ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ನಿಂದ ಸುಮಾರು 3ಲಕ್ಷರೂ ಮೌಲ್ಯದ ಆಹಾರ ಸಾಮಗ್ರಿಗಳನ್ನು ವಲಸೆ ಕಾರ್ಮಿಕರು,ನಿರಾಶ್ರಿತರಿಗಾಗಿ ನೀಡಲಾಯಿತು.

JANANUDI.COM NETWORK

 

 

ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ನಿಂದ ಸುಮಾರು 3ಲಕ್ಷರೂ ಮೌಲ್ಯದ ಆಹಾರ ಸಾಮಗ್ರಿಗಳನ್ನು ವಲಸೆ ಕಾರ್ಮಿಕರು,ನಿರಾಶ್ರಿತರಿಗಾಗಿ ನೀಡಲಾಯಿತು.

 

 

ಕುಂದಾಪುರ, ಮಾ. ಕೊರೊನಾ ಸಾಂಕ್ರಮಿಕ ಮಹಾಮಾರಿಯ ದೆಸೆಯಿಂದ ಲಾಕ್ ಡೌನ್ ಮಾಡಬೇಕಾಗಿ ಬಂದುದರಿಂದ ತೊಂದರೆಗೆ ಸಿಲುಕಿದವರಿಗೆ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ  ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ನಿಂದ ಸುಮಾರು 3ಲಕ್ಷರೂ ಮೌಲ್ಯದ ಅಕ್ಕಿ ಬೆಳೆ ಎಣ್ಣೆ ಸಾಂಬಾರು ಪುಡಿ ಮುಂತಾದ ಆಹಾರ ವಸ್ತುಗಳನ್ನು. ಉಪ ಆಯುಕ್ತ ರಾಜು ಅವರ ಮಾರ್ಗದರ್ಶನದಂತೆ ತಹಸಿಲ್ದಾರ್ ತಿಪ್ಪೇಸ್ವಾಮಿ ಮಿನಿ ವಿಧಾನ ಸೌಧದಲ್ಲಿ ಈ ಕೊಡುಗೆಯನ್ನು ಸ್ವೀಕರಿಸಿದರು. 

         ಮಿನಿ ವಿಧಾನ ಸೌಧದಲ್ಲಿ ಕಂದಾಯ ಅಧಿಕಾರಿಗಳ ಜೊತೆ ತಹಸಿಲ್ದಾರ್ ತಿಪ್ಪೇಸ್ವಾಮಿ ಇವುಗಳನ್ನು ಸ್ವೀಕರಿಸಿ ಈ ಆಹಾರ ಸಾಮಾಗ್ರಿಗಳನ್ನು ತಾಲ್ಲೂಕಿನ ವಲಸೆ ಕಾರ್ಮಿಕರಿಗೆ, ನಿರಾಶ್ರಿತರಿಗೆ  ವಿತರಿಸಲಾಗುವುದೆಂದು ತಿಳಿಸಿ, ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ಕಾಗಿ ಗಿಳಿಯಾರು  ಕುಶಲ ಹೆಗ್ಡೆ ಚಾರಿಟೆಬಲ್ ಟ್ರಸ್ಟಿನ ವಿಶ್ವಸ್ಥರನ್ನು ಅವರು ಅಭಿನಂದಿಸಿದರು.

     ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಯು.ಎಸ್.ಶೆಣೈ ವಿವರ ನೀಡಿದರು,  ಖಜಾಂಚಿ ಸ್ನೇಹಾ ರೈ,ವಿಶ್ವಸ್ಥರಾದ ಜಿ.ಸಂತೋಷ್ ಕುಮಾರ್ ಶೆಟ್ಚಿ, ಕೆ.ಕೆ.ರಾಮನ್ ಹಾಗೂ ಬ್ರಹ್ಮಾವರದ ಗೋವಿಂದರಾಜ್ ಹೆಗ್ಡೆ ಉಪಸ್ಥಿತರಿದ್ದರು.