ಎಲ್ಲಾ ಭಾಷೆಗಳಿಗೂ ಅದರದೇ ಆದ ಭಾಷಾ ಸೊಗಡು ವೈಶಿಷ್ಟ್ಯ ಮತ್ತು ಭೂಮಿಕೆ ಇದೆ : ಡಾ.ಸುಕನ್ಯಾ ಮೇರಿ.ಜೆ.

JANANUDI.COM NETWORK

ಎಲ್ಲಾ ಭಾಷೆಗಳಿಗೂ ಅದರದೇ ಆದ ಭಾಷಾ ಸೊಗಡು ವೈಶಿಷ್ಟ್ಯ ಮತ್ತು ಭೂಮಿಕೆ ಇದೆ : ಡಾ.ಸುಕನ್ಯಾ ಮೇರಿ.ಜೆ.

ಕುಂದಾಪುರ:ಎಲ್ಲಾ ಭಾಷೆಗಳಿಗೂ ಅದರದೇ ಆದ ಭಾಷಾ ಸೊಗಡು ವೈಶಿಷ್ಟ್ಯ ಮತ್ತು ಭೂಮಿಕೆ ಇದ್ದು ಪರಸ್ಪರ ಭಾಷೆಗಳ ಮಧ್ಯೆ ಭಾವ ಬಾವ ಭೇದಗಳಿಲ್ಲ ಎಂದು ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಕನ್ಯಾ ಮೇರಿ.ಜೆ. ಅವರು ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ “ಹಿಂದಿ ದಿವಸ್-ಜ್ಯೋತ್ಸ್ನಾ” ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಹಿಂದಿ ಭಾರತದ ಎಲ್ಲಾ ಪ್ರದೇಶಗಳಲ್ಲಿ ಉಪಯೋಗಿಸಲ್ಪಡುತ್ತಿರುವ ಜನಮಾನಸದ ಏಕೈಕ ಭಾಷೆ. ಅನೇಕ ರಾಜ್ಯಗಳಲ್ಲಿ ರಾಜಭಾಷೆಯಾಗಿ , ಕೆಲವು ರಾಜ್ಯಗಳಲ್ಲಿ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬಳಸಲಾಗುತ್ತಿದೆ. ವಿಶ್ವದ ಅನೇಕ ದೇಶಗಳಲ್ಲಿ ಜನರು ತಮ್ಮ ವ್ಯವಹಾರಕತೆಯಲ್ಲಿ ಹಿಂದಿಯನ್ನು ಬಳಸುತ್ತಿರುವುದಲ್ಲದೇ ಅನೇಕ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಹಿಂದಿಯನ್ನು ಪಠ್ಯಭಾಷೆಯಾಗಿಯೂ ಅಳವಡಿಸಿಕೊಂಡಿದ್ದಾರೆ. ವಿಶ್ವದ ಐದು ಸರ್ವೇ ಸಾಮಾನ್ಯ ಪ್ರಸಿದ್ಧ ಒರಚಲಿತ ಭಾಷೆಗಳಲ್ಲಿ ಹಿಂದಿ ಒಂದು ಶ್ರೇಷ್ಠ ಭಾಷೆ ಮತ್ತು ಭಾರತದ ಸರಳ ಸಿಂದರ ಸಾಂಸ್ಕøತಿಕ ನಿಲುವನ್ನು ಹೊಂದಿದೆ. ್ಲ. ಅದು ಮನುಷ್ಯನ ಅಂತರ್ಯದ ಮಿಡಿತದ ಭಾವ ಸ್ಫರಣದ ಕೊಂಡಿ ಎಂಬುದು ವಾಸ್ತವ ಸತ್ಯ. ಹಿಂದಿ ಇಡಿ ಭಾರತ ಮತ್ತು ವಿಶ್ವದ ಜನರನ್ನು ಒಂದು ಆವರಣದಲ್ಲಿ ಸೇರಿಸುವ ಕಾರ್ಯವಾಹಿನಿಯ ಸೆಲೆಯಾಗಿದ್ದು ಜನರಿಗೆ ಸರಳ ರೀತಿಯಲ್ಲಿ ಬೆರೆತು ಬದುಕುವುದಕ್ಕೆ ಸಹಕಾರಿಯಾಗುವ ಒಂದಿ ಮಾಧ್ಯಮ. ಈ ದೃಷ್ಠಿಯಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆ ಎಂಬುದು ನವiಗೆ ಹೆಮ್ಮೆಯೇ ಹೊರತು ಕೀಳರಿಮೆಯೂ ಇಲ್ಲ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಹಿಂದಿ ವಿಬಾಗದ ಮುಖ್ಯಸ್ಥೆ ಪ್ರಫುಲ್ಲಾ .ಬಿ ಸ್ವಾಗತಿಸಿದರು. , ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಿ.ಎಂ.ಗೊಂಡ ವಂದಿಸಿದರು.
ಕಾಲೇಜಿನಲ್ಲಿ ನಡೆದ “ಹಿಂದಿ ದಿವಸ್-ಜ್ಯೋತ್ಸ್ನಾ ಪ್ರಯುಕ್ತ ನಡೆದ ಹಿಂದಿ ಭಾಷಣ, ಬೀದಿನಾಟಕ, ಪ್ರಬಂಧ, ದೇಶಭಕ್ತಿ, ಸಮೂಹ ಗಾಯನ, ಮತ್ತು ಹನುಮಾಣ್ ಚಾಲೀಸ್ ಕಂಠಪಾಠ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಹಿಂದಿ ಪ್ರಾಧ್ಯಾಪಕಿ ಅಶ್ವಿನಿ ಪೂಜಾರಿ ವಿಜೇತರ ವರದಿ ವಾಚಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.