ಕುಂದಾಪುರ : ನೀತಿ ಶಿಕ್ಷಣವು ನಮ್ಮನ್ನು ಸನ್ಮಾರ್ಗದಲ್ಲಿ ಜೀವಿಸಲು ಕಲಿಸುತ್ತದೆ

ಕುಂದಾಪುರ : ನೀತಿ ಶಿಕ್ಷಣವು ನಮ್ಮನ್ನು ಸನ್ಮಾರ್ಗದಲ್ಲಿ ಜೀವಿಸಲು ಕಲಿಸುತ್ತದೆ 


ಕುಂದಾಪುರ, ಫೆ.26: ‘ಕ್ರೈಸ್ತ ಶಿಕ್ಷಣ ಪಡೆದ ನಾವು ಸನ್ಮಾನ ಮಾರ್ಗದಲ್ಲಿ ನೆಡೆಯಲು ಪ್ರೇರಣೆ ಲಬ್, ನೀತಿ ಶಿಕಭಿಸುತ್ತದೆ, ನೀತಿ ಶಿಕ್ಷಣ ಅಂದರೆ ವಿಸ್ವಾಸದ ಪೆÇೀಷಣೆ, ನೀತಿ ಶಿಕ್ಷಣ ಪಡೆದ ನಾವು ಸಮಾಜದಲ್ಲಿ ಒಳ್ಳೆಯ ಜೀವನವನ್ನು ಜೀವಿಸಬಹುದು, ಇಂದು ನೀತಿ ಶಿಕ್ಷಣ ದಿವಸ ಮಾತ್ರವಲ್ಲಾ, ಇದೊಂದು ನೀತಿ ಶಿಕ್ಷಣದ ಸಂಭ್ರಮ ಕಾರಣ ಮಕ್ಕಳು ನೀತಿ ಶಿಕ್ಷಣ ಪಡೆದು ನೀವು ಸನ್ಮಾರ್ಗದಲ್ಲಿ ನೆಡೆಯಲು ಶಿಕ್ಷಣ ಪಡೆದುಕೊಂಡು ಉತಿರ್ಣರಾದ ದಿನ’ ಎಂದು ಸಂತ ಮೇರಿಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಧರ್ಮಗುರು ವಂ| ಪ್ರವೀಣ್ ಅಮ್ರತ್ ಮಾರ್ಟಿಸ್ ಸಂದೇಶ ನೀಡಿದರು. ಅವರು ಕುಂದಾಪುರ ರೋಜರಿ ಮಾತಾ ಇಗರ್ಜಿಯ ಸಭಾ ಭವನದಲ್ಲಿ ನೀತಿ ಶಿಕ್ಷಣದ ದಿವಸದ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತಾನಾಡಿ ನೀತಿ ಶಿಕ್ಷಣದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಗೌರವಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ನೀತಿ ಶಿಕ್ಷಣ ಕೇವಲ ಅಧ್ಯಾತ್ಮಿಕವಾಗಿ ತಮ್ಮನ್ನು ಬೆಳೆಸಿಕೊಳ್ಳುವುದು ಮಾತ್ರವಲ್ಲಾ, ಜೀವನದಲ್ಲಿ ಶಿಸ್ತಿನಲ್ಲಿ ಜೀವಿಸಲು ಕಲಿಸುತ್ತದೆ’ ಎಂದು ವರ್ಷವೀಡಿ ತಮ್ಮ ಸಮಯವನು ತ್ಯಾಗ ಮಾಡಿ ನೀತಿ ಶಿಕ್ಷಣ ನೀಡುವ ಶಿಕ್ಷಕಿಯರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ, ಅವರಿಗೆ ಗೌರವಿಸಿದರು.
ಉಪಾಧ್ಯಕ್ಷ ಜೇಕಬ್ ಡಿಸೋಜಾ, ಶುಭಾಷಯ ಕೋರಿದರು. ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಧರ್ಮ ಭಗಿನಿ ವಾಯ್ಲೆಟ್ ತಾವ್ರೊ. ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಒಂದನೇ ತರಗತಿಯಿಂದ ಪಿ.ಯು.ಸಿ. ವರೆಗಿನ ಮಕ್ಕಳಿಗೆ ಕ್ರಿಸ್ತಿ ಮೌಲ್ಯಾಧಾರಿತ ಶಿಕ್ಷಣದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಬಹುಮಾನಗಳನ್ನು ವಿತರಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕಿ ಪ್ರೀತಿ ಕ್ರಾಸ್ತಾ ತಮ್ಮ ಅನುಭವವನ್ನು ಹಂಚಿಕೊಂಡರು. ಮಕ್ಕಳು ನ್ರತ್ಯ, ಪ್ರಹಸನ ಮತ್ತು ಗಾಯನ ಮುಂತಾದ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ನೀತಿ ಶಿಕ್ಷಣ ಶಿಕ್ಷರ ಸಹ ಸಂಚಾಲಕಿ ಶ್ರೀಮತಿ ಶಾಂತಿ ಬಾರೆಟ್ಟೊ, ಸ್ವಾಗತಿಸಿದರು, ನೀತಿ ಶಿಕ್ಷಣ ಶಿಕ್ಷರ ಸಂಚಾಲಕಿ ವೀಣಾ ಡಿಸೋಜಾ ವರದಿಯನ್ನು ವಾಚಿಸಿದರು. ಕಾರ್ಯಕ್ರದ ಸಂಚಾಲಕತ್ವವನ್ನು ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ವಹಿಸಿ ಮಾರ್ಗದರ್ಶನ ನೀಡಿದರು. ವಿಧ್ಯಾರ್ಥಿಗಳಾದ ಜಾಸ್ನಿ ಡಿಆಲ್ಮೇಡಾ, ರೀಯಾ ಕ್ರಾಸ್ತಾ ಕಾರ್ಯಕ್ರಮವನ್ನು ನಿರೂಪಿಸಿದರು. ನೀತಿ ಶಿಕ್ಷಣದ ಶಿಕ್ಷಕಿ ಮರಿಯಾ ಬಾರೆಟ್ಟೊ ವಂದಿಸಿದರು.