JANANUDI.COM NETWORK
ಕುಂದಾಪುರ, ಅ.2: ಕುಂದಾಪುರ ಕಥೊಲಿಕ್ ಕುಂದಾಪುರ ಘಟಕದಿಂದ ಗಾಂಧಿ ಜಯಂತಿ ಆಚರಣೆಯನ್ನು ಕುಂದಾಪುರ ಚರ್ಚ್ ಸಭಾ ಭವನದಲ್ಲಿ ಆಚರಿಸಲಾಯಿತು. ‘ಈ ಸಂದರ್ಭದಲ್ಲಿ ಭಂಡಾರ್‍ಸ್ರ್ಕಾರ್ ಕಾಲೇಜಿನ ಕನ್ನಡ ಉಪನ್ಯಾಸಕ ಮಂಜುನಾಥ್ ಕೆ.ಎಸ್. ಮಾತನಾಡಿ ‘ಗಾಂಧೀಜಿಯ ತತ್ವಗಳು ಇಂದು ಕ್ಷೀಣಿಸುತ್ತಿರವಾಗ, ಮುಂದೆ ಗಾಂಧಿಜಿಯ ಇರುವಿಕೆ ಇರುತ್ತದೊ ಇಲ್ಲವೊ ಗೊತ್ತಿಲ್ಲಾ. ಗಾಂಧಿಜಿ ಭಾರತದ ಬಗ್ಗೆ ಕಂಡ ಕನಸು ಬೇರೆಯೇ ಬೇರೆ. ಆದರೆ ಇಂದು ನಾವು ಕಾಣುವ ಭಾರತವೇ ಬೇರೆ. ಅವರು ಮಾನವರಲ್ಲಿ ವರ್ಣ ಭೇದ ನಿಲ್ಲಬೇಕೆಂದು ಹೋರಾಟ ಮಾಡಿದ ಮಹಾತ್ಮರು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಲು ತಮ್ಮ ಜೀವನವನ್ನೆ ಮುಡುಪಾಗಿಟ್ಟವರು. ಎಲ್ಲಾ ಧರ್ಮದ ಪವಿತ್ರ ಗ್ರಂಥಗಳನ್ನು ಓದಿ,ಎಲ್ಲಾ ಧರ್ಮದಗಳ ತತ್ವಗಳನ್ನು ಅರಿತು ನಡೆದರು. ಹೆಣ್ಣು ಮಗಳಿಗೆ ಶಿಕ್ಷಣ ದೊರಕಿದರೆ ಇಡೀ ಕುಟುಂಬಕ್ಕೆ ಶಿಕ್ಷಣದೊರೆಯುತ್ತದೆ ಅವರು ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕೆಂದು ಹಂಬಲಿಸಿದರು, ಸ್ಚಚ್ಚತಾ ಅಭಿಯಾನ ಭಾರತದಲ್ಲಿ ಮೊದಲು ಆರಂಭಿಸಿದರು, ಇವತ್ತು ನಮಗೆ ಒಂದು ದಿವಸ ಸ್ವಲ್ಪ ಹೊತ್ತು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನಮಗೆ ಆಯಾಸವಾಗುತ್ತದೆ, ಆದರೆ ಗಾಂಧಿಜಿ ನಮಗಾಗಿ, ನಮ್ಮ ರಾಷ್ಠ್ರ ನಿರ್ಮಾಣಕ್ಕೆ ದುಡಿದವರು, ಅವರು ಯಾವತ್ತೂ ನಮಗೆ ಪ್ರಸ್ತೂತವಾಗಿದ್ದಾರೆ ಎಂದು’ ತಿಳಿಸಿದರು.
“ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ‘ಗಾಂಧಿಜಿ ಈ ದೇಶದ ಪಿತಾಮಹರು, ಅವರು ಕ್ರೈಸ್ತ ಧರ್ಮದವರಲ್ಲದಿದ್ದರೂ, ಜೀವನವಿಡೀ ಯೇಸು ಕ್ರಿಸ್ತರ ಭೋಧನೆಗಳನ್ನು ಅಳವಡಿಸಿಕೊಂಡು ಜಗತ್ತಿನಲ್ಲಿ ಮಹಾನರಾದರು. ಇಂತಹ ಮಹಾನ್ ರಾಷ್ಠ್ರ ಪಿತರಿಂದ ನಿರ್ಮಾಣಗೊಂಡ ಭಾರತದಲ್ಲಿ, ಇಂದು ಇಷ್ಟೊಂದು ಅನ್ಯಾಯ ನಡೆಯುವುವಾಗ ಒಂದು ವೇಳೆ ಮಹಾತ್ಮ ಗಾಂಧಿ ಇಂದು ಇದ್ದಿದ್ದರೆ ಅವರು ಮತ್ತೊಂದು ಸಂಗ್ರಾಮ ಮಾಡುತಿದ್ದರು’ ಎಂದು ಅವರು ಸಂದೇಶ ನೀಡಿದರು. ಕಾರ್ಯಕ್ರಮದ ನಂತರ ಸ್ವಚ್ಚತಾ ಅಭಿಯಾನದ ಪ್ರಯುಕ್ತ ಚರ್ಚ್ ರಸ್ತೆಯಲ್ಲಿ ರಸ್ತೆ ಚರಂಡಿಗಳಲಿದ್ದ ಕಸ ಕಡ್ಡಿ, ಪ್ಲಾಸ್ಟಿಕ್,ಗಾಜಿನ ಬಾಟಲುಗಳನ್ನು ಹೆಕ್ಕಿ ರಸ್ತೆಯನ್ನು ಸ್ವಚ್ಚ ಗೊಳಿಸಲಾಯಿತು“
ಕಾರ್ಯಕ್ರಮದಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಜೊನ್ಸನ್ ಡಿಸೋಜಾ, ಪಾಲನ ಮಂಡಳಿ ಉಪಾಧ್ಯಕ್ಷ ಲುವಿಸ್ ಜೆ. ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಕಥೊಲಿಕ್ ಸಭಾ ನಿಯೋಜಿತ ಅಧ್ಯಕ್ಷೆ ಜೂಲಿಯೆಟ್ ಪಾಯ್ಸ್, ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜಾ, ಕೋಶಾಧಿಕಾರಿ ಶೈಲಾ ಡಿಆಲ್ಮೇಡಾ, ಕಥೊಲಿಕ್ ಸಭೆಯ ಮುಂದಾಳುಗಳಾದ ಜೋನ್ಸನ್ ಡಿ ಆಲ್ಮೇಡಾ, ವಿಲ್ಸನ್ ಡಿ ಆಲ್ಮೇಡಾ, ಲೋನಾ ಲುವಿಸ್, ಲೋಯ್ ಕರ್ವಾಲ್ಲೊ, ಮಾರ್ಕ್ ಡಿಸೋಜಾ, ನಿರ್ಮಲ ಡಿಸೋಜಾ, ಎಲ್ಡ್ರಿನ್ ಡಿಸೋಜಾ, ಜೋಯ್ ಕರ್ವಾಲ್ಲೊ,ಅಂತೋನಿ ಡಿಸೋಜಾ, ಬಾಜಿಲ್ ಡಿಸೋಜಾ, ಅಂತೋನಿ ಡಿಆಲ್ಮೇಡಾ, ದಾಮನ್ ಡಿಆಲ್ಮೇಡಾ, ನವೀನ್ ಡಿಸೋಜಾ ಮುಂತಾದವರು ಹಾಜರಿದ್ದರು..
ಕಥೊಲಿಕ್ ಸಭೆಯ ಅಧ್ಯಕ್ಷರಾದ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು. ಕಾರ್ಯಕ್ರಮದ ಸಂಚಾಲಕ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು.