ಕುಂದಾಪುರ ಕುಟುಂಬ ಆಯೋಗದಿಂದ ಹಿರಿಯರ ದಿನಾಚರಣೆ

ಕುಂದಾಪುರ ಕುಟುಂಬ ಆಯೋಗದಿಂದ ಹಿರಿಯರ ದಿನಾಚರಣೆ


ಕುಂದಾಪುರ, ಮಾ.25: ಕುಂದಾಪುರ ರೋಜರಿ ಮಾತ ಚರ್ಚಿನ ಕುಟುಂಬ ಆಯೋಗದ ವತಿಯಿಂದ ಕುಂದಾಪುರ ಚರ್ಚಗೆ ಸಂಬಂಧಪಟ್ಟ 65 ವರ್ಷ ಮೀರಿದ ಹಿರಿಯವರನ್ನು ಒಟ್ಟು ಕೂಡಿಸಿ ಹಿರಿಯವರ ದಿನವನ್ನು ಆಚರಿಸಲಾಯಿತು.
ಈ ದಿನಾಚರಣೆಗಾಗಿ ಮುಖ್ಯ ಅತಿಥಿಯಾಗಿ 86 ವಯಸ್ಸಿನ ಹಿರಿಯ ಧರ್ಮಗುರುಗಳಾದ ಈ ಹಿಂದೆ ಉಡುಪಿ ಧರ್ಮಕೇಂದ್ರದಲ್ಲಿ ಎಪಿಸ್ಕೋಪಲ್ ವಿಕಾರ್ ಆಗಿ ಸೇವೆ ಸಲ್ಲಿಸಿದ ಅತಿ ವಂದನೀಯ ಫಾ|ವಾಲೇರಿಯನ್ ಡಿಸೋಜಾರವರು ಆಗಮಿಸಿ ಹಿರಿಯರಿಗೆ ಕೆಲವೊಂದು ಉಯುಕ್ತ ಮಾಹಿತಿ ನೀಡಿದರು. ‘ಆಹಾರವನ್ನು ಇತಿಮಿತಿಯಾಗಿ ಸೇವಿಸಿ, ಹೆಚ್ಚು ಆಹಾರ ಸೇವಿಸಿದರೆ, ಜೀರ್ಣಕ್ರೀಯೆಗೆ ತೊಂದರೆ, ಇದರಿಂದಾಗಿ ನಾನಥರಹದ ತೊಂದರೆಗಳು ಉಂಟಾಗುವುದು, ಪ್ರಾಯ ಆಗುತ್ತ ಬರುವಾಗ ಮಲಗಿ ನಿದ್ರಿಸುವ ಆಸೆ ಹೆಚ್ಚಾಗುತ್ತೆ, ಆದರೆ ಹೆಚ್ಚು ನಿದ್ರಿಸ ಬಾರದು, ಅದೊಂದು ಕಾಯಿಲೆ, ಅದಕ್ಕೆ ವ್ಯಾಯಮ ಮಾಡಿ ಈ ಪ್ರಾಯದಲ್ಲಿ ಹಿರಿಯವರಿಗೆ ವ್ಯಾಯಮ ಅಂದರೆ ನೆಡದಾಡುವುದು, ನೆರೆ ಮನೆಯವರ ಹತ್ತಿರ ಹೋಗಿ ಮಾತುಕತೆ ನೆಡೆಸಿ, ಪವಿತ್ರ ಗ್ರಂಥಗಳನ್ನು, ಇನ್ನಿತರ ಪುಸ್ತಕಗಳನ್ನು ಒದಿ, ಯಾವುದೇ ವಿಷಯದಲ್ಲಿ ಚಿಂತೆ ಯೋಚನೆ, ಟೆನ್ಶನ್ ಮಾಡಬೇಡಿ, ನಿಮ್ಮ ಜೀವನವನ್ನು ದೇವರ ಮೇಲೆ ಬಿಟ್ಟು ಬಿಡಿ. ನಿಮ್ಮ ಆರೈಕೆ ಮಾಡುವರನ್ನು ಯಾವತ್ತೂ ದೂಷಿಸಬೇಡಿ, ಸಹನೆಯನ್ನು ಬೆಳಸಿಕೊಳ್ಳಿ’ ಎಂದು ಹಿರಿಯವರಿಗೆ ಸಲಹೆ ನೀಡಿ ಶುಭ ಕೋರಿದರು. ಸಮಾರಂಭಕ್ಕೂ ಮುನ್ನಾ ಅವರು ಹಿರಿಯ ಭಕ್ತರೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರೂ ಪವಿತ್ರ ಬಲಿದಾನದಲ್ಲಿ ಭಾಗಿಯಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ‘ಹಿರಿಯವರಾದ ನಿಮಗೆ ಗೌರವ ಒಂದಿಷ್ಟು ಸಂತೋಷ ಸಮಾಧಾನ ದೊರಯಲೆಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಎಲ್ಲರಿಗೂ ದೇವರು ಉತ್ತಮ ಆರೋಗ್ಯ, ಆಯಸ್ಸು ನೀಡಲಿ’ ಎಂದು ಅವರು ಹಾರೈಸಿದರು. ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಹಿರಿಯವರು ‘ನಮ್ಮ ಸಮಾಜದ ಆಸ್ತಿ, ಇವರಿಂದ ನಾವು ಕಲಿಯಬೇಕಾದ್ದು ಸಾಕಷ್ಟಿದೆ’ ಎಂದು ಈ ದಿನವನ್ನು ಆಯೋಜಿಸಿದಕ್ಕೆ ಕ್ರತ್ಜನತೆಯನ್ನು ಸಲ್ಲಿಸಿದರು. ಸುಮಾರು 150 ಮಿಕ್ಕಿದ ಹಿರಿಯವರನ್ನು ಕಾಣಿಕೆ ನೀಡಿ ಗೌರವಿಸಲಾಯಿತು, ಅತಿ ಹಿರಿಯ, ಅತಿ ಹೆಚ್ಚು ವರ್ಷದ ದಂಪತಿ, ಅತಿ ಹೆಚ್ಚು ವರ್ಷ ಕುಂದಾಪುರದಲ್ಲೆ ನೆಲೆಸಿದ್ದ, ಅತಿ ಹೆಚ್ಚು ಮೊಮ್ಮಕ್ಕಳು ಇರುವವರಿಗೆ ಹೀಗೆ ವಿವಿಧ ರೀತಿಯಲ್ಲಿ ಬಹುಮಾನವನ್ನು ನೀಡಲಾಯಿತು. ಸಹಾಯಕ ಧರ್ಮಗುರು ವಂ|ರೋಯ್ ಲೋಬೊ ಪ್ರಾರ್ಥನ ವಿಧಿಯನ್ನು ನೆಡೆಸಿಕೊಟ್ಟರು. ವೇದಿಕೆಯಲ್ಲಿ ಕಾನ್ವೆಂಟಿನ ಮುಖ್ಯಸ್ಥೆ ವಂ|ಭಗಿನಿ ವಾಯ್ಲೆಟ್ ತಾವ್ರೊ, ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಹಿರಿಯ ವ್ಯಕ್ತಿ ಮೊಂತು ಡಿಸೋಜಾ ಉಪಸ್ಥಿತರಿದ್ದರು. ಕುಟುಂಬ ಆಯೋಗದ ಸಂಚಾಲಕಿ ಆಶಾ ಕರ್ವಾಲ್ಲೊ ಸ್ವಾಗತಿಸಿದರು. ಸೆರಾಫಿನ್ ಡಿಸಿಲ್ವಾ ವಂದಿಸಿದರು, ವಿಲ್ಸನ್ ಒಲಿವೇರಾ ಕಾರ್ಯಕ್ರಮ ನಿರೂಪಿಸಿದರು.