JANANUDI.COM NETWORK
ಕುಂದಾಪುರ ತರಕಾರಿ ವ್ಯಾಪರಿಸ್ತರ ಜೊತೆ ಪೊಲೀಸ್ ಇಲಾಖೆ ಸಭೆ : ಬೆಲೆ ಜಾಸ್ತಿ ಮಾಡಿ ಮಾರುವಂತ್ತಿಲ್ಲ: ತರಕಾರಿ ತರಿಸುವ ವ್ಯವಸ್ಥೆ ಮಾಡಲಾಗುತ್ತೆ
ಕುಂದಾಪುರ, ಮಾ.27: ಜನ ಮಾರಕವಾ ಕರೊನ ಸೊಂಕಿನ ತಡೆಗಾಗಿ 21 ದಿವಸದ ಲಾಖ್ ಡೌನ್ ಮಾಡಿದ್ದರಿಂದ, ಮುಂದಿನ 21 ದಿವಸಗಳಿಗಾಗಿ ತರಕಾರಿ ಇತರ ವಸ್ತುಗಳನ್ನು ದಾಸ್ತಾನು ಮಾಡುಲು ಜನ ಮುಗಿ ಬೀಳುತಿದ್ದರಿಂದ ಅಂಗಡಿಗಳಲ್ಲಿ ತರಕಾರಿಗಳನ್ನು ಜಾಸ್ತಿ ಬೆಲೆಗೆ ಮಾರುತಿದ್ದರಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳು ಕುಂದಾಪುರದ ತರಕಾರಿ ವ್ಯಾಪರಿಗಳನ್ನು, ಚಿಕ್ಕ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಮುಖ್ಯ ವಿತರಣಾ ವ್ಯಾಪರಸ್ಥರನ್ನು ಒಟ್ಟು ಸೇರಿಸಿ ಕುಂದಾಪುರ ರಕ್ತೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಸಭೆಯನ್ನು ನಡೆಸಲಾಯಿತು.
ಸಂಗ್ರಹಿಸಲಾದ ತರಕಾರಿಗಳನ್ನು ನ್ಯಾಯುತವಾದ ಬೆಲೆಯಲ್ಲಿ ಮಾರಾಟ ಮಾಡ ಬೇಕು. ವಿತರಣಾಕಾರರೂ ಕೂಡ ನ್ಯಾಯಯುತವಾದ ದರದಲ್ಲಿ ವಿತರಣೆ ಮಾಡಬೇಕು. ಎಂದು ಸೂಚಿಸಲಾಯಿತು.
ಎಲ್ಲಾ ತರಕಾರಿ ವ್ಯಾಪರಸ್ತರನ್ನು ವಾಟ್ಸಪ್ ಮೂಲಕ ಒಟ್ಟುಕೂಡಿಸಿ ಅವರಿಗೆ ಸಂದೇಶಗಳನ್ನು ನೀಡಲಾಗುವುದು. ದಿನ ನಿತ್ಯದ ತರಕಾರಿ ಬೆಲೆಗಳನ್ನು ಬೆಳಿಗ್ಗೆ 7 ಗಂಟೆಯ ಒಳಗೆ ನಿರ್ಧರಿಸಿ ಬೆಲೆಗಳನ್ನು ನಮೂದಿಸಿದ ಬೋರ್ಡನ್ನು ಅಂಗಡಿಯ ಹೊರಗಡೆ ತೂಗು ಹಾಕಬೇಕೆಂದು ಕೂಡ ಸೂಚಿಸಲಾಗಿದೆ. ಬೆಲೆಗಳು ಉಡುಪಿ ಮತ್ತು ಚಿಕ್ಕಮಂಗಳೂರಿನಲ್ಲಿ ಇದ್ದ ಬೆಲೆಯೆ ಕುಂದಾಪುರದಲ್ಲಿ ಇರಬೇಕೆಂದು ವ್ಯಾಪರಸ್ಥರಿಗೆ ತಿಳಿಸಲಾಗಿದೆ. ಒಂದೆರೇಡು ದಿವಸದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವುದೆಂದು ಪೊಲೀಸ್ ಅಧಿಕಾರಿಗಳು ಜನರಿಗೆ ತಿಳಿಸಿದ್ದಾರೆ.