ಕುಂದಾಪುರ: ರೆಡ್‌ಕ್ರಾಸ್‌ಎನ್ನುವುದು ಸೇವೆಗಾಗಿಯೇಇರುವ ಸಂಸ್ಥೆ. ಸೇವೆಯೇ ಅದರ ಮೂಲ ಧ್ಯೇಯಎಂದು ಕು0ದಾಪುರತಾಲೂಕಾ ಉಪವಿಭಾಗಾಧಿಕಾರಿ ರಾಜು ಕೆ. ಅಭಿಪ್ರಾಯಪಟ್ಟರು.

JANANUDI.COM NETWORK 

 

 

ಕುಂದಾಪುರ: ರೆಡ್‌ಕ್ರಾಸ್‌ಎನ್ನುವುದು ಸೇವೆಗಾಗಿಯೇಇರುವ ಸಂಸ್ಥೆ. ಸೇವೆಯೇ ಅದರ ಮೂಲ ಧ್ಯೇಯಎಂದು ಕು0ದಾಪುರತಾಲೂಕಾ ಉಪವಿಭಾಗಾಧಿಕಾರಿ ರಾಜು ಕೆ. ಅಭಿಪ್ರಾಯಪಟ್ಟರು.

 

ಅವರುಡಿಸೆಂಬರ್ ೨ರಂದು ಇಲ್ಲಿನ ಭಂಡಾಕಾರ‍್ಸ್ಕಾಲೇಜಿನಲ್ಲಿಯುಥ್‌ರೆಡ್‌ಕ್ರಾಸ್ ವಿಂಗ್, ಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿಉಡುಪಿ ವಿಬಾಗ ಮತ್ತುಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರತಾಲೂಕುಅವರ ಸಹಯೋಗದಲ್ಲಿ“ಸಾಮಾಜಿಕ ತುರ್ತುಪರಿಸ್ಥಿತಿಯಲ್ಲಿ ಸ್ವಯಂಸೇವಕರಜವಾಬ್ದಾರಿ”ಕುರಿತುಎರಡು ದಿನಗಳ ಕಾಲ ನಡೆಯಲಿರುವತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಯುವಕರನ್ನು ಗಮನಿಸಿದರೆ ತುಂಬಾ ಸಂತೋಷವಾಗುತ್ತದೆ. ಅವರಲ್ಲಿನಆತ್ಮವಿಶ್ವಾಸ, ಸೇವಾ ಮನೋಭಾವಗಳು ನಿಜಕ್ಕೂ ಶ್ಲಾಘನೀಯಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಭಂಡಾಕಾರ‍್ಸ್ಕಾಲೇಜಿನ ಪ್ರಾಂಶುಪಾಲರಾದಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ ನಮ್ಮ ಮುಂದೆ ಜವಾಬ್ದಾರಿಗಳಿವೆ. ಅದನ್ನುಅರಿಯಬೇಕು. ಅಲ್ಲದೇ ವಿಶೇಷ ಸಂದರ್ಭಗಳಲ್ಲಿ ನಮ್ಮ ಜವಾಬ್ದಾರಿಗಳನ್ನು ಅರಿತು ಮುನ್ನಡೆಯಬೇಕುಎಂದು ಹೇಳಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನುಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರತಾಲೂಕುಘಟಕದಅಧ್ಯಕ್ಷರಾದಎಸ್.ಜಯಕರ ಶೆಟ್ಟಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರತಾಲೂಕುಘಟಕದ ಕಾರ್ಯದರ್ಶಿಗಳಾದ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸಂಯೋಜಕರಾದ ಮುತ್ತಯ್ಯ ಶೆಟ್ಟಿ, ಸಂಪನ್ಮೂಲ ವ್ಯಕ್ತಿಗಳಾದ ಶಕೀಬ್ ಎಂ.ಎ, ಎಸ್.ಇ.ಆರ್.ವಿ ತರಬೇತುದಾರ, ಬಳ್ಳಾರಿ, ಮತ್ತುಡಾ.ಕೀರ್ತಿಪಾಲನ್ , ಎಸ್.ಇ.ಆರ್.ವಿ ತರಬೇತುದಾರಡಾ. ಮಲ್ಲಿ, ಗಣೇಶ್‌ಆಚಾರ್ ಉಪಸ್ಥಿತರಿದ್ದರು.
ಇಂಡಿಯನ್‌ರೆಡ್‌ಕ್ರಾಸ್ ಸೊಸೈಟಿ, ಕುಂದಾಪುರತಾಲೂಕುಘಟಕದಉಪಾಧ್ಯಕ್ಷರಾದಡಾ.ಉಮೇಶ್ ಪುತ್ರನ್ ಸ್ವಾಗತಿಸಿದರು. ಕಾಲೇಜಿನಯುಥ್‌ರೆಡ್‌ಕ್ರಾಸ್ ವಿಂಗ್‌ನಕಾರ್ಯಕ್ರಮಾಧಿಕಾರಿಯಾದ ಪ್ರೊ.ಸತ್ಯನಾರಾಯಣ ವಂದಿಸಿದರು. ಕಾಲೇಜಿನಯುಥ್‌ರೆಡ್‌ಕ್ರಾಸ್ ವಿಂಗ್‌ನಕಾರ್ಯಕ್ರಮಾಧಿಕಾರಿಣಿಯಾದ ವಿದ್ಯಾರಾಣಿಕಾರ್ಯಕ್ರಮ ನಿರ್ವಹಿಸಿದರು.