ಕುಂದಾಪುರ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ವರದಿ: ಶಾಂತಿ ರಾಣಿ ಬಾರೆಟ್ಟೊ

ಕುಂದಾಪುರ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕುಂದಾಪುರ, ಜೂ. ೨೨,  ಕುಂದಾಪುರ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ ೨೧ ರಂದು  ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.ಮುಖ್ಯ ಶಿಕ್ಷಕಿ ಶ್ರೀಮತಿ ಡೊರೊತಿ ಸುವಾರಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆರೋಗ್ಯಕರ ಜೀವನ ಸಾಗಿಸಲು ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದರು. ಶಿಕ್ಷಕಿ  ಶಾಂತಿ ರಾಣಿ ಇವರು ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು  ನಡೆಸಿ ಕೊಟ್ಟರು. ಶಿಕ್ಷಕಿ ಶ್ರೀಮತಿ ಸಿಂತಿಯ ಮತ್ತು ಶ್ರೀಮತಿ ಜ್ಯೋತಿ ಇವರು ಸಹಕರಿಸಿದರು.