ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕುಂದಾಪುರ, ಕೊಟೇಶ್ವರ 9 ಮಂದಿಯ ಬಂದನ : ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು – ಡೆಲ್ಲಿ ಕ್ಯಾಪಿಟಲ್ಸ್

JANANUDI.COM NETWORK

ಕುಂದಾಪುರ, ದಿನಾಂಕ 05/10/2020 ಕುಂದಾಪುರ ತಾಲೂಕು ಕೊಟೇಶ್ವರ  ಗ್ರಾಮದ  ಕುಂಬ್ರಿ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ  ಐಪಿಎಲ್    ಕ್ರಿಕೆಟ್  ಪಂದ್ಯಾಟದ  ಸೋಲು ಗೆಲುವಿನ  ಮೇಲೆ  ಬೆಟ್ಟಿಂಗ್ ನಡೆಸುತ್ತಿದ್ದಾರೆ  ಎಂದು  ಖಚಿತ ಮಾಹಿತಿ ಬಂದ ಮೇರೆಗೆ, ಕುಂದಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ.ಸದಾಶಿವ ಆರ್ ಗವರೋಜಿ ಠಾಣಾ ಸಿಬ್ಬಂದಿಯವರೊಂದಿಗೆ    ಕುಂಬ್ರಿ  ಬಸ್ ನಿಲ್ದಾಣದ  ಸಮೀಪ  20:00 ಗಂಟೆಗೆ  ತಲುಪಿದಾಗ  ಕುಂಬ್ರಿ  ಜಂಕ್ಷನ್‌ನ  ಬಳಿಯ ಸಾರ್ವಜನಿಕ  ಸ್ಥಳದಲ್ಲಿ   8 ಜನರು ನಿಂತುಕೊಂಡಿದ್ದು ಅವರ ಪೈಕಿ ಓರ್ವನು  ರಾಯಲ್ ಚಾಲೆಂಜರ್ಸ್ ಬೆಂಗಳೂರು ರೂ 1000ಕ್ಕೆ 1000 ರೂ, ಡೆಲ್ಲಿ ಕ್ಯಾಪಿಟಲ್ಸ್ 1000 ಕ್ಕೆ 1300 ಎಂದು ಜೋರಾಗಿ ಹೇಳುತ್ತಾ ನೋಟ್ ಪುಸ್ತಕದಲ್ಲಿ ವಿವರಗಳನ್ನು ಬರೆದುಕೊಳ್ಳುತ್ತಿದ್ದು ಇತರರು ಕೈಯಲ್ಲಿ ಹಣವನ್ನು ಹಿಡಿದುಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ರೂ 1000ಕ್ಕೆ 1000 ರೂ, ಡೆಲ್ಲಿ ಕ್ಯಾಪಿಟಲ್ಸ್ 1000 ಕ್ಕೆ 1300 ಎಂದು ಹೇಳುತ್ತಿರುವುದನ್ನು  ಗಮನಿಸಿ   ಇವರುಗಳು    ತಮ್ಮ  ಸ್ವಂತ  ಲಾಭಕ್ಕಾಗಿ ಕ್ರಿಕೆಟ್  ಪಂದ್ಯದ  ಮೇಲೆ  ಹಣವನ್ನು ಪಣವಾಗಿಟ್ಟು ಬೆಟ್ಟಿಂಗ್ ನಡೆಸುತ್ತಾ ಸಾರ್ವಜನಿಕರಿಂದ ಹಣ  ಸಂಗ್ರಹಿಸುತ್ತಿರುವುದು  ಕಂಡುಬಂದಿರುವುದರಿಂದ  ಧಾಳಿ ನಡೆಸಿ  ಆರೋಪಿತರನ್ನು ವಶಕ್ಕೆ ಪಡೆದು ಬೆಟ್ಟಿಂಗ್ ನಡೆಸಲು ಉಪಯೋಗಿಸಿದ ನಗದು ರೂ 17,000/-,  ರೆಡ್ ಮಿ ಮೊಬೈಲ್ ಫೋನ್-1  ಹಾಗೂ ಒಂದು ನೋಟ್ ಪುಸ್ತಕವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೇ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

     ಆರೋಪಿಗಳ ವಿವರಹೀಗಿದೆ ಪ್ರಸಾದ್ ಆಚಾರಿ 1) ಪ್ರಾಯ:29 ವರ್ಷ ತಂದೆ:ಗೋಪಾಲ ಆಚಾರಿ ವಾಸ:ಮಠದಬೆಟ್ಟು ರಸ್ತೆ,2 ನೇ ಕ್ರಾಸ್, ಕೊಟೇಶ್ವರ ಗ್ರಾಮ, 2)ಶರತ್ ಪ್ರಾಯ:28 ವರ್ಷ ತಂದೆ: ಶೀನ ವಾಸ: ಬ್ಯಾಲಿಹಿತ್ಲು ಬೀಜಾಡಿ,ಕೊಟೇಶ್ವರ ಗ್ರಾಮ,ಕುಂದಾಪುರ ತಾಲೂಕು 3) ಪ್ರಶಾಂತ್ ಪ್ರಾಯ: 29 ವರ್ಷ ತಂದೆ: ಸೀತಾರಾಮ ಆಚಾರಿ ವಾಸ:ಹದ್ರೋಳಿ ಕಮ್ತಿಯಾರ್ ಬೆಟ್ಟು ಕೊಟೆಶ್ವರ ಗ್ರಾಮ,ಕುಂದಾಪುರ ತಾಲೂಕು 4) ಪುರಂದರ ಪ್ರಾಯ: 40 ವರ್ಷ ತಂದೆ: ಸೀತಾರಾಮ ಆಚಾರಿ ವಾಸ: ಪಟಗಾರ್ ಮನೆ ಕುಂಭಾಶಿ ಗ್ರಾಮ,ಕುಂದಾಪುರ ತಾಲೂಕು 5) ಸಚಿನ್ ಆಚಾರಿ ಪ್ರಾಯ: 30 ವರ್ಷ ತಂದೆ: ಉಪೇಂದ್ರ ವಾಸ: ಮಠದಬೆಟ್ಟು ಕೊಟೇಶ್ವರ ಗ್ರಾಮ,ಕುಂದಾಪುರ ತಾಲೂಕು 6) ಸಂತೋಷ ಪ್ರಾಯ: 36 ವರ್ಷ ತಂದೆ: ಶಿವರಾಮ ಆಚಾರಿ ವಾಸ: ಶಿವಕೃಪಾ ದೊಡ್ಡೋಣಿ ರಸ್ತೆ, ಕೊಟೇಶ್ವರ ಗ್ರಾಮ,ಕುಂದಾಪುರ ತಾಲೂಕು7) ಹರೀಶ ಪ್ರಾಯ: 29 ವರ್ಷ ತಂದೆ: ಆನಂದ ವಾಸ: ಚಾತ್ರಬೆಟ್ಟು, ಕೊಟೇಶ್ವರ ಗ್ರಾಮ,ಕುಂದಾಪುರ ತಾಲೂಕು 8) ಸುಧಾಕರ ಪ್ರಾಯ: 35 ವರ್ಷ ತಂದೆ:ಲಕ್ಷ್ಮಣ ಮೊಗವೀರ ವಾಸ:ಬ್ಯಾಲಿಹಿತ್ಲು.ಬೀಜಾಡಿ ಕೊಟೇಶ್ವರ ಗ್ರಾಮ,ಕುಂದಾಪುರ ತಾಲೂಕು 9) ಪ್ರಸಾದ್ ಪೂಜಾರಿ ಪ್ರಾಯ: 25 ವರ್ಷ ತಂದೆ: ಆನಂದ ಪೂಜಾರಿ ವಾಸ: ಕೊರವಡಿ ಶಾಲೆ ಹತ್ತಿರ ಕುಂಭಾಶಿ ಗ್ರಾಮ,ಕುಂದಾಪುರ ತಾಲೂಕು.