ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಆರ್.ಅನಿಲ್‍ಕುಮಾರ್ ತಂಡದ ಮತಯಾಚನೆಗೆ ಚಾಲನೆ
ಕೋಲಾರ :- ಡಿ.15 ರಂದು ನಡೆಯಲಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ -2020 ಪ್ರಯುಕ್ತ ಆರ್.ಅನಿಲ್‍ಕುಮಾರ್ ತಂಡದ ಕೋಲಾರ ತಾಲೂಕು ಅಭ್ಯರ್ಥಿಗಳು ನಗರದ ಬಿಇಓ ಕಛೇರಿ ಆವರಣದಲ್ಲಿರುವ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಕರಪತ್ರ ಬಿಡುಗಡೆ ಮಾಡಿ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಮತಯಾಚನೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೋಲಾರ ತಾಲೂಕು ಅಭ್ಯರ್ಥಿಗಳಾದ ಆರ್,ಅನಿಲ್ ಕುಮಾರ್, ಎನ್.ಮುನಿರಾಜು, ಕೆ.ಟಿ.ನಾಗರಾಜ್, ಬಿ.ಎಂ.ನಾರಾಯಣಸ್ವಾಮಿ, ಸಿ.ಮುನಿರಾಜ, ಆರ್.ಆಂಜನೇಯಪ್ಪ, ಅಯಾಜ್ ಅಹಮದ್, ವಿ.ಚಂದ್ರಪ್ಪ, ಕೆ.ಸಿ. ಮುನಿರಾಜು. ಎನ್. ನಂಜುಂಡಗೌಡ, ಎಸ್. ಗೌರಮ್ಮ, ಜೆ.ಎನ್.ಹೇಮಲತ, ಜಯಲಕ್ಷ್ಮಿ, ಸಿ.ವಿ.ಮಂಜುಳ, ಆರ್.ಮಂಜುಳ, ಪದ್ಮಮ್ಮ.ಪಿ, ಆರ್.ಸವಿತ, ವರಲಕ್ಷ್ಮಮ್ಮ. ಹೆಚ್.ಸಿ.ಬೈರೆಗೌಡ, ಪಿ. ಕೋಟೇಶ್ವರ್‍ರಾವ್, ಕೆ.ಎಂ.ಮುನಿಸ್ವಾಮಿ, ಸಿ. ನಾರಾಯಣಸ್ವಾಮಿ, ಬಿ.ಸತೀಶ್ ಸೇರಿದಂತೆ ಶಿಕ್ಷಕ ಮುಖಂಡರಾದ ಹೆಚ್.ಎಂ.ಕೃಷ್ಣಪ್ಪ, ವೆಂಕಟಶಿವಪ್ಪ, ಕೆ.ಶ್ರೀನಿವಾಸ್, ಖಾದರ್ ಇಲಾಹಿ, ಶ್ರೀರಾಮ್, ಮಲ್ಲಿಕಾರ್ಜುನಯ್ಯ, ಎಂ.ಸುರೇಶ್ ಬಾಬು ಮುಂತಾದವರು ಉಪಸ್ಥಿತರಿದ್ದರು.