ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಸರಳ ರೀತಿಯಲ್ಲಿ ಮೊಂತಿ ಹಬ್ಬದ ಆಚರಣೆ

JANANUDI.COM NETWORK

ಕುಂದಾಪುರ, ಸೆ.8: ಉಡುಪಿ ಧರ್ಮ ಪ್ರಾಂತ್ಯದ ಅತಿ ಹಿರಿಯ ಇಗರ್ಜಿಯಾಗಿದ್ದು 450 ನೇ ವರ್ಷದ ಆಚರಣೆಯಲ್ಲಿರುವ ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ ಮೊಂತಿ ಹಬ್ಬದ ಆಚರಣೆ ಈ ಸಲ ಕೊರೊನಾ ಹಾವಳಿಯಿಂದ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು. ಮಕ್ಕಳಿಗೆ ಈ ಹಬ್ಬ ಅತ್ಯಂತ ಖುಷಿ ಕೊಡುವ ಹಬ್ಬ, ಅವರು ಕನ್ಯೆ ಮೇರಿ ಮಾತೆಗೆ ಹೂಗಳನ್ನು ಅರ್ಪಿಸಿ ಸಂತೋಷ ಪಡುತಿದ್ದರು, ಆದರೆ ಈ ಸಲ ಕೊರೊನಾ ಕಾರಣ ಚಿಕ್ಕ ಮಕ್ಕಳು ಬಲಿದಾನ ಪೂಜೆಗೆ ಬರಲು ಅವಕಾಶ ಸಿಗದೆ ಹೂವುಗಳನ್ನು ಅರ್ಪಿಸುವ ಅವಕಾಶದಿಂದ ವಂಚೀತರಾದರು.
ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಹೊಸ ತೆನೆಗಳನ್ನು ಆಶಿರ್ವಾದಿಸಿ, ಪವಿತ್ರ ಬಲಿದಾನವನ್ನು ಅರ್ಪಿಸಿ ಹಬ್ಬದ ಶುಭಾಷಯವನ್ನು ನೀಡಿದರು.

ಸಹ ಧರ್ಮಗುರುಗಳಾದ ವಂ|ವಿಜಯ್ ಡಿಸೋಜಾ ‘ಮೇರಿ ಮಾತೆ ಎಲ್ಲರಿಗೂ ಆದರ್ಶ ಮಾತೆ, ಮೇರಿ ಮಾತೆ ಪಾವಿತ್ರ್ಯತೆ, ವಿನ್ರಮತೆ ಉದಾರತೆ, ಸೇವಾ ಮನೋಭಾವದಿಂದ ಕೂಡಿದವಳು, ಮೇರಿ ಮಾತೆಯ ಈ ಗುಣಗಳನ್ನು ಅಳವಡಿಸಿಕೊಂಡು ನಾವು ಬಾಳೋಣ’ ಎಂದು ಸಂದೇಶ ನೀಡಿದರು.

ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಮಾರ್ಟಿಸ್ ಬಲಿದಾನದಲ್ಲಿ ಸಹ ಭಾಗಿಯಾಗಿದ್ದರು. ಪಾಲನ ಮಂಡಳಿ ಉಪಾಧ್ಯಕ್ಷ ಎಲ್.ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು