ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನೂತನ ಅಧ್ಯಕ್ಷರಾಗಿ ಅನಂತ ಪದ್ಮನಾಭ ಬಾಯಿರಿ ಅವಿರೋಧ ಆಯ್ಕೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ


ಕುಂದಾಪುರ : ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ 2020 – 22 ನೇ ಸಾಲಿನ ಅಧ್ಯಕ್ಷರಾಗಿ ಬೆಳ್ವೆ ವಲಯದ ಪ್ರಗತಿಪರ ಕೃಷಿಕ, ಹೈನುಗಾರ ಅನಂತಪದ್ಮನಾಭ ಬಾಯಿರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
  ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ನಡೆದ ಪರಿಷತ್ ನ 26 ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಅಡಿಗ ಕಲ್ಕಟ್ಟೆ, ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಐತಾಳ್ ಕಿರಿಮಂಜೇಶ್ವರ ಹಾಗೂ ಜಗದೀಶ್ ರಾವ್ ಕುಂಭಾಶಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ನಾಗೂರು, ಜೊತೆ ಕಾರ್ಯದರ್ಶಿ ಮಂಜುನಾಥ ಹೆಬ್ಬಾರ್ ಮರವಂತೆ, ಖಜಾಂಚಿ ವಿಶ್ವಂಬರ ಐತಾಳ ಗುಜ್ಜಾಡಿ, ಸಂಘಟನಾ ಕಾರ್ಯದರ್ಶಿ ಅನಂತ ಪದ್ಮನಾಭ ಉಡುಪ ಮಾರಣಕಟ್ಟೆ, ಮಹಿಳಾ ವೇದಿಕೆ ಅಧ್ಯಕ್ಷರಾಗಿ ಭಾವನಾ ಎಂ. ಭಟ್ ಸೌಕೂರು, ಪರಿಷತ್ ನ ಮುಖವಾಣಿ ‘ವಿಪ್ರವಾಣಿ’  ತ್ರೈಮಾಸಿಕದ ಸಂಪಾದಕರಾಗಿ ಕೋಟೇಶ್ವರ ವಲಯದ ಪ್ರೊ. ಶಂಕರ್ ರಾವ್ ಕಾಳಾವರ, ಸಂಪಾದಕ ಮಂಡಳಿ ಸದಸ್ಯರಾಗಿ ಅಶೋಕ್ ಕುಮಾರ್ ಹೊಳ್ಳ ಹಾಗೂ ಹಳ್ಳಿ ಶ್ರೀನಿವಾಸ ಭಟ್, ಗೌರವ ಸಲಹೆಗಾರರಾಗಿ ಭಾಸ್ಕರ ಉಡುಪ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಹಾಸಭೆಯ ಅಧ್ಯಕ್ಷತೆಯನ್ನು ತಾಲೂಕು ಪರಿಷತ್ ಅಧ್ಯಕ್ಷ ರಾಘವೇಂದ್ರ ಅಡಿಗ ಕಲ್ಕಟ್ಟೆ ವಹಿಸಿದ್ದು, ಜೊತೆ ಕಾರ್ಯದರ್ಶಿ ವೆಂಕಟರಾಮ ಭಟ್ ಆಯ್ಕೆ ಪ್ರಕ್ರಿಯೆಯನ್ನು ನಿರ್ವಹಿಸಿದರು. ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಾಲಯದ ಆನುವಂಶಿಕ ಆಡಳಿತ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಜೊತೆ ಮೊಕ್ತೇಸರ ಶ್ರೀನಿವಾಸ ಚಾತ್ರ, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸದಸ್ಯ ಶಿವರಾಮ ಉಡುಪ ಸಾಲಿಗ್ರಾಮ, ಕಮಲಶಿಲೆ ವಲಯ ಅಧ್ಯಕ್ಷ ಶ್ರೀಧರ ಅಡಿಗ, ಡಾ. ವಿಜಯಶಂಕರ್ ಉಪಾಧ್ಯಾಯ, ಮಹಿಳಾ ವೇದಿಕೆ ಅಧ್ಯಕ್ಷೆ ಪವಿತ್ರಾ ಅಡಿಗ, ಯುವ ವಿಪ್ರ ವೇದಿಕೆ ಅಧ್ಯಕ್ಷ ಡಾ. ಸಂಪತ್ ಕುಮಾರ್, ಪರಿಷತ್ ಕಾರ್ಯದರ್ಶಿ ಎನ್. ಸತೀಶ ಅಡಿಗ, ವಿಪ್ರವಾಣಿ ಸಂಪಾದಕಿ ಪೂರ್ಣಿಮಾ ಭಟ್ ಉಪಸ್ಥಿತರಿದ್ದರು.