ಕುಂದಾಪುರ ಲೂರ್ಡ್ಸ್ ಮಾತಾ ವಾಳೆಯಲ್ಲಿ ತಮ್ಮ ಪಾಲಕಿಯ ಹಬ್ಬ
ಕುಂದಾಪುರ, ಫೆ.10: ಕುಂದಾಪುರ ಮಾತೆ ಲೂರ್ಡ್ಸ್ ಮಾತಾ ವಾಳೆಯಲ್ಲಿ, ವಾಳೆಯವರು ತಮ್ಮ ಪಾಲಕಿಯ ಯ ಹಬ್ಬವನ್ನು ಆಚರಿಸಿದರು. ಬೆಳಿಗ್ಗೆ ರೊಜರಿ ಮಾತಾ ಇಗರ್ಜಿಯಲ್ಲಿ ಪವಿತ್ರ ಬಲಿದಾನವನ್ನು ವಾಳೆಯವರು ಚರ್ಚ್ ಕುಟುಂಬದ ಜೊತೆ, ಪ್ರಾಂಶುಪಾಲ ಧರ್ಮಗುರು ವಂ.ಪ್ರವೀಣ್ ಅಮ್ರತ್ ಮಾರ್ಟಿಸ್ ಪ್ರಧಾನ ಯಾಜಕತ್ವದಲ್ಲಿ ಹಾಗೂ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಸಹಯಾಜಕರಾಗಿ ಪವಿತ್ರ ಬಲಿದಾನವನ್ನು ಅರ್ಪಿಸಿಲಾಯಿತು.
ಸಂಜೆ ವಾಳೆಯ ಸುಧಾಕರ ಶಾಂತಿ ರಾಣಿ ಬಾರೆಟ್ಟೊ ಇವರ ಆಶ್ರಯದಲ್ಲಿ ವಾಳೆಯವರ ಸಮ್ಮಿಲನ ಕಾರ್ಯಕ್ರಮ ನೆಡೆಯಿತು. ‘ಇಂತಹ ಹಬ್ಬಗಳನ್ನು ಆಚರಿಸುವುದರಿಂದ ವಾಳೆಯಯಲ್ಲಿ ಒಗ್ಗಟ್ಟು, ಪ್ರೀತಿ, ವಿಶ್ವಾಸ ಹೆಚ್ಚುತ್ತದೆ, ನಿಮ್ಮಿಂದಾಗಿ ಲೂರ್ಡ್ಸ್ ಮಾತೆಯ ಭಕ್ತಿ ಹೆಚ್ಚಲಿ, ನಿಮ್ಮ ವಾಳೆಯಲ್ಲಿ ಯುವಕರು ಹೆಚ್ಚು ಕಂಡು ಬರುತ್ತಾರೆ, ಅವರು ಯುವ ಚಟುವಟಿಕೆಯಲ್ಲಿ ಭಾಗವಹಿಸ ಬೇಕು, ಮುಂಬರುವ ಯುವ ಸಮ್ಮೇಳನದಲ್ಲಿ ಭಾಗವಹಿಸಿ ಯುವಕರು ಅದರ ಪ್ರಯೋಜನವನ್ನು ಪಡೆಯಬೇಕೆಂದು’ ಆಗ್ರಹಿಸಿದರು..
ಸಹಾಯಕ ಧರ್ಮಗುರು ರೋಯ್ ಲೋಬೊ ‘ನಿಮ್ಮ ವಾಳೆಯದಲ್ಲಿ ಏಳೆಯ ಪ್ರಾಯದವರು ಹೆಚ್ಚಿದ್ದಾರೆ, ಅವರು ಯಾಜಕರ ಜೊತೆ ಸಲುಗೆಯಿಂದ ಇರ ಬೇಕು, ಹೆತ್ತವರು ಅವರನ್ನು ಯಾಜಕರನ್ನಾಗಿ ಪ್ರೇರಪಿಸ ಬೇಕು’ ಎಂದು ಸಲಹೆ ನೀಡಿದರು. ಪ್ರಾಂಶುಪಾಲ ಧರ್ಮಗುರು ವಂ.ಪ್ರವೀಣ್ ಅಮ್ರತ್ ಮಾರ್ಟಿಸ್ ಬೋಜನದ ಪ್ರಾಥನೆಯನ್ನು ನೆಡೆಸಿಕೊಟ್ಟರು. ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಕಿರು ಸಮುದಾಯದ ಸಂಚಾಲಕಿ ಎಲಿಜಾಬೆತ್ ಡಿಸೋಜಾ, 18 ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಉಪಸ್ಥಿತರಿದ್ದು ಶುಭ ಕೋರಿದರು. ಈ ಸಂದರ್ಭದಲ್ಲಿ ಮಕ್ಕಳು ಮತ್ತು ಹಿರಿಯವರು ನ್ರತ್ಯ, ಗಾಯನ, ಹಾಸ್ಯ ರೂಪಕಗಳನ್ನು ಪ್ರದರ್ಶಿಸಿದರು. ವಾಳೆಯ ಪ್ರತಿನಿಧಿ ಅಂಟೋನಿ ಫೆರ್ನಾಂಡಿಸ್ ಉಪಸ್ಥಿತರಿದ್ದು ವಾಳೆಯ ಕಿರು ಸಮುದಾಯದ ಪ್ರೇರಕಿ ಗ್ರೆಟ್ಟಾ ಡಿಸೋಜಾ ವರದಿ ವಾಚಿಸಿದರು, ವಾಳೆಯಾ ಗುರಿಕಾರ ವಾಲ್ಟರ್ ಡಿಸೋಜಾ ಸ್ವಾಗತಿಸಿದರು. ಇನ್ನೊಬ್ಬಳು ಪ್ರತಿನಿಧಿಯಾದ ಶಾಂತಿ ರಾಣಿ ಬಾರೆಟ್ಟೊ ಧನ್ಯವಾದಗಳನ್ನು ಅರ್ಪಿಸಿದರು. ಲುವಿಸ್ ಜೆ. ಫೆರ್ನಾಂಡಿಸ್ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು.