ಕಾನೂನು ಪದವೀದರರಿಗೆ 04 ವರ್ಷಗಳ ಅವಧಿಯ ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ

 

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಕಾನೂನು ಪದವೀದರರಿಗೆ 04 ವರ್ಷಗಳ ಅವಧಿಯ ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ

 

 

ಕೋಲಾರ : ಕೋಲಾರ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2020-21ನೇ ಸಾಲಿಗೆ ಹಿಂದುಳಿದ ವರ್ಗಗಳ (ಪ್ರವರ್ಗ-1,2ಎ,3ಎ,3ಬಿ) ಸಮುದಾಯಕ್ಕೆ ಸೇರಿದ ಕಾನೂನು ಪದವೀದರರಿಂದ ಆಡಳಿತ ಯೋಜನೆಯಡಿ 4 ವರ್ಷಗಳ ಅವಧಿಯ ಕಾನೂನು ತರಬೇತಿಗೆ ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, (ಪ್ರತಿ ತಿಂಗಳು ತರಬೇತಿ ಭತ್ಯೆ ರೂ.4000) ಪ್ರವರ್ಗ-1ಕ್ಕೆ ವಯಸ್ಸು 31 ವರ್ಷ ಒಳಗಿರಬೇಕು, ಆದಾಯಮಿತಿ-3.50 ಲಕ್ಷ ಒಳಗಿರಬೇಕು, ಇತರೆ ಪ್ರವರ್ಗ 2ಎ, 3ಎ,3ಬಿ ಅಭ್ಯರ್ಥಿಗಳಿಗೆ ವಯಸ್ಸು 30 ಒಳಗಿರಬೇಕು, ಆದಾಯ ಮಿತಿ-2.50 ಲಕ್ಷ ಮೀರಿರಬಾರದು. ಸಂಬಂಧಿಸಿದ ದಾಖಲಾತಿಗಳನ್ನು (ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪದವಿ ಮತ್ತು ಕಾನೂನು ಪದವಿಗಳ ಅಂಕಪಟ್ಟಿಗಳ ದೃಢೀಕೃತ ಪ್ರತಿಗಳು ಹಾಗೂ ಬಾರ್ ಅಸೋಸಿಯೇಷನ್‍ನಲ್ಲಿ ನೊಂದಣಿಯಾಗಿರುವ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳು ಸೇರಿದಂತೆ) ಅಭ್ಯರ್ಥಿಯು ಅರ್ಜಿ ನಮೂನೆಯೊಂದಿಗೆ ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ದಿನಾಂಕ:06-07-2020 ರೊಳಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ: ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ಡಿ. ದೇವರಾಜ ಅರಸು ಭವನ, ಇ.ಟಿ.ಸಿ.ಎಂ ಆಸ್ಪತ್ರೆ ಮುಂಭಾಗ, ಕೋಲಾರಮ್ಮ ಕೆರೆ ಅಂಗಳ, ಕುರುಬರಪೇಟೆ, ಕೋಲಾರ ಟೌನ್. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:08152-222336 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.