ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ-ಆಕಾಂಕ್ಷೆ ಮತ್ತು ಗುರಿಗಳ ಬಗ್ಗೆ ಪ್ರಬಲವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು : ಶ್ರೀ ರವೀಂದ್ರ ರೈ

JANANUDI.COM NETWORK

 

 

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ-ಆಕಾಂಕ್ಷೆ ಮತ್ತು ಗುರಿಗಳ ಬಗ್ಗೆ ಪ್ರಬಲವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು : ಶ್ರೀ ರವೀಂದ್ರ ರೈ

 


              

‘ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಆಕಾಂಕ್ಷೆ ಮತ್ತು ಗುರಿಗಳ ಬಗ್ಗೆ ಪ್ರಬಲವಾದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಗುರಿ ತಲುಪುವ ಪ್ರಕ್ರಿಯೆಯಲ್ಲಿ ಎದುರಾಗುವ ವಿವಿಧ ಗುರಿಕಂಬಗಳ ಅರಿವು ಹೊಂದಿ ಒಳಿತಿನ ಹಾದಿಯಲ್ಲಿ ಮುಂದುವರಿಯಬೇಕು ‘ ಎಂದು ಕುಂದಾಪುರದ   ದಿನಾಂಕ – 11-12-2019 ರಂದು ನೆಡೆದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ  ಆಗಮಿಸಿದ ವಿಜಯಾ ಬ್ಯಾಂಕ್ ಉಡುಪಿ ವಿಭಾಗದ ಡಿ. ಜಿ. ಎಮ್  ಶ್ರೀ ರವೀಂದ್ರ ರೈ ಯವರು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕರೂ , ಬೈಂದೂರು  ವಿಧಾನಸಭಾ ಕ್ಷೇತ್ರದ ಶಾಸಕರಾದ  ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರು ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸಮಾಜದಲ್ಲಿ  ಜವಾಬ್ದಾರಿಯುತ ಸ್ಥಾನವನ್ನು  ಪಡೆಯಲು ಶಿಕ್ಷಣ ಸಂಸ್ಥೆಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ತಿಳಿಸಿದರು.
ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಸೀತಾರಾಮ ನಕ್ಕತ್ತಾಯ ರವರು ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ವಾರ್ಷಿಕ ವರದಿ ವಾಚಿಸಿದರು.  ಕಳೆದ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿ. ಯು. ಸಿ ವಾರ್ಷಿಕ ಪರೀಕ್ಷೆಯಲ್ಲಿ ಒಂಬತ್ತನೇ ರಾಂಕ್ ಪಡೆದ ಕಾಲೇಜಿನ ಹಳೆ ವಿದ್ಯಾರ್ಥಿನಿ ಅಂಕಿತಾ ವಿ. ಶೆಟ್ಟಿಯವರ ಅಪೂರ್ವ ಶೈಕ್ಷಣಿಕ ಸಾಧನೆಗಾಗಿ ಸನ್ಮಾನಿಸಲಾಯಿತು. ಹಿಂದಿ ವಿಭಾಗ ಮುಖ್ಯಸ್ಥೆ ಶ್ರೀಮತಿ ಜಯಶೀಲಾ ಪೈಯವರು ಸನ್ಮಾನಪತ್ರ ವಾಚಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಜ್ಯೋತಿ ಅತಿಥಿ ಪರಿಚಯ ಮಾಡಿದರು. ಕಾಲೇಜಿನ ಆಡಳಿತ‌ ಮಂಡಳಿಯ ಜೊತೆ ಕಾರ್ಯದರ್ಶಿ  ಶ್ರೀ ಸುಧಾಕರ  ಶೆಟ್ಟಿ, ಭಾಂಡ್ಯ, ಸದಸ್ಯರಾದ ಡಾ. ವೈ. ಎಸ್ ಹೆಗ್ಡೆ  ಹಾಗೂ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ‌ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜನ್ನು ವಿವಿಧ ಮಟ್ಟದಲ್ಲಿ ಪ್ರತಿನಿಧಿಸಿ ಗೆಲುವು ಪಡೆದ ಕ್ರೀಡಾಸಾಧಕ ವಿದ್ಯಾರ್ಥಿಗಳಾದ  ರುಚಿತಾ ಕಾಮತ್, ಸೂರಜ್ ಆರ್, ಅಕ್ಷಯ್ ದೇವಾಡಿಗ ಹಾಗೂ ಸೂರಜ್ ಎಸ್. ಕುಮಾರ್ ಇವರನ್ನು ಅಭಿನಂದಿಸಲಾಯಿತು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಡಿ. ಬಿ. ಕೃಷ್ಣಮೂರ್ತಿಯವರು ಕ್ರೀಡಾಸಾಧಕ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವನಿತಾ. ಜೆ. ಶೆಟ್ಟಿಯವರು ವಂದನಾರ್ಪಣೆಗೈದರು. ದ್ವಿತೀಯ ಪಿ. ಯು. ಸಿ ಯ ಅಭಿಲಾಷ್ ಹತ್ವಾರ್ ಮತ್ತು ಅನಘ ಕಾರ್ಯಕ್ರಮವನ್ನು ನಿರೂಪಿಸಿದರು.