಮಹಿಳೆಯರ, ಶೋಷಿತರ ಪರ ಯೋಜನೆಗಳಿಲ್ಲದ ಬಜೆಟ್; ಕಾಂಗ್ರೆಸ್ ಐ‌.ಟಿ ಸೆಲ್.

JANANUDI.COM NETWORK
ಕೃಷಿಕರ,ಮಹಿಳೆಯರ, ಶೋಷಿತರ ಪರ ಯೋಜನೆಗಳಿಲ್ಲದ ಬಜೆಟ್; ಕಾಂಗ್ರೆಸ್ ಐ‌.ಟಿ ಸೆಲ್.
ಕೇಂದ್ರದಿಂದ ಬರಬೇಕಿದ್ದ ಸುಮಾರು ₹11 ಸಾವಿರ ಕೋಟಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಪಾಲು ರಾಜ್ಯಕ್ಕೆ ಸಿಕ್ಕಿಲ್ಲ. ಅನುದಾನದಲ್ಲಿಯೂ ಸುಮಾರು ₹8 ಸಾವಿರ ಕೋಟಿ ಕಡಿಮೆಯಾಗಿದೆ ಹಾಗಾಗಿ ಯಾವುದೇ ಹೊಸ ಘೋಷಣೆಗಳಿಲ್ಲ ಎಂದು ಬಜೆಟ್ ಮಂಡನೆ ಬಾಷಣದ ವೇಳೆ  ಮುಖ್ಯಮಂತ್ರಿ ಯಡಿಯೂರಪ್ಪನವರು ಅಸಹಾಯಕತೆ ವ್ಯಕ್ತಪಡಿಸಿರುವುದು ಅವರದ್ದೆ ಪಕ್ಷದ ಕೇಂದ್ರದ ಮೋದಿ ಸರ್ಕಾರ ಕರ್ನಾಟಕ ರಾಜ್ಯದ ಕುರಿತು ಹೊಂದಿರುವ ಮಲತಾಯಿ ದೋರಣೆಯನ್ನು ಎತ್ತಿ ತೋರಿಸುತ್ತದೆ.
ಇಷ್ಟಾಗಿಯೂ ‘ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು’ ಎಂದು ಸದಾ ತನ್ನ ಬಾಷಣಗಳಲ್ಲಿ ಹೇಳುವ ಮುಖ್ಯಮಂತ್ರಿ ಯಡಿಯೂರಪ್ಪನವರು ಆ ವಾಕ್ಯವನ್ನು ಕೇವಲ ಬಾಷಣಕ್ಕಷ್ಟೆ ಸೀಮಿತಗೊಳಿಸಿದಂತಿದೆ ಏಕೆಂದರೆ ಸಿದ್ದರಾಮಯ್ಯನವರ ಸರ್ಕಾರದ ಬಹು ಮಹತ್ವಾಕಾಂಕ್ಷೆಯ ಯೋಜನೆ ಅನ್ನಭಾಗ್ಯ ಮತ್ತು ಬಡವರ ಬಂಧುವಂತಹ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡುವ ಕುರಿತು ನಿರೀಕ್ಷಿಸಲಾಗಿತ್ತು ಆದರೆ ಈ ಬಜೆಟ್ ಆ ನಿರೀಕ್ಷೆಯನ್ನೂ ಹುಸಿಗೊಳಿಸಿದೆ. ಈ ಬಜೆಟ್‌ನಲ್ಲಿ ಸಮಾಜದ ಶೋಷಿತರ, ದಮನಿತರ ಪುನರುಜ್ಜೀವನಕ್ಕೆ ಯಾವುದೇ ಸಣ್ಣ ಯೋಜನೆಯನ್ನು ಕೂಡಾ ಘೋಷಿಸದಿರುವುದು ಖಂಡನೀಯ. ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸುವ ಯಡಿಯೂರಪ್ಪನವರು ಬಜೆಟ್ ಮಂಡನೆಯ ವೇಳೆ ರೈತರನ್ನು ಮರೆಯುತ್ತಾರೆ ಎಂಬ ಅವರ ವಿರುದ್ಧದ ಅಭಿಪ್ರಾಯವನ್ನು ಇಂದು ಮತ್ತೆ  ಸಾಭೀತುಗೊಳಿಸಿದ್ದಾರೆ. ಮಕ್ಕಳು ಮತ್ತು ಮಹಿಳೆಯರ ಅಭ್ಯುದಯಕ್ಕೆ ವಿಶೇಷವಾಗಿ ಯೋಜನೆ ಘೋಷಿಸಬಹುದು ಎಂದುಕೊಂಡವರ ನಿರೀಕ್ಷೆ ಹುಸಿಯಾಗಿದೆ. ಒಟ್ಟಾರೆಯಾಗಿ ಇದು ಉಳ್ಳವರ ಮತ್ತು ದೊಡ್ಡ ಉಧ್ಯಮಿಗಳ ಉದ್ಧಾರಕ್ಕಾಗಿ ರೂಪಿತವಾದ ಬಜೆಟ್ ಆಗಿದೆ. 
ಚಂದ್ರಶೇಖರ ಶೆಟ್ಟಿ.
ಪ್ರಧಾನ ಕಾರ್ಯದರ್ಶಿ., ಕೆಪಿಸಿಸಿ ಐ.ಟಿ ಸೆಲ್.