ಕುಂದಾಪುರದಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಶಿಬಿರ
ಕುಂದಾಪುರ, ಎ.14: ಕುಂದಾಪುರ ರೋಜರಿ ಮಾತಾ ಚರ್ಚ್ ವ್ಯಾಪ್ತಿಯ ೫ ರಿಂದ ೯ ನೇ ತರಗತಿಯ ಮಕ್ಕಳಿಗೆ ವ್ಯಕ್ತಿ ವಿಕಸನದ ಎರಡು ದಿನಗಳ ತರಬೇತಿ ಶಿಬಿರವು ಎಪ್ರಿಲ್ ೧೯-೨೦ ರಂದು ಚರ್ಚ್ ಸಭಾಭವನದಲ್ಲಿ ನೆಡೆಯಿತು.
36 ಮಕ್ಕಳು ಭಾಗವಹಿಸಿದ ಈ ಪ್ರಾರ್ಥನೆ, ಪರಮ ಪ್ರಸಾದದ ಆರಾಧನೆ ಬಗ್ಗೆ ತಿಳುವಳಿಕೆ, ಎಳು ಸಂಸ್ಕಾರಗಳ ತಿಳುವಳಿಕೆ, ದೇವರ ಹತ್ತು ಉಪದೇಶಗಳು ಮಹತ್ವ ತಿಳಿಸಿಕೊಡಲಾಯಿತು. ಶಿಬಿರದಲ್ಲಿ ವ್ಯಕ್ತಿ ವಿಕಸನದ ಜೊತೆ ಬೈಬಲ್ ಕ್ವೀಜ್ ನೆಡೆಸಲಾಯಿತು. ಸಂಪನ್ಮೂಲ ವ್ಯೆಕ್ತಿಗಳಾಗಿ ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ರೋಜರಿ ಆಂಗ್ಲಾ ಮಾಧ್ಯಮ ಶಾಲೆಯ ಶಿಕ್ಷಕಿ ಸಿಸ್ಟರ್ ವೀಣಾ, ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಧ್ಯಪಕಿ ರೇಶ್ಮಾ ಫೆರ್ನಾಂಡಿಸ್ ಆಗಮಿಸಿದ್ದರು.
ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಶಿಬಿರದ ಸಂಚಾಲಕತ್ವವನ್ನು ವಹಿಸಿದ್ದು, ಧನ್ಯವಾದಗಳನು ಅರ್ಪಿಸಿದರು.ಕುಂದಾಪುರ ಚರ್ಚಿನ ಸ್ತ್ರೀ ಸಂಘನೇಯ ಮಹಿಳೆಯರು ಶಿಬಿರದ ಮಕ್ಕಳಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಿ ಸಹಕರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಎಲ್ಲರನ್ನೂ ಅಭಿನಂದಿಸಿದರು.