JANANUDI.COM NETWORK
ಕುಂದಾಪುರ ಹೋಮ್ ಕ್ವಾರೆಂಟಯ್ನ್ ಮತ್ತು ಆತನ ಮಿತ್ರನಿಂದ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ
ಕುಂದಾಪುರ, ಕುಂದಾಪುರ ಮದ್ದುಗುಡ್ಡೆಯ ನಿವಾಸಿ, ಸಂದೀಪ ಮೇಸ್ತ, ಯಾನೆ ವಿಕ್ಕಿ ಮೇಸ್ತ, ಇತನು ಬೆಂಗಳೂರಿನಲ್ಲಿದ್ದು, 02-04-2020 ರಂದು ಊರಿಗೆ ಕುಂದಾಪುರಕ್ಕೆ ಬಂದಿದ್ದನು, ಇತನಿಗೆ 28 ದಿನಗಳ ಕಾಲ ಹೋಮ್ ಕ್ವಾರೆಂಟಯ್ನ್ ನೀಡಲಾಗಿದ್ದು ಮನೆಯಿಂದ ಹೊರಗೆ ಹೋಗ ಬಾರದೆಂದು ಸೂಚಿಸಲಾಗಿತ್ತು.
ಆದರೆ ದಿನಾಂಕ 21-04-2020 ರಂದು ಆಶಾ ಕಾರ್ಯಕರ್ತೆ ಲಕ್ಷ್ಮಿ ಸಿ. ಫಿಲ್ಡ್ ವರ್ಕಿಗೆ ಹೋದಾಗ ಸಂದೀಪ ಮೇಸ್ತನು ಮದ್ದು ಗುಡ್ಡೆ ಬೋಟ್ ಬಿಲ್ಡಿಂಗ್ ಸಮೀಪ ಕಾಣಸಿಕ್ಕಿದ್ದು, ಆಶಾ ಕಾರ್ಯಕರ್ತೆ ಲಕ್ಷ್ಮಿ ಆತನನ್ನು ಮನೆಯೊಳಗೆ ಇರಲು ಸೂಚಿಸಿದ್ದರೂ, ನಿನೇಕೆ ಹೊರಗೆ ತಿರುಗುತ್ತಿಯಾ ಎಂದು ಕೇಳಿದಕ್ಕೆ, ನನ್ನನ್ನು ಕೇಳಲು ನೀನ್ಯಾರು ? ನಾನು ನನಗೆ ಬೇಕಾದಲ್ಲಿ ತಿರುಗುತ್ತೇನೆ’ ಎಂದು ಗದರಿಸಿದ್ದಾನೆ. ಪುನಹ ದಿನಾಂಕ 24-04-2020 ರಂದು ಆಶಾ ಕಾರ್ಯಕರ್ತೆ ಫೀಲ್ಡ್ ವರ್ಕಿಗೆ ಹೋದಾಗ ಮ್ದುಗುಡ್ಡೆಯ ಸಂತೋಷ್ ಎಂಟರ್ ಪ್ರೈಸಸ್ಸ್ ಮಿಲ್ಲಿನ ಬಳಿ ಕಾಣ ಸಿಕ್ಕಿದ್ದು, ಆಶಾ ಕಾರ್ಯಕರ್ತೆ ಇಲ್ಲಿ ಯಾಕೆ ತಿರುತ್ತಿಯಾ, ಮನೆಗೆ ಹೋಗು ಎಂದು ಬುದ್ದಿವಾದ ಹೇಳಿದ್ದಾರೆ, ಆದರೆ ಅದೇ ಸಂಜೆ ಕುಂದಾಪುರದ ಖಾರ್ವಿಕೇರಿ ನಿವಾಸಿ ಮಹೇಶ್ ಖಾರ್ವಿಯು ಸಂದೀಪ್ ಮೇಸ್ತನನ್ನು ಬೈಕನಲ್ಲಿ ಕುಳ್ಳಿರಿಸಿಕೊಂಡು ಬಂದು , ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆಯನ್ನು ಅಡ್ಡಗಟ್ಟಿ ಸಂದೀಪ್ ಮೇಸ್ತನಿಗೆ ಯಾಕೆ ತೊಂದರೆ ಕೊಡುತ್ತಿಯಾ, ಮುಂದಕ್ಕೆ ನೀನು ಆತನಿಗೆ ಹೊರಗೆ ತಿರುಗಾಡಲು ಬಿಡದಿದ್ದರೆ, ಮದ್ದುಗುಡ್ಡೆಯಲ್ಲಿ ನಿನ್ನನ್ನು ಬದುಕಲು ಬಿಡುತ್ತಿಲ್ಲವೆಂದು ಜೀವ ಬೆದರಿಕೆಯೊಡ್ಡಿ, ಇಬ್ಬರೂ ಆಶಾ ಕಾರ್ಯಕರ್ತೆಯ ಕೈಯಲ್ಲಿದ್ದ ಕೋವಿಡ್ 18 ಸ್ಟಿಕ್ಕರನ್ನು ಎಳೆದುಕೊಂದು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಬಲ ಪಡಿಸಿ ಮಾನಕ್ಕೆ ದಕ್ಕೆ ಉಂಟಾಗುವಂತ್ತೆ ವರ್ತಿಸಿದ್ದಾರೆಂದು’ ಆಶಾ ಕಾರ್ಯಕರ್ತೆ ಪೋಲಿಸರಿಗೆ ದೂರು ನೀಡಿದ್ದಾಳೆ.
ಇದೀಗ ಪೋಲಿಸರು ಆರೋಪಿಗಳ ಮೇಲೆ ಎಫ಼್.ಐ.ಆರ್. ದಾಖಲಿಸಿ ಐಪಿಸಿ 1860 ಪ್ರಕಾರ ಬಂದಿಸಿದ್ದಾರೆ.