ಕುಂದಾಪುರ ಹೋಲಿ ರೊಜರಿ ಹೊಸ ವರ್ಷ- ಧರ್ಮ ಪೂಜೆ ಸಂಸ್ಕಾರಗಳನ್ನು ಕಲಿಸದಿದ್ದರೆ ಅದರ ಫಲ ಉಣ್ಣ ಬೇಕಾಗುತ್ತದೆ: ಫಾ|ವಿಜಯ್

JANANUDI.COM NETWORK

 

 

ಕುಂದಾಪುರ ಹೋಲಿ ರೊಜರಿ ಹೊಸ ವರ್ಷ- ಧರ್ಮ ಪೂಜೆ ಸಂಸ್ಕಾರಗಳನ್ನು ಕಲಿಸದಿದ್ದರೆ ಅದರ ಫಲ ಉಣ್ಣ ಬೇಕಾಗುತ್ತದೆ: ಫಾ|ವಿಜಯ್

 

 

ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2020 ರ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಮಹಾ ಬಲಿದಾನವನ್ನು ಅರ್ಪಿಸಿದರು
‘’ನಾವು ಇವತ್ತು ಎರಡು ಸಂಭ್ರಾಮಚರಣೆಯನ್ನು ಮಾಡುತಿದ್ದೆವೆ. ಒಂದು ಹೊಸ ವರ್ಷದ ಆಚರರಣೆ ಮತ್ತೊಂದು ಮೇರಿ ಮಾತೆ ‘ದೇವರ ತಾಯಿ’ ಎಂಬ ಧರ್ಮಸಭೆ ಅಧಿಕÅತವಾಗಿ ಸಾರಿದ ಹಬ್ಬ. ದೇವ ಪುತ್ರ ಯೇಸುವಿನ ಜನನಕ್ಕೆ ಒರ್ವ ಯೋಗ್ಯ ಕನ್ಯೆ ಬೇಕಾಗಿದ್ದಳು, ಅದಕ್ಕಾಗಿ ದೇವ ಪಿತನು ಆರಿಸಿಕೊಂಡಿದ್ದೆ ಪಾಪ ರಹಿತಳಾದ ಮೇರಿ ಮಾತೆಯನ್ನು, ಮೇರಿ ಮಾತೆ ದೇವರ ಆಜ್ಞೆಯನ್ನು ಸೇವಕಿಯಂತೆ ನಡೆದುಕೊಂಡಳು, ಇವತ್ತಿನ ಕಾಲಘಟ್ಟದಲ್ಲಿ ಸ್ತ್ರೀಯರು ಮೇರಿ ಮಾತೆಯ ಆದರ್ಶವನ್ನು ಪಾಲಿಸುವುದು ಅಗತ್ಯ. ನಾವು ಇವತ್ತು ನಮ್ಮ ಮಕ್ಕಳಿಗೆ ವಿಧ್ಯೆ, ನ್ರತ್ಯ, ಕಲೆ, ಸಂಗೀತಕ್ಕೆ ಹೆಚ್ಚು ಒತ್ತು ಕೊಡುತ್ತೇವೆ, ಇದೆಲ್ಲವೂ ಬೇಕು, ಆದರೆ ಆದರ್ಶತೆ, ಪ್ರಾರ್ಥನೆ, ಭಕ್ತಿ, ಧರ್ಮದ ಅರಿವು ಪೂಜೆ ಸಂಸ್ಕಾರಗಳನ್ನು ಕಲಿಸದಿದ್ದರೆ, ಮುಂದೆ ನಿವೇ ಅದರ ಫಲ ಉಣ್ಣ ಬೇಕಾಗುತ್ತದೆ. ಹೊಸ ವರ್ಷದಲ್ಲಿ ನಾವು ಕಳೆದ ವರ್ಷ ಮಾಡಿದ ತಪ್ಪುಗಳನ್ನು, ಮಾಡದೆ, ಈ ವರ್ಷದಲ್ಲಿ ಹೊಸ ಜೀವನವನ್ನು ಆರಂಭಿಸೋಣ’ ಎಂದು ಅವರು ಸಂದೇಶ ನೀಡಿದರು.
ಅದಕ್ಕೂ ಮುನ್ನಾ ಹಳೆ ವರ್ಷದಲ್ಲಿ ನಮ್ಮನ್ನು ಕಾಪಾಡಿ ನಮಗೆ ಹಲವು ರೀತಿಗಳಿಂದ ಉಪಕಾರ ಮಾಡಿದಕ್ಕೆ ದೇವರಿಗೆ ಕ್ರತಜ್ಞತೆ ಸಲ್ಲಿಸಲು ಪರಮ ಪ್ರಸಾದರ ಆರಾಧನೆಯನ್ನು ಪ್ರಧಾನ ಧರ್ಮಗುರು ಅ| ವ| ಸ್ಟ್ಯಾನಿ ತಾವ್ರೊ ನಡೆಸಿಕೊಟ್ಟು ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು. ಬಲಿ ಪೂಜೆಯಲ್ಲಿ ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಪಾಲ್ಗೊಂಡರು.