jananudi.com network
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಸಂಘದ ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ ಪುನಾರಾಯ್ಕೆ
ಕುಂದಾಪುರ, ಆ. 12: ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಸಂಘದ ಅಧ್ಯಕ್ಷರಾಗಿ ಶಶಿಧರ ಹೆಮ್ಮಾಡಿ ಬಹುಮತ ಪಡೆದು ಪುನಾರಾಯ್ಕೆ ಆಗಿದ್ದಾರೆ. ಆಗೋಸ್ತ್ 11 ರಂದು ಭಾನುವಾರ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೇದ ಮಹಾ ಸಭೆಯಲ್ಲಿ ಚುನಾವಣಾ ಪ್ರಕಿುಯೆ ನಡೆಯಿತು.
ಪ್ರಧಾನ ಕಾರ್ಯದರ್ಶಿಯಾಗಿ ರಾಯಪ್ಪನ ಮಠ ಕೂಡ ಬಹುಮತ ಪಡೆದು ಆಯ್ಕೆಯಾಗಿದ್ದಾರೆ. ಸಂಘದ ಉಪಾಧ್ಯಕ್ಷರುಗಳಾಗಿ ಎಸ್.ಎಮ್. ಮಝರ್, ಸಂತೋಷ ಕುಂದೇಶ್ವರ, ಕೋಶಾಧಿಕಾರಿಯಾಗಿ ಸತೀಶ್ ಆಚಾರ್ ಉಳ್ಳುರು, ಜತೆ ಕಾರ್ಯದರ್ಶಿಯಾಗಿ ರಾಘವೇಂದ್ರ ಬಳ್ಕೂರು, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ರಾಘವೇಂದ್ರ ಪೈ, ಉದಯಕುಮಾರ ತಲ್ಲೂರು, ವಿನಯಾ ಪಾಯ್ಸ್, ಜಿ.ಎಂ.ಶೆಣೈ, ಬರ್ನಾಡ್ ಡಿಕೋಸ್ತಾ, ಜಯಶೇಖರ ಮಡ್ಪಾಡಿ, ಚಂದ್ರಮ ತಲ್ಲೂರು ಮತ್ತು ಭಾಸ್ಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಚುನಾವಣ ಪ್ರಕ್ರಿಯೆಯನ್ನು ಪತ್ರಕರ್ತ ರಾಮಕ್ರಷ್ಣ ಹೇರಳೆ ಇವರು ನಡೆಸಿಕೊಟ್ಟರು