ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೇಯ ವಾರ್ಷಿಕ ಸಭೆ: ನೂತನ ಅಧ್ಯಕ್ಷೆಯಾಗಿ ಶಾಂತಿ ಕರ್ವಾಲ್ಲೊ

ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೇಯ ವಾರ್ಷಿಕ ಸಭೆ: ನೂತನ ಅಧ್ಯಕ್ಷೆಯಾಗಿ ಶಾಂತಿ ಕರ್ವಾಲ್ಲೊ


ಕುಂದಾಪುರ, ಮೆ.27: ಕುಂದಾಪುರ ರೊಜರಿ ಮಾತಾ ಚರ್ಚಿನ ಕಥೊಲಿಕ್ ಸ್ತ್ರೀ ಸಂಘಟನೇಯ ವಾರ್ಷಿಕ ಸಭೆಯು ಭಾನುವಾರ ಇಗರ್ಜಿಯ ಸಭಾ ಭವನದಲ್ಲಿ ನೆಡೆಯಿತು. ಕಳೆದ ಸಾಲಿನ ಅಧ್ಯಕ್ಷೆ ಶಾಂತಿ ರಾಣಿ ಬಾರೆಟ್ಟೊ ಸ್ವಾಗತಿಸಿದರು. ಕಾರ್ಯದರ್ಶಿ ವಿಕ್ಟೋರಿಯ ಡಿಸೋಜಾ ವರದಿಯನ್ನು ವಾಚಿಸಿಸಿದರು. ಶಾಂತಿ ಕರ್ವಾಲ್ಲೊ ಹಣಕಾಸಿನ ಲೆಕ್ಕಚಾರವನ್ನು ನೀಡಿದರು. ನಂತರ ಈ ಸಾಲಿನ ಪದಾಧಿಕಾರಿಗಳನ್ನು ಆಸಲಾಯಿತು. ಕಳೆದ ಸಾಲಿನಲ್ಲಿ ಉಪಾಧ್ಯೆಕ್ಷೆಯಾಗಿದ್ದ ಶಾಂತಿ ಕರ್ವಾಲ್ಲೊ ಸರ್ನಾನುಮತದಿಂದ ಅಧ್ಯೆಕ್ಷೆಯಾಗಿ ಆರಿಸಿ ಬಂದರು. ಉಪಾಧ್ಯೆಕ್ಷೆಯಾಗಿ ವಿನಯಾ ಡಿಕೋಸ್ತಾ, ಕಾರ್ಯದರ್ಶಿಯಾಗಿ ಸಂಗೀತ ಪಾಯ್ಸ್, ಸಹ ಕಾರ್ಯದರ್ಶಿಯಾಗಿ ಜೂಲಿಯಾನ ಮಿನೇಜೆಸ್, ಖಚಾಂಚಿಯಾಗಿ ವೀಣಾ ಡಿಆಲ್ಮೇಡಾ, ವಾರಾಡೊ ಪ್ರತಿನಿಧಿಯಾಗಿ ವಿಕ್ಟೋರಿಯಾ ಡಿಸೋಜಾ, ಮೊತಿಯಾಂ ಪತ್ರದ ಪ್ರತಿನಿಧಿಯಾಗಿ ವೈಲೆಟ್ ಡಿಸೋಜಾ ಆಯ್ಕೆಯಾದರು
ಕಥೊಲಿಕ್ ಸಭಾ ವಲಯದ ಕಾರ್ಯದರ್ಶಿ ಸುನೀತಾ ಮೆಂಡೊನ್ಸಾ ಚುನಾವಣ ಪ್ರಕ್ರಿಯೆಯನ್ನು ನೆಡೆಸಿಕೊಟ್ಟರು. ಈ ಸಾಲಿನ ಮತ್ತು ಕಳೆದ ಸಾಲಿನ ಅಧ್ಯಕ್ಷೆಯರು ತಮ್ಮ ಅನ್ನಿಸಿಕೆಯನ್ನು ವ್ಯಕ್ತಪಡಿಸಿದರು. ಅಧ್ಯಾತ್ಮಿಕ ನಿರ್ದೇಶಕರಾದ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಉಪಸ್ಥಿತರಿದ್ದು ಹಿತವಚನ ನೀಡಿದರು. ವಿಕ್ಟೋರಿಯ ಡಿಸೋಜಾ ದನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮವನ್ನು ಸಂಗೀತ ಪಾಯ್ಸ್ ನಿರೂಪಿಸಿದರು.