JANANUDI NETWORK
ಕುಂದಾಪುರದಲ್ಲಿ ಕಿರು ಕ್ರೈಸ್ತ ಸಮುದಾಯ ಶಿಬಿರ – ಪರರ ಸೇವೆ ಮಾಡುವುದೇ ನಿಜವಾದ ಕ್ರಿಶ್ಚಿನಿಯರ ಲಕ್ಷಣಗಳು – ಫಾ|ಹೆರಾಲ್ಡ್ ಪಿರೇರಾ
ಕುಂದಾಪುರ, ಜು.22: ‘ಪರರ ಸೇವೆ ಮಾಡುವುದೇ ನೀಜವಾದ ಕ್ರಿಶ್ಚಿನಿಯರ ಲಕ್ಷಣಗಳು, ಯೇಸುವಿಗಾಗಿ ಕಷ್ಟ, ಹಿಂಸೆ, ಅವಮಾನ, ಅನುಭವಿಸಿದಲ್ಲಿ ನೀವು ಯೇಸುವಿನ ನೀಜವಾದ ಅನುಯಾಯಿಗಳು. ಕಿರು ಕ್ರೈಸ್ತ ಸಮುದಾಯ ಇರುವುದು ಕೇವಲ ಇಗರ್ಜಿಯಲ್ಲಿ ಮಾತ್ರ sಸಕ್ರಿಯವಾಗುವುದಲ್ಲಾ ನಿಮ್ಮ ನಿಮ್ಮ ವಾಳೆಯಲ್ಲಿಯೂ ಸಕ್ರೀಯವಾಗಿರಬೇಕು, ದೇವರು ಇಗರ್ಜಿಯಲ್ಲಿ ಮಾತ್ರವಲ್ಲಾ ನಿಮ್ಮ ವಾಳೆಯಲ್ಲಿಯೂ ಇದ್ದು ವಾಳೆಯ ಸಮುದಾಯದಲ್ಲಿ ಕ್ರೈಸ್ತರು ಒಟ್ಟು ಸೇರಿ ಯೇಸುವಿನ ತತ್ವಗಳಂತೆ, ಯಾರು ಕಷ್ಟದಲ್ಲಿ ಇರುವರೋ ಅವರಿಗೆ ಸ್ಪಂದಿಸಿ, ನಿಸ್ಸಹಾಯಕರಿಗೆ,ವ್ರದ್ದರಿಗೆ, ರೋಗಿಗಳಿಗೆ ಸಹಾಯ ಹಸ್ತ ನೀಡಿರಿ’ ಎಂದು ಉಡುಪಿ ಧರ್ಮಪ್ರಾಂತ್ಯದ ಕಿರು ಕ್ರೈಸ್ತ ಸಮುದಾಯದ ನಿರ್ದೇಶಕರಾದ ವಂ|ಫಾ|ಹೆರಾಲ್ಡ್ ಪಿರೇರಾ ನುಡಿದರು.
‘ಯಾರನ್ನು ಕೀಳಾಗಿ ಕಾಣ ಬೇಡಿ, ಬಡವರು ಶ್ರೀಮಂತರು ಎಂಬ ಬೇಧ ಭಾವನೆ ಇಲ್ಲಾ, ಕಿರು ಸಮುದಾಯ ಅಂದರೆ ಕೇವಲ ಸಾಮಾಜಿಕ ಪಂಗಡದಂತೆ ಜೀವಿಸದೆ, ಪಿತಾ ಸುತ ಪವಿತ್ರಾತ್ಮನ ಜೊತೆ ನೀಜವಾದ ಕ್ರಿಸ್ತಿ ಸಮುದಾಯವಾಗಿರ ಬೇಕು’ ಎಂದು ಅವರು ತಿಳಿಸಿದರು ಕುಂದಾಪುರ ಪವಿತ್ರ ರೋಜರಿ ಮಾತಾ ಕಿರು ಕ್ರೈಸ್ತ ಸಮುದಾಯದ ಪ್ರೇರಕರ, ಗುರಿಕಾರರ, ವಾಳೆ ಸಮಿತಿಯ ಸದಸ್ಯರಿಗೆ, ಚರ್ಚ್ ಸಭಾ ಭವನದಲ್ಲಿ ಭಾನುವಾರ 21 ರಂದು ಎರ್ಪಡಿಸಿದ ಶಿಬಿರದಲ್ಲಿ ಅವರು ಮಾತನಾಡಿದರು.
ಕುಂದಾಪುರದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಕಿರು ಕ್ರೈಸ್ತ ಸಮುದಾಯದಿಂದ ವಾಳೆಯಲ್ಲಿ ಪ್ರೀತಿ, ಒಗ್ಗಟ್ಟು ಉಂಟಾಗುತ್ತದೆ’ ಎಂದು ಅವರು ಶಿಬಿರಕ್ಕೆ ಶುಭ ಕೋರಿದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲರಾದ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಉಪಸ್ಥಿತರಿದ್ದರು. ಲೂಡ್ರ್ಸ್ ವಾಳೆಯಾ ಗ್ರೆಟ್ಟಾ ಡಿಸೋಜಾ ಶಿಬಿರವನ್ನು ಸಂಯೋಜಿಸಿದ್ದರು. ಕಾರ್ಮೆಲ್ ವಾಳೆಯ ಪ್ರೇರಕಿ ಸಂಗೀತ ಪಾಯ್ಸ್ ವಂದಿಸಿದರು. ಸಂತ ಜೋಸೆಫ್ ವಾಜ್ ವಾಳೆಯ ವಿನಯಾ ಡಿಕೋಸ್ತಾ ಸ್ವಾಗತಿಸಿ, ಕಾರ್ಯಕ್ರಮವನ್ನು ನಡೆಸಿಕೊಟ್ಟರು.