JANANUDI NETWORK
ಕುಂದಾಪುರ ಆರೋಗ್ಯ ತಪಾಸಣೆ :ಸ್ನೇಹಿತರು, ಆಸ್ತಿ ಪಾಸ್ತಿ ಕಳಕೊಂಡರೆ ಮರು ಸಿಗುತ್ತಾರೆ, ಆರೋಗ್ಯ ಕಳೆಕೊಂಡರೆ ಅದು ಮರಳಿ ಸಿಗದು : ಇನ್ಸಪೆಕ್ಟರ್ ಶ್ರಿಧರ್
ಕುಂದಾಪುರ, ಜು. 28: ‘ನಮ್ಮ ಜೀವನದಲ್ಲಿ ಸ್ನೇಹಿತರು, ಆಸ್ತಿ ಪಾಸ್ತಿಯನ್ನು ನಾವು ಕಳಕೊಂಡರೆ, ಅದನ್ನು ನಾವು ಪುನ: ಗಳಿಸಿಕೊಳ್ಳಬಹುದು, ಆದರೆ ನಮ್ಮ ಆರೋಗ್ಯ ಕಳೆಕೊಂಡರೆ ಅದು ಮರಳಿ ಸಿಗದು, ಅದಕ್ಕಾಗಿ ನಾವು ನಮಗೆ ಗೊತ್ತಿಲ್ಲದೆ ಬಂದಂತಹ ರೋಗಗಳನ್ನು ಮೊದಲ ಹಂತ್ತದಲ್ಲೆ ಗುರುತಿಸಿಕೊಂಡು ಅದಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಂಡರೆ, ನಮ್ಮ ಜೀವಕ್ಕೆ ಆಗುವ ಅಪಾಯ ತಪ್ಪುತ್ತೆ’ ಎಂದು ಕುಂದಾಪುರ ಗ್ರಾಮಂತರ ಪೊಲೀಸ್ ಸಭ್ ಇನ್ಸಪೆಕ್ಟರ್ ಶ್ರಿಧರ್ ನಾಯ್ಕ್ ಅವರು ನುಡಿದರು.
ಅವರು ರೋಟರಿ ಕುಂದಾಪುರ ದಕ್ಷಿಣ, ಲಯನ್ಸ್ ಕ್ಲಬ್ ಕಲ್ಯಾಣಪುರ ಮತ್ತು ಪೊಲೀಸ್ ಇಲಾಖೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಭಾನುವಾರ ಜುಲಾಯ್ 28 ರಂದು ರಕ್ತೆಶ್ವರಿ ದೇವಾಲಯದ ಸಭಾ ಭವನದಲ್ಲಿ ನಡೇದ ಉಚಿತ ಆರೋಗ್ಯ ತಪಾಸಣ ಶಿಬಿರವನ್ನು ಉದ್ಘಾಟಿಸಿ ಮಾತಾನಾಡುತಿದ್ದರು ಪೊಲೀಸ್ ಇಲಾಖೆಯವರು ಯಾವಾಗಲೂ ಒತ್ತಡದಲ್ಲಿ ಇರುತ್ತಾರೆ, ಅವರಿಗೆ ಆರೋಗ್ಯ ತಪಾಸಣೆ ಅಗತ್ಯವಿದೆ, ಇವತ್ತು ಆಸ್ಪತ್ರೆಗಳ ವಿಚಾರದಲ್ಲಿ ಮೆಲುಕು ಹಾಕಿದರೆ ಅಲ್ಲಿ ವ್ಯಾಪರ ವೈಭವಿಕರಣ ನಡೆಯುತ್ತಿದೆ, ಇಲ್ಲಿ ಉಚಿತ ಆರೋಗ್ಯ ತಪಾಸಣೆ ದೊರಕುತ್ತದೆ, ಇದರ ಸದುಪಯೋಗವನ್ನು ಪಡೆದುಕೊಳ್ಳ ಬೇಕು” ಎಂದು ಅವರು ತಿಳಿಸಿದರು.
ಲಯನ್ಸ್ ಕ್ಲಬ್ ಕಲ್ಯಾಣಪುರ ಇದರ ಅಧ್ಯಕ್ಷ ಪಿ.ಎ. ಭಟ್ ‘ಕೆಲವರಿಗೆ ತಮ್ಮ ಆರೋಗ್ಯದ ಗುಟ್ಟೆ ಗೊತ್ತಿರುವುದಿಲ್ಲಾ, ಬಿ.ಪಿ. ಶುಗರ್ ಇವರಿಗೆ ವಿಪರೀತ ಮಟ್ಟಕ್ಕೆ ಎರಿದ್ದು ಗೊತ್ತಿಲದೆ, ಅಪಾಯಕ್ಕೆ ಸಿಲುಕುತ್ತಾರೆ, ಆದರಿಂದ ಎಲ್ಲರೂ ಆರೋಗ್ಯ ತಪಾಸಣೆಗೆ ಒಳಗಾಗ ಬೇಕು’ ಎಂದು ತಿಳಿಸಿದರು.
ವೇದಿಕೆಯಲ್ಲಿ ಪ್ರಸಾದ್ ಪಿ.ಎಸ್.ಐ. ಅಪರಾಧ ವಿಭಾಗ, ಪುಷ್ಪ ಪಿ.ಎಸ್.ಐ., ಡಾ|ನರಸಿಂಹ ಭಟ್, ಡಾ| ರವೀಂದ್ರ, ಡಾ|ಸಷಾಂಕ್, ಡಾ|ಸತ್ಯಜೀತ್ ಕರ್ಕೂಲ್. ಡಾ|ಅಲೇಕ್ಸ್, ಡಾ|ಅನ್ನಪೂರ್ಣ, ಉಪಸ್ಥಿತರಿದ್ದರು. ರೋಟರಿ ಕ್ಲಬಿನ ಪದಾಧಿಕಾರಿಗಳು, ಪೊಲೀಸ್ ಸಿಬಂದಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲುಗೊಂಡರು. ರೋಟರಿ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷ ರೋ|ದೇವರಾಜ್ ಕೆ. ಸ್ವಾಗತ ಕೋರಿದರು. ಕಾರ್ಯದರ್ಶಿ ರೋ|ಶೊಭಾ ಭಟ್ ವಂದಿಸಿದರು. ರೋ|ಯು.ಎಸ್. ಶಣೈ ಕಾರ್ಯಕ್ರಮವನ್ನು ನಿರೂಪಿಸಿದರು.