ಎಪಿಎಂಸಿ ಕಾಯ್ದೆ ತಿದ್ದುಪಡಿ: ರೈತರಿಗೆ ಅನ್ಯಾಯ ಕಾಯಿದೆ ತಿದ್ದುಪಡಿಯ ವಿರುದ್ಧ ರೈತರೇ ಹೋರಾಟ ಮಾಡಬೇಕು: ಕುರ್ಕಿ ರಾಜೇಶ್ವರಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

ಎಪಿಎಂಸಿ ಕಾಯ್ದೆ ತಿದ್ದುಪಡಿ: ರೈತರಿಗೆ ಅನ್ಯಾಯ ಕಾಯಿದೆ ತಿದ್ದುಪಡಿಯ ವಿರುದ್ಧ ರೈತರೇ ಹೋರಾಟ ಮಾಡಬೇಕು: ಕುರ್ಕಿ ರಾಜೇಶ್ವರಿ

 

 

 

ಕೋಲಾರ,ಮೇ.14- ಎಪಿಎಂಸಿ ಕಾಯಿದೆಯ ತಿದ್ದುಪಡಿಯಿಂದ ರೈತರು ಉದ್ಧಾರವಾಗುವುದಿಲ್ಲ, ರೈತರು ಉಳಿಯಬೇಕಾದರೆ ಈ ಕಾಯಿದೆ ತಿದ್ದುಪಡಿಯ ವಿರುದ್ಧ ರೈತರೇ ಹೋರಾಟ ಮಾಡಬೇಕು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ದೊಡ್ಡ ದೊಡ್ಡ ಕಂಪನಿಗಳಿಗೆ ಅನುಕೂಲ ಮಾಡಲು ಈ ಕಾನೂನು ತರಲು ಮುಂದಾಗಿದ್ದಾರೆ. ದೇಶದಲ್ಲಿ ಕಾಯ್ದೆಯ ಪ್ರಕಾರ ರೈತರಿಗೆ 5 ಕಿ.ಲೋ ವ್ಯಾಪ್ತಿಯಲ್ಲಿ ಎ.ಪಿಎಂ.ಸಿ ಒದಗಿಸಬೇಕಾದರೆ 42 ಸಾವಿರ ಎ.ಪಿ.ಎಂಸಿಗಳಿರಬೇಕು ಆದರೆ ಇಂದು ಕೇವಲ 7 ಸಾವಿರ ಎ.ಪಿ.ಎಂಸಿಗಳಿವೆ. ರೈತರಿಗೆ ವಿಶಾಲ ಜಾಗವನ್ನು ನೀಡುವ ಬಗ್ಗೆ ಸರ್ಕಾರ ಸಮಾಲೋಚನೆ ಮಾಡಬೇಕು ಎಂದಿದ್ದಾರೆ.
ದೇಶ್ಯಾದ್ಯಂತ ಕೊರೋನಾ ತಾಂಡವ ಆಡುತ್ತಿದೆ. ಕೊರೋನಾ ಹರಡುವಿಕೆ ತಡೆಯುವತ್ತ ಲಕ್ಷ್ಯವಹಿಸಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಜನ ಲಾಕ್‍ಡೌನ್, ಸಾಮಾಜಿಕ ಅಂತರದ ಪಾಲನೆ ಮಾಡಿದ್ದಾರೆ. ಶೇ.80ರಷ್ಟು ಜನ ಸರ್ಕಾರದ ಎಲ್ಲಾ ಆದೇಶಕ್ಕೆ ಸ್ಪಂದನೆ ಮಾಡಿದ್ದಾರೆ. ಆದರೆ ಜನರು ಪ್ರಾರಂಭದಲ್ಲಿ ತೋರಿಸಿದ ವೇಗ ಈಗ ಕಡಿಮೆ ಆಗಿದೆ. ರಾಜ್ಯದಲ್ಲಿ ಅನೇಕ ನಿಯಮ ಸಡಿಲಿಕೆ ಮಾಡಿದ್ದಾರೆ. ದಿನಕ್ಕೊಂದು ನಿರ್ಧಾರವನ್ನು ತೆಗೆದುಕೊಂಡು ಜನರಿಗೆ ಸರ್ಕಾರ ಗೊಂದಲ ಮೂಡಿಸಿದೆ ಎಂದಿದ್ದಾರೆ.
ಎಪಿಎಂಸಿಯ 2017ರ ಕಾಯ್ದೆಗೆ ಪ್ರಮುಖ ಅಂಶಗಳ ತಿದ್ದು ಪಡಿಯನ್ನು ತಂದು ಸಂಪೂರ್ಣವಾಗಿ ದೇಶಾದ್ಯಂತ ಎಪಿಎಂಸಿಗಳನ್ನು ಸರ್ವನಾಶ ಮಾಡಿ ಅದನ್ನೇ ನಂಬಿರುವ ಕೋಟ್ಯಾಂತರ ರೈತರನ್ನು ಬೀದಿಗೆ ತಳ್ಳುವ ಕಾಯ್ದೆ ಜಾರಿಗೆ ತಂದು ಕಾರ್ಪೊರೇಟ್ ಕಂಪನಿಗಳು ಹಾಗೂ ವರ್ತಕರಿಗೆ ಅನುಕೂಲವಾ ಗಿಸಿ ರೈತರಿಗೆ ತೂಕ, ಗುಣಮಟ್ಟಕ್ಕೆ ತಕ್ಕ ಬೆಲೆ ಸಿಗದೆ ಕಾರ್ಪೊರೇಟ್ ಕಂಪನಿಗಳು ನಿರ್ಧಾರ ಮಾಡುವ ಬೆಲೆಗೆ ರೈತರು ತಮ್ಮ ಉತ್ಪನ್ನಗಳನ್ನು ನೀಡಬೇಕಾಗುವ ಪರಿಸ್ಥಿತಿ ಬರುತ್ತದೆ ಎಂದಿದ್ದಾರೆ.
ದೇಶಾದ್ಯಂತ ರೈತರು, ಕೃಷಿ ಕೂಲಿಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದರೆ ಸರ್ಕಾರಗಳು ಮಾತ್ರ ರೈತಕುಲವನ್ನೇ ನಾಶ ಮಾಡುವ ಆದೇಶಗಳಾದ ನೂರಾರು ರೈತ ವಿರೋಧಿ ಕಾನೂನುಗಳಿಂದ ರೈತರು ಬೀದಿಗೆ ಬಿದ್ದಿದ್ದಾರೆ.
ಪ್ರಧಾನಿಗಳ ಜನವಿರೋಧಿ ಕೆಲಸಗಳಿಗೆ ಯಡಿಯೂರಪ್ಪ ಕೈಜೋಡಿಸಬಾರದು. ಎಪಿಎಂಸಿ ಕಾಯಿದೆ ರೈತರ ಮೂಲಕ್ಕೆ ತೊಂದರೆ ಮಾಡುವುದಾಗಿದೆ. ರೈತರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಮಾಡುವ ಅಗತ್ಯವೇನಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಪ್ರಶ್ನಿಸಿದ್ದಾರೆ.