ಕುಂದಾಪುರ: ಗಾಯನ ಮಂಡಳಿಗೆ ತರಬೇತಿ ಶಿಬಿರ

ಕುಂದಾಪುರ: ಗಾಯನ ಮಂಡಳಿಗೆ ತರಬೇತಿ ಶಿಬಿರ

ಕುಂದಾಪುರ, ಮೆ. 20: ಕುಂದಾಪುರ ರೋಜರಿ ಚರ್ಚಿನ ಗಾಯನ ಮಂಡಳಿಗೆ ಮೇ 18 ರಂದು ಚರ್ಚ್ ಸಭಾಭವನದಲ್ಲಿ ತರಬೇತಿ ಶಿಬಿರ ನೆಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರು ಸಂತ ಜೋಸೆಫ್ ಸೆಮಿನರಿಯ ಪ್ರಾಧ್ಯಾಪಕ ವಂ|ಧರ್ಮಗುರು ಬೊನಿಫಾಸ್ ಪಿಂಟೊ ಆಗಮಿಸಿ ‘ದೇವಾಲಯದಲ್ಲಿ ಪವಿತ್ರ ಬಲಿದಾನ ಏರ್ಪಡಿಸುವಾಗ ಭಕ್ತಿಯ ವಾತವರಣ ಇರಬೇಕು, ಹಾಗಾಗಿ ಅಬ್ಬರದ ಸಂಗೀತಕ್ಕೆ ಕಡಿವಾಣ ಹಾಕಬೇಕು, ಪವಿತ್ರ ಬಲಿದಾನ ಅರ್ಪಿಸುವ ವೇಳೆ, ಗಾಯನ ಮಂಡಳಿಯಿಂದ ಉತ್ತಮ ಸಂಗೀತದ ಜೊತೆ ಉತ್ತಮ ಗಾಯನ ಮಾಡಬೇಕು, ಯಾರೊಬ್ಬರೂ, ತಾನೂ ಮೇಲೆಂದು ಬೊಬ್ಬಿಡುವುದು ಉತ್ತಮವಲ್ಲಾ, ಎಲ್ಲರೂ ಜೊತೆಗೂಡಿ ಒಂದೇ ಲಯದಲ್ಲಿ ಹಾಡ ಬೇಕು, ಕೇವಲ ಗಾಯನ ಮಾಡುವುದೂ ಮಾತ್ರವಲ್ಲಾ, ಗಾಯನ ಮಂಡಳಿಯ ಸದಸ್ಯರು ಭಕ್ತಿಯಿಂದ ಪವಿತ್ರ ಬಲಿದಾನದಲ್ಲಿ ಭಾಗಿಯಾಗಬೇಕು. ಸದಸ್ಯರು ನನಗೊಂದು ಮೈಕ್ ಬೇಕೆಂದು ಆಶಿಸುವುದು ತಪ್ಪು. ಎಲ್ಲರೂ ಸೇರಿ ಪವಿತ್ರ ಬಲಿದಾನವು ಭಕ್ತಿ ಪೂರ್ವಕವಾಗಿ ನೆಡೆಯಲು ಗಾಯನ ಮಂಡಳಿಯವರು ಶ್ರಮಿಸಬೇಕು’ ಎಂದು ಅವರು ಹಲವಾರು ಸಲಹೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಸದಸ್ಯರಿಗೆ ತಿಳಿಯ ಪಡಿಸಿದರು.
ಈ ತರಬೇತಿಯನ್ನು ದೇವಸ್ತುತಿ ಆಯೋಗ ಎರ್ಪಡಿಸಿದ್ದು ಅದರ ಸಂಚಾಲಕಿ ಸಿಸ್ಟರ್ ವೈಲೆಟ್ ತಾವ್ರೊ ಉಪಸ್ಥಿತರಿದ್ದರು. ಚರ್ಚಿನ ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಪ್ರಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಪ್ರಾಂಶುಪಾಲ ಧಮಗುರು ವಂ|ಪ್ರವೀಣ್ ಮಾರ್ಟಿಸ್ ವಂದಿಸಿದರು.