ಕಥೊಲಿಕ್ ಸಭಾ ಗಂಗೊಳ್ಳಿ ಘಟಕಕ್ಕೆ ನೂತನ ಪದಾಧಿಕಾರಿಗಳು – ಅಧ್ಯಕ್ಷರಾಗಿ ಎಲ್ಟನ್ ರೆಬೇರೊ
ಕುಂದಾಪುರ,ಮಾ.12: ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ, 2019-20 ರ ಸಾಲಿನ ಪದಾಧಿಕಾರಿಗಳ ಚುನಾವಣೆಯು ಇಗರ್ಜಿಯ ಸಭಾ ಭವನದಲ್ಲಿ ನೆಡೆಯಿತು. ಚುನಾವಣೆಯಲ್ಲಿ ಎಲ್ಟನ್ ರೆಬೇರೊ ಈ ಸಾಲಿನ ಅಧ್ಯಕ್ಷರಾಗಿ ಆಯ್ಕೆಗೊಂಡರು,
ನಿಕಟ ಪೂರ್ವ ಅಧ್ಯಕ್ಷರು ವಿಲ್ಸನ್ ರೆಬೇರೊ, ನಿಯೋಜಿತ ಅಧ್ಯಕ್ಷರಾಗಿ ಫ್ರಾನ್ಸಿಸ್ ಡಿಸೋಜಾ, ಉಪಾಧ್ಯಕ್ಷೆಯಾಗಿ ಸೆಲಿನ್ ವಿ ಲೋಬೊ, ಕಾರ್ಯದರ್ಶಿಯಾಗಿ ಗ್ಲ್ಯಾಡಿಸ್ ರೆಬೆಲ್ಲೊ, ಸಹ ಕಾರ್ಯದರ್ಶಿಯಾಗಿ ಗ್ಲೊರಿಯಾ ಡಿಸೋಜಾ, ಖಚಾಂಚಿಯಾಗಿ ಎಡ್ವರ್ಡ್ ಫೆರ್ನಾಂಡಿಸ್, ಸಹ ಖಚಾಂಚಿಯಾಗಿ ವಿಲ್ಸನ್ ಡಾಯಸ್, ಆಮ್ಚೊ ಸಂದೇಶ್ ಪ್ರತಿನಿಧಿಯಾಗಿ ಇಮಾನ್ಯೂವೇಲ್ ಡಿಸೋಜಾ, ರಾಜಕೀಯ ಸಂಚಾಲಕಾರಾಗಿ ಫೆಲಿಕ್ಸ್ ಫೆರ್ನಾಂಡಿಸ್ ಸರ್ಕಾರಿ ಸವಲತ್ತು ಸಂಚಾಲಕರಾಗಿ ರೆನಿಟಾ ಬಾರ್ನೆಸ್, ಲೆಕ್ಕ ಪರಿಶೋಧಕರಾಗಿ ರೋಶನ್ ಲೋಬೊ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜೆನ್ನಿ ಬುತೆಲ್ಲೊ, ಜಾಸ್ಮಿನ್ ವಾಜ್, ನವೀನ್ ರೆಬೇರೊ, ರೋಜಿ ಫೆರ್ನಾಂಡಿಸ್ ಮತ್ತು ರಾಜೇಶ್ ಡಾಯಸ್ ಆಯ್ಕೆಗೊಂಡರು. ಚುನಾವಣ ಪ್ರಕ್ರಿಯೆಯನ್ನು ಕುಂದಾಪುರ ವಲಯ ಖಚಾಂಚಿ ಫ್ಲಾಯ್ವನ್ ಡಿಸೋಜಾ ಮತ್ತು ನಿಯೋಜಿತೆ ಅಧ್ಯಕ್ಷೆ ಮೇಬಲ್ ಡಿಸೋಜಾ ನೆಡೆಸಿಕೊಟ್ಟರು. ಮಾಜಿ ಕೇಂದ್ರಿಯ ಅಧ್ಯಕ್ಷ ಕಿರಣ್ ಕ್ರಾಸ್ಟೊ ಚುನಾವಣಾ ಅಧಿಕಾರಿಗಳನ್ನು ಪರಿಚಯಿಸಿದರು ಅಧ್ಯಾತ್ಮಿಕ ನಿರ್ದೇಶಕರಾದ ವ|ಫಾ|ಆಲ್ಬರ್ಟ್ ಕ್ರಾಸ್ತಾ ‘ಸಮಾಜಕ್ಕೆ ಒಳಿತಾಗುವ ಒಳ್ಳೆಯ ಕೆಲಸಗಳನ್ನು ಮಾಡಿರಿ’ ಎಂದು ಶುಭ ಕೋರಿದರು.