JANANUDI.COM NETWORK
ಕುಂದಾಪುರ:ಇತ್ತೀಚೆಗೆಇಲ್ಲಿನ ಭಂಡಾಕಾರ್ಸ್ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಯುತ್ ರೆಡ್ಕ್ರಾಸ್ಘಟಕದ ಸಹಯೋಗದಲ್ಲಿಉಪನ್ಯಾಸಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಭಾಗವಹಿಸಿಸದ್ದ ಕುಂದಾಪುರದ ಮನಿಷ್ ಆಸ್ಪತ್ರೆಯ ವೈದ್ಯರಾದ ಡಾ.ಪ್ರಮೀಳಾ ನಾಯಕ್ ಮಾತನಾಡಿ ಜಾಗತಿಕ ವ್ಯವಸ್ಥೆಯಲ್ಲಿ ಪರಿಸರಮಾಲಿನ್ಯ, ಪ್ಲಾಸ್ಟಿಕ್ ನಿರ್ಮೂಲನೆ ಮತ್ತು ಮಾದಕ ದ್ರವ್ಯಗಳ ದುಷ್ಪರಿಣಾಮ ಮತ್ತು ಮಹಿಳಾ ಆರೋಗ್ಯದಕುರಿತು ವಿಶೇಷ ಮಾಹಿತಿ ನೀಡಿದರು.
ನಮ್ಮ ನಮ್ಮಲ್ಲಿಜಾಗೃತಿ ಮೂಡಬೇಕು. ಪ್ರಸ್ತುತ ಜಗತ್ತಿನಲ್ಲಿ ಪರಿಸರ ಮಾಲಿನ್ಯದಿಂದಾಗಿ ಶುದ್ಧಆಹಾರ ವಾಯು ಮತ್ತು ನೀರು ಸಿಗುವುದು ದುಸ್ತರವಾಗಿದೆ. ಇಂತಹ ವಿಷಮ ಸ್ಥಿತಿಯಲ್ಲಿ ನಾವಿರುವಾಗ ನಾವು ಪರಿಸರ ಉಳಿಸಿಕೊಳ್ಳುವತ್ತ ಗಮನಹರಿಸಬೇಕಾಗಿದೆ. ಅದಕ್ಕಾಗಿ ಹಲವು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಅನಿವಾರ್ಯತೆ ಇದೆಎಂದು ತಿಳಿಸಿದರಲ್ಲದೇ ಮಹಿಳೆಯರು ತಮ್ಮಆರೋಗ್ಯವನ್ನು ಕಾಯ್ದುಕೊಳ್ಳುವುದು ಮತ್ತು ಕೆಲವು ಸರಳ ಮಾರ್ಗಗಳನ್ನು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ವೇದಿಕೆಯ ಸಂಚಾಲಕರಾದ ಡಾ.ಯಶವ೦ತಿ ಕೆ. ಮತ್ತು ಸದಸ್ಯರು ಮತ್ತುಯುತ್ ರೆಡ್ಕ್ರಾಸ್ ಘಟಕದಕಾರ್ಯಕ್ರಮಾಧಿಕಾರಿಣಿ ವಿದ್ಯಾರಾಣಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕೀರ್ತಿ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿ ವಂದಿಸಿದರು.