JANANUDI.COM NETWORK

ಕುಂದಾಪುರ,ಅ.15: ದಿನಾಂಕ 06.09.2020 ರ ರಾತ್ರಿ ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಬೀಪಾನ್‌ಬೆಟ್ಟು ರಸ್ತೆಯಲ್ಲಿರುವ ಜಯರಾಜ್ ಶೆಟ್ಟಿ ಯವರು ತನ್ನ ಹೆಂಡತಿಯ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮನೆಗೆ ಬೀಗ ಹಾಕಿ ಹೋಗಿದ್ದ ಸಮಯದಲ್ಲಿ ದಿನಾಂಕ 6/7.09.2020 ರ ರಾತ್ರಿ ಮನೆಯ ಬೀಗ ಮುರಿದು ಮನೆಯೊಳಗೆ ಇರಿಸಿದ್ದ ಸುಮಾರು ರೂ 9,88,500/- ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಕಳವು ಆಗಿದ್ದು ಈ ಬಗ್ಗೆ ಜಯರಾಜ್ ಶೆಟ್ಟಿಯವರು ನೀಡಿರುವ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಅ.ಕ್ರ. 123/2020 ಕಲಂ 454 457 380 ಐಪಿಸಿಯಂತೆ ಪ್ರಕರಣವು ದಾಖಲಾಗಿರುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿ ದಿನಾಂಕ 12.11.2020 ರಂದು 1. ರಾಜೇಶ ನಾಯ್ಕ @ ರಾಜ @ ರಾಜು ಪಾಮಡಿ ಪ್ರಾಯ 42 ವರ್ಷ ತಂದೆ ದಿವಂಗತ.ವಿಠಲ ನಾಯ್ಕ ವಾಸ: ಇಂದ್ರಾಳಿ, ದುರ್ಗಾ ನಗರ, ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ, ಮಂಚಿ ಪೋಸ್ಟ್, ಉಡುಪಿ ತಾಲೂಕು & ಜಿಲ್ಲೆ ಹಾಲಿ ವಾಸ: ಟೋಲ್‌ನಾಕಾ, ಜನತ್ ನಗರ, ಧಾರವಾಡ 2 ನೇ ಅಡ್ಡ ರಸ್ತೆ, ಧಾರವಾಡ ತಾಲೂಕು ಮತ್ತು ಜಿಲ್ಲೆ ಹಾಗೂ ಆತನ ಹೆಂಡತಿ 2. ಪದ್ಮ ಪಾಮಡಿ ಪ್ರಾಯ 37 ವರ್ಷ ಗಂಡ :- ರಾಜೇಶ ನಾಯ್ಕ @ ರಾಜ @ ರಾಜು ಪಾಮಡಿ ಟೋಲ್‌ನಾಕಾ, ಜನತ್ ನಗರ , ಧಾರವಾಡ 2 ನೇ ಅಡ್ಡ ರಸ್ತೆ, ಹುಬ್ಬಳಿ ಧಾರವಾಡ ಜಿಲ್ಲೆ ಎಂಬವರನ್ನು ದಸ್ತಗಿರಿ ಮಾಡಿ ಅಪಾದಿತರು ಕುಂದಾಪುರ , ಉಡುಪಿ ನಗರ, ಮಣಿಪಾಲ , ಗಂಗೊಳ್ಳಿ , ದಾರಾವಾಢ ನಗರ ಠಾಣಾ ಸರಹದ್ದಿನಲ್ಲಿ ಕಳುವು ಮಾಡಿರುವ ಒಟ್ಟು 202 ಗ್ರಾಂ ತೂಕದ ಚಿನ್ನ ಹಾಗೂ ಒಟ್ಟು 1 ಕೆಜಿ. 683 ಗ್ರಾಂ ಬೆಳ್ಳಿ, 2 ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.

ಅಪಾದಿತ ರಾಜೇಶ್ @ ರಾಜ @ ರಾಜು ಉಡುಪಿ ಇಂದ್ರಾಳಿಯವನಾಗಿದ್ದು ಈತನ ಹೆಂಡತಿ ಧಾರವಾಡದಳಾಗಿರುತ್ತಾಳೆ. ಈ ಮೊದಲು ಕಾಪು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ಜೈಲಿನಲ್ಲಿದ್ದವನು ಕಳೆದ ಜುಲೈ 2020 ರಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡು ಬಂದ ಬಳಿಕ ತನ್ನ ಹೆಂಡತಿಯೊಂದಿಗೆ ಸೇರಿಕೊಂಡು ಕುಂದಾಪುರ , ಸುರತ್ಕಲ್ , ಮುಲ್ಕಿ, ಮಣಿಪಾಲ, ಗಂಗೊಳ್ಳಿ, ಭಟ್ಕಳ, ಮುರ್ಡೇಶ್ವರ , ಗೋಕರ್ಣ , ಕುಮಟಾ , ಹೊನ್ನಾವರ ಕಾರಾವಾರ ದಲ್ಲಿ ಮನೆ ಹಾಗೂ ದೇವಸ್ಥಾನಗಳಲ್ಲಿ ಮತ್ತು ,ದೈವಸ್ಥಾನದಲ್ಲಿ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿರುತ್ತಾನೆ.
ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ್ ಐಪಿಎಸ್. ರವರ ಅದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಕುಮಾರಚಂದ್ರ ಹಾಗೂ ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಂ ಶಂಕರ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಕುಂದಾಫುರ ವೃತ್ತ ನಿರೀಕ್ಷಕರಾದ ಶ್ರೀ ಗೋಪಿಕೃಷ್ಣ ಕೆ.ಆರ್ ರವರು ಈ ಪ್ರಕರಣದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿ ವಶದಲ್ಲಿದ್ದ ಹಾಗೂ ಧಾರಾವಾಡ ಜುವೆಲ್ಲರಿ ಅಂಗಡಿಗಳಲ್ಲಿ ಮಾರಾಟ ಮಾಡಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಅಪಾದಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಈ ಕಾರ್ಯಚರಣೆಯಲ್ಲಿ ಕುಂದಾಪುರ ಠಾಣಾ ಪಿ.ಎಸ್.ಐ. ಸದಾಶಿವ ಗವರೋಜಿ. ಕುಂದಾಪುರ ಸಂಚಾರ ಠಾಣಾ ಪಿ.ಎಸ್.ಐ. ಸುದರ್ಶನ್ , ಶಂಕರನಾರಾಯಣ ಪಿ.ಎಸ್.ಐ. ಶ್ರೀಧರ ನಾಯ್ಕ ಹಾಗೂ ಸಿಬ್ಬಂದಿಯವರಾದ ಮಂಜುನಾಥ, ಸಂತೋಷ, ರಾಘವೇಂದ್ರ ,ಸಿದ್ದಪ್ಪ ವೃತ್ತ ಕಚೇರಿಯ ಸಿಬ್ಬಂದಿಯವರಾದ ಸೀತಾರಾಮ, ವಿಕ್ಟರ್ , ಗುರುರಾಜ್ , ಉದಯ ಮಹಿಳಾ ಸಿಬ್ಬಂದಿಯವರಾದ ಬೇಬಿ, ಚಂದ್ರಾವತಿ , ಅಶ್ರೀತಾ ಮತ್ತು ಚಾಲಕರಾದ ಸಂತೋಷ ಪಾಲ್ಗೊಂಡಿರುತ್ತಾರೆ.
