ಕುಂದಾಪುರ ವಲಯ ಕಥೊಲಿಕ್ ಸಭಾದಿಂದ ಸೌರ್ಹಾದ ಕ್ರಿಸ್ಮಸ್ – ಸಮಾಜದಲ್ಲಿ ಪ್ರೀತಿಯ ಸೆಲೆ ಹೆಚ್ಚಬೇಕು ದ್ವೇಷದ ಸೆಲೆ ಬತ್ತಬೇಕು’ ಕೆ.ರಾಧಕ್ರಷ್ಣ ಶೆಟ್ಟಿ

JNANUDI.COM NETWORK

 

ಕುಂದಾಪುರ ವಲಯ ಕಥೊಲಿಕ್ ಸಭಾದಿಂದ ಸೌರ್ಹಾದ ಕ್ರಿಸ್ಮಸ್ – ಸಮಾಜದಲ್ಲಿ ಪ್ರೀತಿಯ ಸೆಲೆ ಹೆಚ್ಚಬೇಕು ದ್ವೇಷದ ಸೆಲೆ ಬತ್ತಬೇಕು’ ಕೆ.ರಾಧಕ್ರಷ್ಣ ಶೆಟ್ಟಿ

 

 

 

 

ಕುಂದಾಪುರ, ಡಿ.16: ‘ಸಮಾಜದಲ್ಲಿ ಪ್ರೀತಿಯ ಸೆಲೆ ಹೆಚ್ಚಬೇಕು ದ್ವೇಷದ ಸೆಲೆ ಬತ್ತಬೇಕು’ ನಾವು ಇವತ್ತು ಜಾತಿ ಧರ್ಮ ಬೆರೆತು ಒಟ್ಟಾಗಿ ಜೀವಿಸಬೇಕು, ನಾವು ನಮ್ಮಲ್ಲಿ ಮಾನವೀಯತೆ ಬೆಳೆಸಿಕೊಂಡು ನೀಜ ಮಾನವರಾಗಬೇಕು, ‘ಯೇಸು ಭೋದಿಸಿದ್ದು ನಿನ್ನ ನೆರೆಹೊರೆಯರನ್ನು ಪ್ರೀತಿಸು, ಅದರಂತೆ ನಾವು ಪ್ರೀತಿಸಿದರೆ ಎಲ್ಲಾ ಕಡೆ ಪ್ರೀತಿ ಇರುತ್ತದೆ. ಅದರಲ್ಲಿಯೂ ಯಾರು ಅವಕಾಶಾಗಳಿಂದ ವಂಚೀತರಾಗುತ್ತಾರೊ ಅವರನ್ನು ಹೆಚ್ಚು ಪ್ರೀತಿಸಿ, ಮದರ್ ತೆರೆಜಾ ಮಾಡಿದ್ದು ಅದೇ’ ಎಂದು ಬಸ್ರೂರು ಶ್ರೀ ಶಾರದ ಕಾಲೇಜಿನ ನಿವ್ರತ್ತ ಪ್ರಾಂಶುಪಾಲರಾದ ಕೆ.ರಾಧಕ್ರಷ್ಣ ಶೆಟ್ಟಿ ಹೇಳಿದರು. ಅವರು ಭಾನುವಾರ ಡಿಸೆಂಬರ್ 15 ರಂದು ಸಂಜೆ ಕುಂದಾಪುರ ಸಂತ ಮೇರಿಸ್ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ನೆಡೆದ ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕಂದಾಪುರ ವಲಯ ಆಯೋಜಿಸಿದ್ದ ಸೌರ್ಹಾದ ಕಿಸ್ಮಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಒಂದು ಸಮೀಕ್ಷೆಯ ಪ್ರಕಾರ ಭಾರತ ದೇಶವು ಪ್ರೀತಿ ಶಾಂತಿಯಲ್ಲಿ ಪ್ರಪಂಪಚದಲ್ಲಿ 140 ನೇ ಸ್ಥಾನ ಇದೆ, ಹಾಗೇ ಶಸ್ತಾಷ್ರಗಳ ಶೇಖರಣೆ ಮಾಡುವಲ್ಲಿ 4 ನೆ ಸ್ಥಾನ ಹೊಂದುತ್ತದೆ, ನಾವು ನೆರೆ ರಾಷ್ಟ್ರಗಳಲ್ಲಿಯು ಪ್ರೀತಿಸುವುದು ಅಗತ್ಯವಾಗಿದೆ, ದ್ವೇಷ ಕಡಿಮೆಯಾದ ಹಾಗೆ ಶಸಾಷ್ತ್ರಗಳ ಶೇಖರಣೆ ಕಡಿಮೆಯಾಗುತ್ತವೆ. ಜನರು ಸೌರ್ಹಾದತೆಯಿಂದ ಬಾಳಬೇಕು ಹಾಗೆ ರಾಷ್ಟ್ರ ರಾಷ್ಟ್ರಗಳು ಸೌರ್ಹಾದತೆಯಿಂದ ಇರಬೇಕು’ ತಿಳಿಸಿದರು.
‘ಯೇಸು ಈ ಪ್ರಪಂಚದಲ್ಲಿ ಹುಟ್ಟಿದ್ದು, ನಮಗೆಲ್ಲಾ ಶಾಂತಿ ಪ್ರೀತಿ ಸಿಗಲು, ಸತ್ಯ ಅರಿತು ನಮ್ಮನ್ನು ಸ್ವರ್ಗರಾಜ್ಯದಲ್ಲಿ ಕರೆದುಕೊಂಡು ಹೋಗಲು. ಯೇಸು ತಾನು ಏನು ಭೋದಿಸಿದ್ದನೊ ಅದನ್ನು ಅವರು ಪ್ರಮಾಣಿಕವಾಗಿ ತಮ್ಮ ಜೀವನದಲ್ಲಿ ಅಳವಡಿಕೊಂಡರು. ಯೇಸು ತಮ್ಮ ಜೀವನದಲ್ಲಿ ವಂಚೀತರನ್ನು, ಕಡು ಬಡವರನ್ನು, ಆಶಿರ್ವದಿಸಿದರು ಪ್ರೀತಿಸಿದರು. ಕುಂಟರನ್ನು ನಡೆಯುವಂತೆ, ಕುರುಡರಿಗೆ ಕಾಣುವಂತೆ ಮಾಡಿದರು. ಕುಷ್ಟ ರೋಗಿಗಳನ್ನು ಗುಣ ಮಾಡಿದರು, ಸತ್ತವರಿಗೆ ಜೀವ ಕೊಟ್ಟರು. ಪ್ರೀತಿ ಶಾಂತಿ ಕರುಣೆ, ಕ್ಷಮೆ, ಸತ್ಯ ನೀತಿಯ ಈ ತತ್ವಗಳಿಂದ ಇಡೀ ಪ್ರಪಂಚದಲ್ಲಿ ಜಾತಿ ಧರ್ಮ ಮರೆತು ಯೇಸುವಿನ ಮೇಲೆ ಗೌರವ ಅಭಿಮಾನ ಇಟ್ಟುಕೊಂಡವರು. ಅವರು ನಮಗೆ ಮಾನವೀಯತೆ ಸತ್ಯವನ್ನು ತಿಳಿಸಿಕೊಟ್ಟರು. ಮಾನವೀಯತೆ ಹೆಚ್ಚಿದಲ್ಲಿ ಆ ಸಮಾಜ ಆರೋಗ್ಯಕರವಾದ ಸಮಾಜವಾಗುತ್ತೆ ಎಂದು’ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಕ್ರಿಸ್ಮಸ್ ಸಂದೇಶವನ್ನು ನೀಡಿದರು. ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರಾದ ಯಾಕೂಬ್ ಖಾದರ್ ಗುಲ್ವಾಡಿ ‘ನಮ್ಮಲ್ಲಿ ಮಾನವೀಯತೆ ಮೌಲ್ಯಗಳು ಕಡಿಮೆಯಾದಾಗ, ದ್ವೇಷ, ಕಿಚ್ಚು, ಕೊಲೆ,ಸುಲಿಗೆ, ಹಿಂಸೆ, ಭಯೊತ್ಪಾದನೆ ಹೆಚ್ಚುತ್ತೆ, ಎಲ್ಲರನ್ನು ಸಮಾನರಾಗಿ ಕಾಣುವ’ ಎಂದು ಶುಭಾಸಂಶಾನೆ ಮಾಡಿದರು. ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡರ್ಸ್ ಮತ್ತು ಕುಂದಾಪುರ ಸಿ.ಎಸ್.ಐ. ಚರ್ಚಿನ ಸಭಾಪಾಲಕರಾದ ವಂ|ಜೆ.ಜಯಕುಮಾರ್ ಕೋಟ್ಯಾನ್ ಶುಭ ನುಡಿಗಳನ್ನಾಡಿದರು.
ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಕುಂದಾಪುರ ವಲಯ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಿಯೋಜಿತ ಅಧ್ಯಕ್ಷೆ ಮೇಬಲ್ ಡಿಸೋಜಾ ಉಪಸ್ಥಿತರಿದ್ದರು ಕಾರ್ಯಕ್ರಮದ ಸಂಚಾಲಕ ಫ್ಲೈವನ್ ಡಿಸೋಜಾ ಸ್ವಾಗತಿಸಿದರು. ಕ. ಸ. ಕುಂದಾಪುರ ವಲಯ ಕಾರ್ಯದರ್ಶಿ ಲೀನಾ ತಾವ್ರೊ ವಂದಿಸಿದರು. ಶೈಲಾ ಡಿ ಆಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ಕಥೊಲಿಕ್ ಸಭಾ ಘಟಕ ಪ್ರಾರ್ಥನೆ ಗೀತೆ ಹಾಡಿದರು. ಹಲವು ಚರ್ಚಗಳ ವತಿಯಿಂದ ಕ್ರಿಸ್ಮಸ್ ಸಂದೇಶ ಸಾರುವ ನ್ರತ್ಯ, ಗಾಯನಗಳನ್ನು ಪ್ರದರ್ಶಿಸಲಾಯಿತು. ವಲಯದ ಹಲವು ಚರ್ಚಗಳ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.