ಕುಂದಾಪುರ ವ್ರತ್ತ ಮಟ್ಟದ ಹುಡುಗರ ವಾಲಿಬಾಲ್ ಪಂದ್ಯಾಟದಲ್ಲಿ ಹೋಲಿ ರೋಜರಿ ಆಂಗ್ಲಾ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ

JANANUDI NETWORK

ಕುಂದಾಪುರ ವ್ರತ್ತ ಮಟ್ಟದ ಹುಡುಗರ ವಾಲಿಬಾಲ್ ಪಂದ್ಯಾಟದಲ್ಲಿ ಹೋಲಿ ರೋಜರಿ ಆಂಗ್ಲಾ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಥಮ ಸ್ಥಾನ


ಕುಂದಾಪುರ, ಜು.31: ಕುಂದಾಪುರ ವ್ರತ್ತ ಮಟ್ಟದ ಬಾಲಕರ ಹಿರಿಯ ಪ್ರಾಥಮಿಕ ಶಾಲೆಗಳಿಗಾಗಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ ಕುಂದಾಪುರದ ಹೋಲಿ ರೋಜರಿ ಆಂಗ್ಲಾ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಪಡೆಯಿತು.
ಗಂಗೊಳ್ಳಿ ತೌಹಿದ್ ಆಂಗ್ಲಾ ಮಾಧ್ಯಮ ಶಾಲೆಯ ಮೈದಾನದಲ್ಲಿ ನಡೆದ ಪಂದ್ಯಾಟದ ಕಾರ್ಯಕ್ರಮದಲ್ಲಿ ಶಾಲೆಯ ಸಂಚಲಾಕರಾದ ಅಫ್ತರ್ ಅಹ್ಮದ್ ಖಾನ್, ದೈಹಿಕ ಪರಿವೀಕ್ಷಣ ಅಧಿಕಾರಿ ದತ್ತಾತ್ರಯ ನಾಯ್ಕ್, ತೌಹಿದ್ ಆಂಗ್ಲಾ ಮಾಧ್ಯಮ ಶಾಲೆಯ ಮುಖ್ಯೋಪಧ್ಯಾಯಿನಿ ಫಿರ್ದೊಸ್, ದೈಹಿಕ ಶಿಕ್ಷಕಿ ರೇಶ್ಮಾ ಮೆಂಡೊನ್ಸಾ, ಮತ್ತಿತರು ಉಪಸ್ಥಿತರಿದ್ದರು.
ಹೋಲಿ ರೋಜರಿ ಆಂಗ್ಲಾ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ, ಮುಖ್ಯೋಪಾಧ್ಯಾಯಿನಿ ಭಗಿನಿ ತೆರೆಜಾ ಶಾಂತಿ ತಂಡಕ್ಕೆ ಅಭಿನಂದಿಸಿದ್ದಾರೆ. ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದರು.