ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆಯಿಂದ ಕೈ – ತಾರಸಿ ತೋಟ ರಚನೆ ತಿಳುವಳಿಕೆ

 

JANANUDI.COM NETWORK

ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆಯಿಂದ ಕೈ – ತಾರಸಿ ತೋಟ ರಚನೆ ತಿಳುವಳಿಕೆ

 

ಕುಂದಾಪುರ, ಆ.13: ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆಯ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲಾ ಪಂಚಾಯತ್, ಕುಂದಾಪುರ ತಾಲೂಕು ತೋಟಗಾರಿಕೆ ಪಿತಾಮಹ ಡಾ|ಎಮ್.ಎಚ್.ಮರಿಗೌಡರ ಜನ್ಮ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ದಿನ ಹಾಗೂ ತೋಟಗಾರಿಕೆ ಸಪ್ತಾಹ ಕಾರ್ಯಕ್ರಮದಡಿ ಕೈ ತೋಟ – ತಾರಸಿ ತೋಟ ರಚನೆ ತಿಳುವಳಿಕೆಯ ವಿಚಾರ ಸಂಕೀರಣ ಕಾರ್ಯಕ್ರಮ ಕುಂದಾಪುರ ಚರ್ಚ್ ಸಭಾ ಭವನದಲ್ಲಿ ಆಗೋಸ್ತ್ 12 ರಂದು ನಡೆಯಿತು.
‘ಕೈ ತೋಟ ಹೇಗೆ ರಚಿಸುವುದು, ತಾರಸಿ ತೋಟ ಹೇಗೆ ರಚಿಸುವುದರ ಬಗ್ಗೆ, ಆ ಗೀಡಗಳನ್ನು ಹೇಗೆ ಪೆÇೀಷಿಸುವುದು, ನಾವು ಕೆಮಿಕಲ್ ಹಾಕಿದ ತರಕಾರಿ ಹಣ್ಣು ಹಂಪಲುಗಳನ್ನು ತಿನ್ನುತ್ತೇವೆ, ಅದರಿಂದ ನಮ್ಮ ಆರೋಗ್ಯ ಕೆಡುತ್ತದೆ, ಜೀವ ನಿರೋದಕ ಶಕ್ತಿ ಕುಂದುವುದು, ಆದರಿಂದ ನಾವು ನಮ್ಮ ತಾರಸಿ ಮೇಲೆ, ಕೈ ತೋಟದಲ್ಲಿ ಗುಣ ಮಟ್ಟದ ತರಕಾರಿ ಹಣ್ಣು ಹಂಪಲುಗಳನ್ನು ಬೆಳೆಸಿ ಆರೋಗ್ಯವಂತರಾಗೋಣ’ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತೋಟಗಾರಿಕಾ ಇಲಾಖೆಯ ಅಧಿಕಾರಿ ಸಂಜೀವ ನಾಯ್ಕ್ ಇವರು ಸಂಪೂರ್ಣವಾದ ತಿಳುವಳಿಕೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ‘ನಮ್ಮ ಹಿಂದಿನವರು ಕೈ ತೋಟವನ್ನು ಮಾಡಿಕೊಂಡು ಮನೆಯ ತರಕಾರಿಗಳನ್ನೆ ತಿನ್ನುತಿದ್ದರು. ಮನೆ ತೋಟಗಳಲ್ಲಿ ಫಲ ನೀಡಿದ ತರಕಾರಿ ಹಣ್ಣು ಹಂಪಲುಗಳಿಂದ ಉತ್ತಮ ಆರೋಗ್ಯ ಲಬಿಸುತ್ತದೆ, ಆದರಿಂದ ನಾವೆಲ್ಲಾ ಕೈ ತೋಟ ಅಥವ ತಾರಸಿ ತೋಟ ರಚಿಸೋಣ’ ಎಂದರು. ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಸುಪಾಲರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಸ್ತ್ರೀ ಸಂಘಟನೆಯ ಸಚೇತಕಿ ಭಗಿನಿ ಆಶಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವೈಲೆಟ್ ತಾವ್ರೊ, ಕಾರ್ಯದರ್ಶಿ ಸಂಗೀತ ಪಾಯ್ಸ್, ಉಪಾಧ್ಯಕ್ಷೆ ವಿನಯಾ ಡಿಕೋಸ್ತಾ, ಖಚಾಂಚಿ ವೀಣಾ ಡಿಆಲ್ಮೇಡಾ, ಸಹಕಾರ್ಯದರ್ಶಿ ಜೂಲಿಯಾನ ಮಿನೇಜೆಸ್ ಮುಂತಾದ ಪದಾಧಿಕರಿಗಳು ಉಪಸ್ಥಿತರಿದ್ದರು. ಸ್ತ್ರೀ ಸಂಘಟನೇಯ ಅಧ್ಯಕ್ಷೆ ಶಾಂತಿ ಕರ್ವಾಲ್ಲೊ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವಲಯ ಪ್ರತಿನಿಧಿ ವಿಕ್ಟೋರಿಯಾ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. ನಿರ್ಗಮನ ಅಧ್ಯಕ್ಷೆ ವಂದಿಸಿದರು.