ಕುಂದಾಪುರ ಕಥೊಲಿಕ್ ಸಭಾದಿಂದ ವನಮಹತ್ಸೋವ ಆಚರಣೆ

JANANUDI NETWORK

ಕುಂದಾಪುರ ಕಥೊಲಿಕ್ ಸಭಾದಿಂದ ವನಮಹತ್ಸೋವ ಆಚರಣೆ


ಕುಂದಾಪುರ, ಜು.28: ಕುಂದಾಪುರ ಕಥೊಲಿಕ್ ಸಭಾ ಘಟಕದಿಂದ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿಯ ಆವರಣದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಗೀಡಗಳನ್ನು ವಿತರಿಸುವ ಮೂಲಕ ವನಮಹತ್ಸೋವವನ್ನು ಆಚರಿಸಿದರು. ‘ಮರ ಗೀಡಗಳ ನಾಶ, ಕಾಡು ನಾಶ ಈ ಕಾರಣದಿಂದ ಮಳೆ ಕಡಿಮೆಯಾಗಿದೆ, ನೀರಿನ ಜಲಮಟ್ಟ ಇಳಿದಿದೆ, ಕಾಡು ಬೆಳಿಸಿ ನಾಡು ಉಳಿಸಿ ಅದರಂತೆ ನಾವು ನಡೆದುಕೊಳ್ಳ ಬೇಕು, ಪ್ರತಿ ಒಂದು ಕುಟುಂಬ ಪ್ರತಿ ಒಂದು ವರ್ಷ ಒಂದು ಗೀಡವನ್ನು ನೆಟ್ಟು ಅದನ್ನು ಪೆÇೀಷಿಸಬೇಕು’ ಎಂದು ಅವರು ಕರೆ ನೀಡಿದರು
ಕುಂದಾಪುರ ಕಥೊಲಿಕ್ ಸಭಾದಿಂದ ಉತ್ತಮ ಥಳಿಯ ವಿವಿಧ ಜಾತಿಯ ಸುಮಾರು 200 ಗೀಡಗಳನ್ನು ವಿತರಿಸಲಾಯಿತು. ಇಗರ್ಜಿಯ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲ ಧರ್ಮಗುರು ವಂ| ಪ್ರವೀಣ್ ಮಾರ್ಟಿಸ್, ಕಥೊಲಿಕ್ ಸಭೆಯ ಅಧ್ಯಕ್ಷ ವಾಲ್ಟರ್ ಡಿಸೋಜಾ, ಕಾರ್ಯದರ್ಶಿ ವಿಲ್ಸನ್ ಡಿಆಲ್ಮೇಡಾ, ನಿಯೋಜಿತ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಉಪಾಧ್ಯಕ್ಷೆ ಜೂಲಿಯೆಟ್ ಪಾಯ್ಸ್, ನಿರ್ಗಮನ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಮತ್ತು ಇತರ ಕಥೊಲಿಕ್ ಸಭಾ ಪದಾಧಿಕಾರಿಗಳು, ಹಾಗೂ ಪಾಲನ ಮಂಡಳಿ ಅಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲಕ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನೇರವೆರಿಸಿ ಧನ್ಯವಾದಗಳನ್ನು ಅರ್ಪಿಸಿದರು.