JANANUDI.COM NETWORK

ಕುಂದಾಪುರ, ಅ.1: ಕುಂದಾಪುರ ಸರಕಾರಿ ಆಸ್ಪತ್ರೆಯ ಆವರಣದಲ್ಲಿ 74 ನೇಯ ಸ್ವಾತಂತ್ರ್ಯತ್ರ್ಸೋವನ್ನು ಕೋವಿಡ್ 19 ಕಾರಣದಿಂದ ಸರಳವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆಚರಿಸಿಲಾಯಿತು. ಅಸ್ಪತ್ರೆಯ ಆಡಳಿತಾಧಿಕಾರಿ ಡಾ|ರೊಬರ್ಟ್ ರೆಬೆಲ್ಲೊ ಧ್ವಜಾ ರೋಹಣಗೈದು ‘ಗಡಿಯಲ್ಲಿ ಯೋಧರ ಸೇವೆಯ ಬಗ್ಗೆ ನಾವು ಮಾತನಾಡುತ್ತಾ ಇರುತ್ತೇವೆ, ಆದರೆ ಇಂದು ಕೊರೊನಾದಿಂದಾಗಿ ವೈಧ್ಯರ, ವೈಧ್ಯಕೀಯ ಸಿಂಬಂದಿ, ಸಫಾಯಿ ಕರ್ಮಾಚಾರಿಗಳಿಗೆ ಯೋಧರಂತೆ, ಕೊರೊನಾ ವಿರುದ್ದ ಹೋರಾಡಲು ಒಂದು ಅವಕಾಶ ಸಿಕ್ಕಿದೆ. ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳ ಬೇಕಿದ್ದರೆ, ಅದರಲ್ಲಿ ವೈಧ್ಯಕೀಯ ಶಿಕ್ಷಣ ಕ್ಷೇತ್ರಗಳು ಪ್ರಾಮುಖ್ಯವಾಗುತ್ತವೆ, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಒರ್ವ ವ್ಯಕ್ತಿಯ ವಯೋಮಾನ 32 ವರ್ಷ ಇದ್ದದು ಈಗ 65 ವರ್ಷಕ್ಕೆ ದಾಟಿದೆ, ಇದಕ್ಕೆ ವೈದ್ಯರು, ವೈಧ್ಯಕೀಯ ಸಿಂಬಂದಿ ಮತ್ತು ವೈಧ್ಯೆಕೇತರ ಸಿಂಬಂದಿ ಕಾರಣಕರ್ತರು, ಅದಕ್ಕಾಗಿ ನಿಮೆಗೆಲ್ಲಾ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ಎಂದು ಸಂದೇಶ ನೀಡಿದರು.
ಬ್ಲಡ್ ಟೆಕ್ನಿಷಿಯನ್ ನವೀನ್ ಡಿಸೋಜಾ ಧ್ವಜ ವಂದನೆ ಸಲ್ಲಿಸಿದರು. ನರ್ಸಿಂಗ್ ಸುಪಿರೀಡೆಂಟ್ ಮಮತಾ, ನರ್ಸಗಳು, ಬ್ಲಡ್ ಟೆಕ್ನಿಷಿಯನ್‍ಗಳು, ವೈಧ್ಯಕೀಯ ಸಿಂಬಂದಿ, ವೈಧ್ಯಕೇತರ ಸಿಂಬಂದಿಗಳು ಉಪಸ್ಥಿತರಿದ್ದರು. ಡಾ|ಚಂದ್ರಶೇಖರ್ ನಾಯಕ್ ಕಾರ್ಯಕ್ರಮನಿರೂಪಿಸಿದರು.