JANANUDI NETWORK
ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನಲ್ಲಿ ಕಾರ್ಮೆಲ್ ಮಾತೆಯ ಹಬ್ಬ
ಕುಂದಾಪುರ, ಜು.16: ಸ್ಥಳಿಯ ಸಂತ ಜೋಸೆಫ್ ಕಾನ್ವೆಂಟಿನಲ್ಲಿ ಆಪೆÇಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 16 ರಂದು ಆಚರಿಸಿದರು.
ಹಬ್ಬದ ಪ್ರಯುಕ್ತ ಕುಂದಾಪುರ ಕಾನ್ವೆಂಟಿನ ಛಾಪೆಲ್ನಲ್ಲಿ ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ದಿವ್ಯ ಬಲಿ ಪೂಜೆಯನ್ನು ಆಚರಿಸಿದರು ‘ಕಾರ್ಮೆಲ್ ಅಂದರೆ ಒಂದು ಪವಿತ್ರ ಗುಡ್ಡ, ಪವಿತ್ರ ಪುಸ್ತಕದಲ್ಲಿ ದೇವರ ದರ್ಶನಗಳು ಗುಡ್ಡಗಳಲ್ಲಿ ಆಗುತ್ತಿವೆ ಎಂದು ಹೇಳುತ್ತದೆ. ಇಂತಹ ಗುಡ್ಡಗಳಲ್ಲಿ ಪಾವಿತ್ರ್ಯತೆ ಇರುತ್ತದೆ, ಅದಕ್ಕಾಗಿ ಪರ್ವತಗಳಿ ಅದರದೇ ಆದ ಸ್ಥಾನ ಮಾನವಿದೆ, ಮೇರಿ ಮಾತೆ ಕಾರ್ಮೆಲ್ ಗುಡ್ಡದ ಮೇಲೆ ಪ್ರತ್ಯಕ್ಷವಾಗಿದ್ದಕ್ಕೆ ಕಾರ್ಮೆಲ್ ಮಾತೆ ಎಂದು ಪ್ರಸಿದ್ದಿ ಪಡೆಯಿತು. ಯೇಸು ಗುಡ್ಡದ ಮೇಲೆ ಕುಳಿತು 8 ಭಾಗ್ಯಗಳನ್ನು ವಿವರಿಸುತ್ತಾರೆ, ಬಡವರಾದವರಿಗೆ, ದುಖಿಸುವರಿಗೆ, ಮುಗ್ದ ಸಾಮನ್ಯರಿಗೆ, ದೇವರ ಆಸೆ ಇಡೇರಿಸುವರಿಗೆ, ದಯೆ ತೋರುವರಿಗೆ, ಶುದ್ದ ಮನಸಿನವರಿಗೆ, ಶಾಂತಿಗಾಗಿ ಶ್ರಮಿಸುವರಿಗೆ, ನ್ಯಾಯಕ್ಕಾಗಿ ತೊಂದರೆ ಅನುಭವಿಸುವರಿಗೆ, ದೇವರನ್ನು ಕಾಣುವ ಭಾಗ್ಯ ದೊರಕುತ್ತದೆ ಎಂದು ಹೇಳಿದ್ದಾರೆ. ಇಂತಹ 8 ಭಾಗ್ಯಗಳಂತೆ ಮೇರಿ ಮಾತೆ ಜೀವಿಸಿದಳು. ಇವತ್ತು ಕಾರ್ಮೆಲ್ ಮಾತೆಯ ಹಬ್ಬವನ್ನು ಆಚರಿಸುವಾಗ ಮೇರಿ ಮಾತೆಯ ಆದರ್ಶವನ್ನು ಪಾಲಿಸಿ ಜಿವಿಸೋಣ’ ಎಂದು ಅವರು ಸಂದೇಶ ನೀಡಿದರು.
ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ವಾಯ್ಲೆಟ್ ತಾವ್ರೊ ಪ್ರಸ್ತಾವನೆಯಲ್ಲಿ ಕಾರ್ಮೆಲ್ ಮಾತೆಯ ಮಹತ್ವವನ್ನು ತಿಳಿಸಿ, ಕಾರ್ಮೆಲ್ ಮಾತೆ ನಮ್ಮೆಲ್ಲರನ್ನು ಆಶಿರ್ವದಿಸಲಿ ಎಂದು ಹಾರೈಸಿದರು. ಭಗಿನಿ ಕೀರ್ತನ ಗಾಯನ ಮಂಡಳಿಯ ನೇತ್ರತ್ವವನ್ನು ವಹಿಸಿದ್ದರು. ಈ ಹಬ್ಬದ ದಿವ್ಯ ಬಲಿಪೂಜೆಯಲ್ಲಿ ಹಲವಾರು ಭಕ್ತರು, ಕಾರ್ಮೆಲ್ ಸಹಾಯಕರು, ಬ್ಲೊಸಮ್ ಗುಂಪಿನವರು ಭಾಗವಹಿಸಿದ್ದರು.