ಕುಂದಾಪುರ ವಂಡ್ಸೆ ಮೂಲದ ವಿದ್ಯಾರ್ಥಿನಿ ನಾ ಪತ್ತೆ

ಕುಂದಾಪುರ ವಂಡ್ಸೆ ಮೂಲದ ವಿದ್ಯಾರ್ಥಿನಿ ನಾ ಪತ್ತೆ

ಕುಂದಾಪುರ, ಮಾ.3. ಮಂಗಳೂರು ನಗರದ ಕಾಲೇಜು ಒಂದರಲ್ಲಿ ಬಿ.ಎ. ವ್ಯಾಸಂಗ ಮಾಡುತಿದ್ದ ವಿದ್ಯಾರ್ಥಿನಿಯೊಬ್ಬಳು ನಾ ಪತ್ತೆಯಾದ ಪ್ರಕರಣ ದಾಖಲಾಗಿದೆ.

   ಕುಂದಾಪುರ ವಂಡ್ಸೆ ಮೂಲದ ದಿವ್ಯಾ ತೋಮಸ್ (25) ನಾ ಪತ್ತೆಯಾದವರು. ಇವರು ಕುಂದಾಪುರ ವಂಡ್ಸೆ ಸಮೀಪದ ನೂಜಾಡಿ ನಿವಾಸಿಯಾಗಿದ್ದು. ಇವಳು ಫೆಬ್ರವರಿ 22 ರಂದು ಊರಿಗೆ ಬಂದಿದ್ದು, ಫೆಬ್ರವರಿ 23 ರಂದು ಆಕೆಯ ಹೆತ್ತವರು ಆಕೆಯನ್ನು ಕುಂದಾಪುರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿಸಿ ಮಂಗಳೂರಿಗೆ ಕಳುಹಿಸಿದ್ದರು, ಆದರೆ ದಿವ್ಯಾ ಮಂಗಳೂರು ಕಾಲೇಜಿಗೆ ತಲುಪಿಲ್ಲಾ. ಹಾಗಾಗಿ ದಿವ್ಯಾಳ ತಂದೆ ಎಲ್ಲಾ ಕಡೆ ಹುಡುಕಾಡಿ ಅವಳು ಸಿಗದ ಕಾರಣ, ಮಂಗಳೂರಿನಲ್ಲಿ ಇಕೆ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ.

    ದಿವ್ಯಾ ೫.೩ ಇಂಚು ಎತ್ತರದವಳಾಗಿದ್ದು, ಗೋಧಿ ಮೈ ಬಣ್ಣ, ಬಾಬ್ ಕಟ್ ಕೂದಲು ಹೊಂದಿದ್ದು, ಜಿನ್ಸ್ ಪ್ಯಾಂಟ್ ಟೀ ಶರ್ಟ್ ಧರಿಸಿರುತ್ತಾಳೆ. ಆಕೆಯ ಎಡ ಕೈ ಒಂದು ಬಲ ಹೀನವಾಗಿದ್ದು. ಇವಳನ್ನು ಯಾರಾದರೂ ಕಂಡಲ್ಲಿ, ಪತ್ತೆಯಾದಲ್ಲಿ ಮಂಗಳೂರು ಬಂದರು ಠಾಣೆ (0824-2220516)   ಮಾಹಿತಿ ನೀಡಲು ಕೋರಲಾಗಿದೆ.