ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ನೂತನ ಪದಾಧಿಕಾರಿಗಳು – -ಹೆರಿಕ್ ಗೊನ್ಸಾಲ್ವಿಸ್ ಅಧ್ಯಕ್ಷರಾಗಿ ಆಯ್ಕೆ

ಕುಂದಾಪುರ ವಲಯ ಕಥೊಲಿಕ್ ಸಭಾ ಸಮಿತಿಗೆ ನೂತನ ಪದಾಧಿಕಾರಿಗಳು -ಹೆರಿಕ್ ಗೊನ್ಸಾಲ್ವಿಸ್ ಅಧ್ಯಕ್ಷರಾಗಿ ಆಯ್ಕೆ


ಕುಂದಾಪುರ,ಮಾ.19: ಕುಂದಾಪುರ ವಲಯ ಮಟ್ಟದ ಕಥೊಲಿಕ್ ಸಭಾಸಮಿತಿಗೆ ಹೊಸ ಪದಾಧಿಕಾರಿಗಳ ಚುನಾವಣೆಯು ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಜರುಗಿತು. ಹೆರಿಕ್ ಗೊನ್ಸಾಲ್ವಿಸ್ ಗಂಗೊಳ್ಳಿ, ಈ ಸಾಲಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು, ಕಾರ್ಯದರ್ಶಿಯಾಗಿ ಲೀನಾ ತಾವ್ರೊ ಪಿಯುಸ್ ನಗರ್,

 

ನಿಕಟ ಪೂರ್ವ ಅಧ್ಯಕ್ಷರು ಮೈಕಲ್ ಪಿಂಟೊ ಕೋಟಾ, ನಿಯೋಜಿತ ಅಧ್ಯಕ್ಷರಾಗಿ ಮೇಬಲ್ ಡಿಸೋಜಾ ಬಸ್ರೂರು, ಉಪಾಧ್ಯಕ್ಷರಾಗಿ ಎಲ್ಟನ್ ರೆಬೇರೊ ಗಂಗೊಳ್ಳಿ, ಸಹ ಕಾರ್ಯದರ್ಶಿಯಾಗಿ ಪ್ರೇಮಾ ಡಿಕುನ್ಹಾ ಕುಂದಾಪುರ, ಖಚಾಂಚಿಯಾಗಿ ವಿಲ್ಸನ್ ಡಿಆಲ್ಮೇಡಾ ಕುಂದಾಪುರ, ಸಹ ಖಚಾಂಚಿಯಾಗಿ ವಿಲ್ಫ್ರ್ರೆಡ್ ಮಿನೇಜೆಸ್ ಪಿಯುಸ್ ನಗರ್, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ವಾಲ್ಟರ್ ಡಿಸೋಜಾ ಕುಂದಾಪುರ, ರಾಜಕೀಯ ಸಂಚಾಲಕಾರಾಗಿ, ಆರ್ಚಿಬಾಲ್ಡ್ ಕ್ವಾಡರ್ಸ್ ಪಿಯುಸ್ ನಗರ್, ಸರ್ಕಾರಿ ಸವಲತ್ತು ಸಂಚಾಲಕರಾಗಿ ಶೈಲಾ ಡಿಆಲ್ಮೇಡಾ ಕುಂದಾಪುರ, ಸ್ತ್ರೀ ಸಶಕ್ತೀಕರಣ ಸಂಚಾಲಕಿಯಾಗಿ ಸೀಮಾ ಡಿಸಿಲ್ವಾ ತ್ರಾಸಿ, ಲೆಕ್ಕ ತಪಸಣಿಗನಾಗಿ ಪ್ಯಾಟ್ರಿಕ್ ಮೆಂಡೊನ್ಸಾ ತಲ್ಲೂರು ಇವರುಗಳು ಆಯ್ಕೆಗೊಂಡರು. ಚುನಾವಣ ಪ್ರಕ್ರಿಯೆಯನ್ನು ಕೇಂದ್ರಿಯ ಮಾಜಿ ಅಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೊ, ಮಾಜಿ ಕುಂದಾಪುರ ವಲಯಧ್ಯಕ್ಷರಾದ ಫ್ಲಾಯ್ವನ್ ಡಿಸೋಜಾ ನೆಡೆಸಿಕೊಟ್ಟರು. ಅಧ್ಯಾತ್ಮಿಕ ನಿರ್ದೇಶಕರಾದ ವಲಯ ಪ್ರಧಾನ ಧರ್ಮಗುರು ಅ|ವ|ಸ್ಟ್ಯಾನಿ ತಾವ್ರೊ ಆರಿಸಿ ಬಂದವರನ್ನು ‘ಸಮಾಜಕ್ಕೆ ಒಳಿತಾಗುವ ಒಳ್ಳೆಯ ಕೆಲಸಗಳನ್ನು ಮಾಡ ಬೇಕೆಂದು ಕರೆ ಕೊಟ್ಟು’ ಶುಭ ಹಾರೈಸಿದರು.